ಟೈ ಧರಿಸುವ ವೈದ್ಯರು !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ ‘ಕೆಲವು ವೈದ್ಯರು ಆಂಗ್ಲ ಭಾಷೆಯಲ್ಲಿ ಆಯುರ್ವೇದ ಕಲಿಸುತ್ತಾರೆ; ಚಿಕಿತ್ಸಾಲಯದಲ್ಲಿ ಸಾತ್ತ್ವಿಕ ಉಡುಪಿನ ಬದಲು ಟೈ ಪ್ಯಾಂಟ್, ಶರ್ಟ್ ಧರಿಸುತ್ತಾರೆ. ಅವರನ್ನು ಅನುಕರಿಸಿ ಭವಿಷ್ಯದಲ್ಲಿ ದೇವಸ್ಥಾನಗಳ ಅರ್ಚಕರೂ ಪ್ಯಾಂಟ್ ಧರಿಸತೊಡಗಿದರೆ ಆಶ್ಚರ್ಯವಿಲ್ಲ ! ಇದನ್ನು ತಡೆಯಲು ಹಿಂದೂ ರಾಷ್ಟ್ರ ಆವಶ್ಯಕ. – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಬುದ್ಧಿಪ್ರಾಮಾಣ್ಯವಾದಿಗಳ ಬಹುದೊಡ್ಡ ಎರಡು ದೋಷಗಳೆಂದರೆ, ಜಿಜ್ಞಾಸೆಯ ಅಭಾವ ಮತ್ತು ‘ನನಗೆಲ್ಲವೂ ತಿಳಿದಿದೆ’ ಎಂಬ ಅಹಂಭಾವ !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

ಹಿಂದೂ ರಾಷ್ಟ್ರದಲ್ಲಿ ಎಲ್ಲ ಕೆಲಸ-ಕಾರ್ಯಗಳೂ ಆದರ್ಶವಾಗಿರಲಿವೆ !

ಒಂದಾದರೂ ಸರಕಾರಿ ಇಲಾಖೆ ಭ್ರಷ್ಟಾಚಾರ ರಹಿತ, ಸತ್ಯನಿಷ್ಠ, ಸಮಯಕ್ಕೆ ಸರಿಯಾಗಿ ಕೆಲಸ ಕಾರ್ಯ ಪೂರ್ಣ ಮಾಡುವಂತಹದ್ದಾಗಿದೆಯೇ ?

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

‘ಬುದ್ಧಿವಾದಿಗಳು ಹಿಂದೂ ಧರ್ಮದಲ್ಲಿನ ಕರ್ಮಕಾಂಡವನ್ನು ‘ಕರ್ಮಕಾಂಡ’ ಎಂದು ಹೀಯಾಳಿಸುತ್ತಾರೆ; ಆದರೆ ಕರ್ಮಕಾಂಡದ ಅಧ್ಯಯನ ಮಾಡಿದ್ದೇ ಆದರೆ ಅದರಲ್ಲಿರುವ ಪ್ರತಿಯೊಂದು ಸಂಗತಿಯನ್ನೂ ಎಷ್ಟು ಆಳವಾಗಿ ಅಧ್ಯಯನ ಮಾಡಲಾಗಿದೆ ಎಂಬುದು ತಿಳಿದು ಬರುತ್ತದೆ.’

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

‘ಹಿಂದೂಗಳಿಗೆ ಧರ್ಮಶಿಕ್ಷಣ ನೀಡಲಾಗುತ್ತಿಲ್ಲ. ಅಷ್ಟೇ ಅಲ್ಲ, ಬೇರೆ ಯಾವುದೇ ಧರ್ಮದಲ್ಲಿ ಕಲಿಸಲಾಗದ ‘ಸರ್ವಧರ್ಮಸಮಭಾವ’ ಎಂಬ ಅತ್ಯಂತ ಅನುಚಿತ ಶಬ್ದವನ್ನು ಕಲಿಸಲಾಗುತ್ತಿದೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

‘ಸ್ವಾತಂತ್ರ್ಯದ ನಂತರ ಇದುವರೆಗಿನ ಪೀಳಿಗೆಯವರಿಗೆ ‘ದೇವರಿಲ್ಲ’ ಎಂದೇ ಕಲಿಸಿದ ಕಾರಣ ಅವರು ಭ್ರಷ್ಟಾಚಾರಿಗಳೂ, ವಾಸನಾಂಧರೂ, ರಾಷ್ಟ್ರ ಮತ್ತು ಧರ್ಮಪ್ರೇಮ ರಹಿತರಾಗಿದ್ದಾರೆ.’

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

‘ವೈದ್ಯರು, ವಕೀಲರು, ಲೆಕ್ಕಪರಿಶೋಧಕರು ಮುಂತಾದವರ ಮೇಲೆ ನಮಗೆ ವಿಶ್ವಾಸವಿರುತ್ತದೆ. ಅದಕ್ಕಿಂತಲು ಅನೇಕ ಪಟ್ಟು ಹೆಚ್ಚು ವಿಶ್ವಾಸ ಮಾತ್ರವಲ್ಲ, ಶ್ರದ್ಧೆ ಗುರುಗಳ ಮೇಲೆ ಇರಬೇಕು.’

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

‘ಪಾಶ್ಚಾತ್ಯ ಜ್ಞಾನವು ಕೇವಲ ತಾತ್ಕಾಲಿಕ ಸುಖವನ್ನು ಪಡೆಯುವ ದಿಶೆಯನ್ನು ತೋರಿಸುತ್ತದೆ, ಆದರೆ ಹಿಂದೂ ಧರ್ಮದಲ್ಲಿನ ಜ್ಞಾನವು ಚಿರಂತನ ಆನಂದವನ್ನು ಪಡೆದುಕೊಳ್ಳುವ ದಿಶೆಯನ್ನು ತೋರಿಸುತ್ತದೆ !’

ಸಾಧಕರೇ, ನಾಮಜಪಾದಿ ಉಪಾಯಗಳ ವಿಷಯದಲ್ಲಿ ಇದನ್ನು ಗಮನಿಸಿರಿ !

ಕೆಲವು ಸಾಧಕರು ನಾಮಜಪದಲ್ಲಿ ಮನಸ್ಸನ್ನು ಸ್ಥಿರಗೊಳಿಸಲು ಸಂತರ ಭಜನೆ ಕೇಳುತ್ತಾ ನಾಮಜಪ ಮಾಡುತ್ತಾರೆ. ಇದು ಸರಿಯಿದೆ; ಆದರೆ ಭಜನೆ ಕೇಳುತ್ತಾ ನಾಮಜಪ ಮಾಡುವಾಗ ಭಜನೆಯತ್ತ ಗಮನ ಹೋಗುವುದರಿಂದ ನಾಮಜಪ ಏಕಾಗ್ರತೆಯಿಂದ ಆಗುವುದಿಲ್ಲ, ಎಂಬುದನ್ನೂ ಗಮನದಲ್ಲಿಡಬೇಕು.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಮನುಷ್ಯತ್ವವನ್ನು ಕಲಿಸುವ ಸಾಧನೆಯನ್ನು ಬಿಟ್ಟು ಉಳಿದಿರುವುದೆಲ್ಲ ವಿಷಯಗಳನ್ನು ಕಲಿಸುವ ಆಧುನಿಕ ಶಿಕ್ಷಣ ವ್ಯವಸ್ಥೆಯಿಂದ ರಾಷ್ಟ್ರದ ಪರಮಾವಧಿಯ ಅಧೋಗತಿಯಾಗಿದೆ.