ಪಶು-ಪಕ್ಷಿಗಳಿಗೆ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಚೈತನ್ಯದಿಂದ ಬಂದ ಅನುಭವಗಳು !

ಮೃತ್ಯುವಿನ ನಂತರ ಸದ್ಗತಿ ಸಿಗಬೇಕೆಂದು, ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಳ ಇವರ ಚರಣಗಳಿಂದ ಪ್ರಕ್ಷೇಪಿಸುವ ಚೈತನ್ಯ ಗ್ರಹಿಸಿ ಪಾತರಗಿತ್ತಿಯು ಚರಣಗಳ ಮೇಲೆಯೇ ಪ್ರಾಣ ತ್ಯಜಿಸಿದ್ದು ವೈಶಿಷ್ಟ್ಯಪೂರ್ಣವಾಗಿದೆ !

 

ಚೆನ್ನೈಯಲ್ಲಿ ಜಿಂಕೆಯ ಬಗ್ಗೆ ಪ್ರೀತಿಯನ್ನು ವ್ಯಕ್ತ ಪಡಿಸುತ್ತಿರುವ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ! ಜಿಂಕೆಯು ಚಂಚಲ ಪ್ರಾಣಿಯಾಗಿದ್ದರೂ ಅದು ನಿಂತು ಅವರಿಗೆ ಸ್ಪಂದಿಸಿತು !

 

ಸಂತರ ಚೈತನ್ಯದ ಕಡೆಗೆ ಸಾತ್ತ್ವಿಕ ಪಶು-ಪಕ್ಷಿಗಳು ಆಕರ್ಷಿತವಾಗುತ್ತವೆ. ಚೈತನ್ಯದಿಂದಾಗಿಯೇ ಸಂತರ ಸಹವಾಸದಲ್ಲಿ ಪಶು-ಪಕ್ಷಿಗಳಿಗೆ ಭಯ ಅಥವಾ ಅಸುರಕ್ಷಿತ ಅನಿಸುವುದಿಲ್ಲ. ಅವು ಇಂತಹ ಸ್ಥಳಗಳಲ್ಲಿ ಸಹಜವಾಗಿ ಓಡಾಡುತ್ತವೆ. ಹಿಂದೆ ಋಷಿ-ಮುನಿಗಳ ಆಶ್ರಮದಲ್ಲಿ ಕಾಡುಪ್ರಾಣಿಗಳೂ ಸಹಜವಾಗಿಯೇ ಅಲೆದಾಡುತ್ತಿದ್ದವು. ಅವುಗಳಿಂದ ಸಂತರಿಗೆ ಮತ್ತು ಅವರ ಶಿಷ್ಯರಿಗೆ ಯಾವುದೇ ರೀತಿಯ ಅಪಾಯ ಇರುತ್ತಿರಲಿಲ್ಲ, ಅಲ್ಲದೇ ಈ ಪ್ರಾಣಿಗಳು ಸಂತರ ಪರಿಸರದ ರಕ್ಷಣೆಯನ್ನು ಮಾಡುತ್ತಿದ್ದವು. ಸಾಮಾನ್ಯವಾಗಿ ಮನುಷ್ಯರಿಗೆ ತೊಂದರೆಗಳನ್ನು ಕೊಡುವ ಪಶು-ಪಕ್ಷಿಗಳು ಸಂತರ ಸಹವಾಸದಲ್ಲಿ ಯಾವುದೇ ತೊಂದರೆಗಳನ್ನು ಕೊಡುವುದಿಲ್ಲ, ತದ್ವಿರುದ್ಧ ಸಂತರಲ್ಲಿನ ಚೈತನ್ಯವನ್ನು ಸೆಳೆದುಕೊಳ್ಳಲು ಅವು ಪ್ರಯತ್ನಿಸುತ್ತವೆ. ಇದು ಸಂತರ ಸಂತತ್ವಕ್ಕೆ ನಿಸರ್ಗವು ನೀಡಿರುವ ಒಂದು ಪಾವತಿಯಾಗಿದೆ.

ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಆಠವಲೆಯವರ ಸಹವಾಸದಲ್ಲಿ ಸಾತ್ತ್ವಿಕ ಪ್ರಾಣಿಗಳು ಹೇಗೆ ಆನಂದ ಮತ್ತು ಭಾವದ ಸ್ಥಿತಿಯನ್ನು ಅನುಭವಿಸುತ್ತವೆ, ಎಂಬುದನ್ನು ನಾವು ಈ ಮೊದಲೇ ನೋಡಿದ್ದೇವೆ. ಈಗ ಅದೇ ರೀತಿಯ ಅನುಭೂತಿಗಳು ಪರಾತ್ಪರ ಗುರು ಡಾ. ಆಠವಲೆಯವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಾದ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರ ಸಹವಾಸದಲ್ಲಿಯೂ ಅನುಭವಿಸಲು ಸಿಗುತ್ತಿವೆ. ಈ ಕುರಿತು ಕೆಲವು ಸಾಂದರ್ಭಿಕ ಉದಾಹರಣೆಗಳನ್ನು ಇಂದು ನೋಡೋಣ !

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರ ಕಡೆಗೆ ಸಾತ್ತ್ವಿಕ ಪಶು-ಪಕ್ಷಿಗಳು ತಾವಾಗಿಯೇ ಆಕರ್ಷಿತವಾಗುವುದು

ಶ್ರೀ ಸ್ನೇಹಲ್ ರಾವುತ

ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳರ ಪಕ್ಕದಲ್ಲಿ ಬಂದು ಕುಳಿತಿರುವ ಮತ್ತು ದೃಷ್ಟಿಯನ್ನು ಕೆಳಗೆ ಮಾಡಿದ ವಾನರ ಮಹರ್ಷಿಗಳು ಹೇಳಿದಂತೆ ಸನಾತನದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುತ್ತಿರುತ್ತಾರೆ. ಅನೇಕ ಪ್ರಾಚೀನ ದೇವಾಲಯಗಳಿಗೆ ಹೋಗಿ ಅವರು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ದೇವತೆಗಳ ಆಶೀರ್ವಾದವನ್ನು ಪಡೆಯುತ್ತಾರೆ. ಈ ದೈವಿ ಪ್ರವಾಸದಲ್ಲಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಗೆ ಅನೇಕ ಆಧ್ಯಾತ್ಮಿಕ ಅನುಭೂತಿಗಳು ಬರುತ್ತವೆ, ಹಾಗೆಯೇ ಅವರ ಸಂದರ್ಭದಲ್ಲಿ ಕೆಲವು ಬುದ್ಧಿಗೆ ನಿಲುಕದ ಘಟನೆಗಳೂ ನಡೆಯುತ್ತವೆ. ಅದರಲ್ಲಿ ಒಂದು ಯಾವಾಗಲೂ ಬರುವ ಅನುಭೂತಿ ಎಂದರೆ ಮಾನವರು ವಾಸಿಸುವ ಸ್ಥಳಗಳಲ್ಲಿ ಬರಲು ಹೆದರುವ ಅನೇಕ ಪಶು-ಪಕ್ಷಿಗಳು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಅತ್ಯಂತ ಸಮೀಪ ಬರುತ್ತವೆ. ಅವರ ಸಹವಾಸದಲ್ಲಿ ಈ ಸಾತ್ವಿಕ ಪಶು-ಪಕ್ಷಿಗಳಿಗೆ ಅಸುರಕ್ಷಿತ ಅನಿಸುವುದಿಲ್ಲ, ಇದು ವಿಶೇಷ !

ಶ್ರೀಚಿತ್‍ಶಕ್ತಿ (ಸೌ.) ಗಾಡಗೀಳರ ಪಕ್ಕದಲ್ಲಿ ಬಂದು ಕುಳಿತಿರುವ ಮತ್ತು ದೃಷ್ಟಿಯನ್ನು ಕೆಳಗೆ ಮಾಡಿದ ವಾನರ

ಭಗವಂತನ ಕೃಪೆಯಿಂದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಅಲೌಕಿಕತ್ವವನ್ನು ತೋರಿಸುವ ಈ ಅನುಭೂತಿಗಳನ್ನು ನಾವು ಹಲವಾರು ಬಾರಿ ಅನುಭವಿಸಿದ್ದೇವೆ. ಅದರಲ್ಲಿನ ಕೆಲವು ಮಹತ್ವದ ಉದಾಹರಣೆಗಳನ್ನು ಇಲ್ಲಿ ನೀಡುತ್ತಿದ್ದೇವೆ.

೧. ಸಪ್ತರ್ಷಿಗಳು ಹೇಳಿದಂತೆ ೫.೩.೨೦೨೦ ರಂದು ಸಂಜೆ ೬ ಗಂಟೆಗೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರು ಪಾಲಘರ ಜಿಲ್ಲೆಯ ಡಹಾಣುನಲ್ಲಿರುವ ಶ್ರೀ ಮಹಾಲಕ್ಷ್ಮೀ ಕೋಟೆಯ ಕೆಳಗಿನ ಶ್ರೀ ಮಹಾಲಕ್ಷ್ಮೀ ದೇವಿಯ ದೇವಸ್ಥಾನಕ್ಕೆ ಹೋಗಿ ದೇವಿಯ ದರ್ಶನ ಪಡೆದರು. ದೇವಿಯ ದರ್ಶನ ಪಡೆದು ಬಂದ ನಂತರ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಕಾಕು ವಾಹನದಲ್ಲಿ ಬಂದು ಕುಳಿತರು. ಆ ಸಮಯದಲ್ಲಿ ಒಂದು ಹಸು ಮತ್ತು ಕೆಲವು ಶ್ವಾನಗಳು (ನಾಯಿಗಳು) ವಾಹನದ ಬಳಿ ಬಂದಿದ್ದವು. ನಂತರ ನಾವು ವಾಹನದ ಬಳಿ ಬಂದು ನೋಡಿದರೆ, ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳಕಾಕು ಆ ಪ್ರಾಣಿಗಳಿಗೆ ಏನೋ ತಿನ್ನಲು ಕೊಡುತ್ತಿದ್ದರು.

೨. ತಮಿಳುನಾಡುವಿನ ಇಂಗೂಯೀಮಲೈಯಲ್ಲಿ ‘ಶ್ರೀಮರಗದಾ ಚಲೇಶ್ವರ’ ಹೆಸರಿನ ಒಂದು ಶಿವನ ದೇವಾಲಯವಿದೆ. ೧೨.೩.೨೦೨೦ ರಂದು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರು ಆ ದೇವಾಲಯದಲ್ಲಿನ ದೇವರ ದರ್ಶನ ಪಡೆದು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಪ್ರಾರ್ಥನೆ ಮಾಡಿ ದೇವರಿಗೆ ಪ್ರದಕ್ಷಿಣೆ ಹಾಕುವಾಗ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರು ದೇವಾಲಯದ ಹಿಂದೆ ಹೋದರು. ದೇವಾಲಯದ ಹಿಂದೆ ಒಂದು ಗೂಬೆ ಕುಳಿತಿತ್ತು. ಶ್ರೀಚಿತ್‌ಶಕ್ತಿ (ಸೌ. ಅಂಜಲಿ ಗಾಡಗೀಳ ಇವರು ಗೂಬೆಯ ಹತ್ತಿರ ಹೋದರೂ ಆ ಗೂಬೆ ಅಲ್ಲಿಂದ ಹೋಗಲಿಲ್ಲ.

೩. ಕೆಲವು ಜಿಜ್ಞಾಸುಗಳನ್ನು ಸಂಪರ್ಕಿಸಲು ನಾವು ೧೮.೧೨.೨೦೨೧ ರಂದು ಚೆನ್ನೈನ ಭಾರತೀಯ ತಂತ್ರಜ್ಞಾನ ಸಂಸ್ಥೆ (Indian Institute of Technology Madras) ಗೆ ಹೋಗಿದ್ದೆವು. ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಕಾಕು ಆ ಮಾರ್ಗದಿಂದ ಮುಂದೆ ಹೋಗುತ್ತಿರುವಾಗ ಅಲ್ಲಿ ಮೇಯುತ್ತಿದ್ದ ಜಿಂಕೆಗಳು ಹೆದರಿ ಓಡಿ ಹೋಗಲಿಲ್ಲ. ಅನಂತರ ಶ್ರೀಚಿತ್‌ಶಕ್ತಿ ಕಾಕುರವರು ಅವುಗಳ ಮೈಮೇಲೆ ಕೈಯನ್ನು ಆಡಿಸಿದರೂ ಅವು ಸ್ವಲ್ಪವೂ ಹೆದರಲಿಲ್ಲ, ಇದು ವಿಶೇಷವಾಗಿದೆ !

೪. ೨೦೨೦ ರಲ್ಲಿ ನಾವು ಆಂಧ್ರಪ್ರದೇಶದ ಅಹೊಬಿಲಮ್‌ನಲ್ಲಿನ ನವನರಸಿಂಹನ ದರ್ಶನಕ್ಕೆ ಹೋಗಿದ್ದೆವು. ಆಗ ಒಂದು ವಾನರವು (ಮಂಗ) ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರ ಬಳಿ ಬಂದು ಕುಳಿತುಕೊಂಡಿತು. ಅದರ ಮುಖದಲ್ಲಿ ಅತ್ಯಂತ ಶಾಂತ ಭಾವವಿತ್ತು. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರು ಅದರ ಪಕ್ಕದಲ್ಲಿ ನಿಂತಿದ್ದರೂ ಅದರ ದೃಷ್ಟಿ ಕೆಳಗಿತ್ತು. ಅದರಲ್ಲಿ ಶಿಷ್ಯಭಾವ ಜಾಗೃತವಾಗಿದೆ ಎಂದೆನಿಸುತ್ತಿತ್ತು.

ಶ್ರೀಚಿತ್‌ಶಕ್ತಿ (ಸೌ.)ಅಂಜಲಿ ಗಾಡಗೀಳರ ಮುಖದ ಮೇಲಿನ ತೇಜದಿಂದ ಅವರಲ್ಲಿನ ಸಂತತ್ವವು ಸಹಜವಾಗಿ ಅರಿವಾಗುತ್ತದೆ. ಈ ಅನುಭೂತಿಗಳಿಂದ ಪಶು-ಪಕ್ಷಿ ಮತ್ತು ನಿಸರ್ಗವೂ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರ ಚೈತನ್ಯವನ್ನು ಅರಿತುಕೊಳ್ಳುತ್ತವೆ, ಎಂಬುದು ಗಮನಕ್ಕೆ ಬರುತ್ತದೆ.

– ಶ್ರೀ. ಸ್ನೇಹಲ ರಾವುತ (೧೩.೫.೨೦೨೨)

ಭಗವಂತನ ಕೃಪೆಯಿಂದ ನಡೆಯುತ್ತಿರುವ ಭಕ್ತಿಸತ್ಸಂಗದಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರ ದೈವೀ ವಾಣಿಯಲ್ಲಿನ ಚೈತನ್ಯವನ್ನು ಅನುಭವಿಸುವ ಪಕ್ಷಿ !

ಭಕ್ತಿಸತ್ಸಂಗವನ್ನು ಕೇಳಲು ಬಂದಿದ್ದ ಹಾರ್ನಬಿಲ ಪಕ್ಷಿ

೧. ಭಕ್ತಿಸತ್ಸಂಗ ನಡಯುತ್ತಿರುವಾಗ ಒಂದು ಪಕ್ಷಿ ಕಿಟಕಿಯ ಮೇಲೆ ಬಂದು ಶಾಂತವಾಗಿ ಕುಳಿತುಕೊಳ್ಳುವುದು

೨೩.೯.೨೦೨೧ ಈ ದಿನದಂದು ಆನ್‌ಲೈನ್ ಭಕ್ತಿಸತ್ಸಂಗದಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ‘ಆಕಾಶ ತತ್ತ್ವಕ್ಕೆ ಸಂಬಂಧಿಸಿದ ಮುಂದೆ ಬರುವ ವಿಪತ್ತುಗಳು ಮತ್ತು ಆ ಸಮಯದಲ್ಲಿ ಭಾವದ ಸ್ತರದಲ್ಲಿ ಮಾಡಬೇಕಾದ ಪ್ರಯತ್ನ’ ಈ ವಿಷಯದ ಬಗ್ಗೆ ಮಾರ್ಗದರ್ಶನ ಮಾಡುತ್ತಿದ್ದರು. ಆ ಸಮಯದಲ್ಲಿ ಒಂದು ಸ್ಥಳದಲ್ಲಿ ೩ ಜನ ಸಾಧಕಿಯರು ಸಂಚಾರವಾಣಿಯಲ್ಲಿ ಸತ್ಸಂಗವನ್ನು ಕೇಳುತ್ತಿದ್ದರು. ಆ ಸಮಯದಲ್ಲಿ ಅವರ ಕೋಣೆಯ ಕಿಟಕಿಯ ಗ್ರಿಲ್ ಮೇಲೆ ಒಂದು ಪಕ್ಷಿ ಬಂದು ಕುಳಿತುಕೊಂಡಿತು. ಆ ಪಕ್ಷಿಯು ಶಾಂತವಾಗಿ ಕುಳಿತಿತ್ತು. ಅದು ಕುತ್ತಿಗೆಯನ್ನು ಅಲುಗಾಡಿಸಿ ‘ಧ್ವನಿ ಯಾವ ದಿಕ್ಕಿನಿಂದ ಬರುತ್ತಿದೆ ?’, ಎಂಬುದನ್ನು ಹುಡುಕುತ್ತಿತ್ತು. ಆ ಪಕ್ಷಿಯತ್ತ ನೋಡಿದರೆ ‘ಅದು ಭಕ್ತಿ ಸತ್ಸಂಗವನ್ನು ಕೇಳಲು ಬಂದಿದೆ’, ಎಂದು ಆ ಸಾಧಕಿಯರಿಗೆ ಅನಿಸಿತು.

೨. ಪಕ್ಷಿಯು ಕೂಗುವ ಮೂಲಕ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಮಾತುಗಳಿಗೆ ಸ್ಪಂದಿಸುತ್ತಿತ್ತು.

ಸತ್ಸಂಗದಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ‘ದ್ವಾಪರಯುಗದಲ್ಲಿನ ಯುದ್ಧಸ್ಥಿತಿ ಮತ್ತು ಕಲಿಯುಗದಲ್ಲಿನ ಆಪತ್ಕಾಲ’, ಈ ವಿಷಯದ ಬಗ್ಗೆ ಹೇಳುತ್ತಿದ್ದರು. ಅವರು ‘ದ್ವಾಪರಯುಗದಲ್ಲಿಯೇ ಇಷ್ಟೊಂದು ಮಹಾ ಭಯಂಕರ ಸ್ಥಿತಿ ಇತ್ತು’, ಎಂದು ಹೇಳುತ್ತಲೇ ಆ ಪಕ್ಷಿಯು ದೊಡ್ಡ ಧ್ವನಿಯಲ್ಲಿ ಕೂಗುತ್ತಾ ಅದಕ್ಕೆ ಓ ಗೊಟ್ಟಿತು. ಈ ಸಂದರ್ಭದಲ್ಲಿ ನಮಗಿಬ್ಬರಿಗೂ, ‘ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ದೈವೀ ಚೈತನ್ಯದಾಯಕ ವಾಣಿ ಮತ್ತು ಪರಮ ಚೈತನ್ಯಮಯ ಭಕ್ತಿಸತ್ಸಂಗದತ್ತ ಆ ಪಕ್ಷಿ ಆಕರ್ಷಿತವಾಗಿದೆ ಮತ್ತು ಅದು ಸತ್ಸಂಗರೂಪಿ ಮಧುರ ರಸವನ್ನು ಸೇವಿಸುತ್ತಿದೆ ಎಂದು ಅನಿಸಿತು.

೩. ‘ಪಕ್ಷಿಯ ರೂಪದಲ್ಲಿ ತನ್ನ ಉದ್ಧಾರಕ್ಕಾಗಿ ಒಂದು ಜೀವ ಬಂದಿದೆ’, ಎಂದು ಅನಿಸುವುದು

ಆ ಪಕ್ಷಿ ‘Sri Lanka grey hornbill ಎಂಬುದು ಗಮನಕ್ಕೆ ಬಂದಿತು. ಆ ಪಕ್ಷಿಯ ಕುರಿತು ವಿಡಿಯೋ ನೋಡಿದ ನಂತರ ಆ ಪಕ್ಷಿ ಚಂಚಲ ಮತ್ತು ಅಸ್ಥಿರವಾಗಿರುತ್ತದೆ ಎಂಬುದು ಗಮನಕ್ಕೆ ಬಂದಿತ್ತು. ಸಾಧಕಿಯರ ಕೋಣೆಯ ಕಿಟಕಿಯ ಮೇಲೆ ಕುಳಿತಿದ್ದ ಆ ಪಕ್ಷಿ ಸತ್ಸಂಗವನ್ನು ಕೇಳುತ್ತಿರುವಾಗ ಅತ್ಯಂತ ಶಾಂತವಾಗಿ ಕುಳಿತಿತ್ತು. ‘ಆ ಪಕ್ಷಿಯ ಮಾಧ್ಯಮದಿಂದ ತನ್ನ ಉದ್ಧಾರವನ್ನು ಮಾಡಿಕೊಳ್ಳಲು ಯಾವುದಾದರೊಂದು ಜೀವ ಇಲ್ಲಿ ಬಂದಿತ್ತು’, ಎಂದು ನಮಗೆ ಅನಿಸಿತು.

‘ಪಕ್ಷಿಯು ಸತ್ಸಂಗವನ್ನು ಕೇಳುವುದು ಇದು ಭಗವಂತನ ಸೂಕ್ಷ್ಮ ಕಾರ್ಯದ ಸ್ಥೂಲದಲ್ಲಿನ ಪ್ರಚೀತಿಯಾಗಿದೆ’, ಎಂದೆನಿಸಿತು. ಭಗವಂತನು ನೀಡಿದ ಈ ದಿವ್ಯ ಅನುಭೂತಿಗಾಗಿ ಕೋಟಿ ಕೋಟಿ ಕೃತಜ್ಞತೆಗಳು !

– ಕು. ವೈಷ್ಣವಿ ವೆಸಣೆಕರ (೨೨ ವರ್ಷ, ಆಧ್ಯಾತ್ಮಿಕ ಮಟ್ಟ ಶೇ. ೬೫) ಮತ್ತು ಕು. ಯೋಗಿತಾ ಪಾಲನ, ರಾಮನಾಥಿ, ಗೋವಾ. (೨೧.೧೨.೨೦೨೧)