ಪಂಜಾಬ ನ್ಯಾಷನಲ್ ಬ್ಯಾಂಕ್ ಹಗರಣದ ಪ್ರಮುಖ ಆರೋಪಿ ಮೆಹುಲ ಚೋಕಸಿ ಬೆಲ್ಜಿಯಂನಲ್ಲಿ !

ನವದೆಹಲಿ – ಪಂಜಾಬ ನ್ಯಾಷನಲ್ ಬ್ಯಾಂಕ್ (ಪಿ.ಎನ್‌.ಬಿ.) ಹಗರಣದ ಪ್ರಮುಖ ಆರೋಪಿಯಾದ ವಜ್ರದ ವ್ಯಾಪಾರಿ ಮೆಹುಲ ಚೋಕಸಿ ಯುರೋಪಿನ ಬೆಲ್ಜಿಯಂನಲ್ಲಿರುವುದು ಬಹಿರಂಗವಾಗಿದೆ. ಬೆಲ್ಜಿಯಂ ವಿದೇಶಾಂಗ ಸಚಿವಾಲಯದ ಅಧಿಕೃತ ಹೇಳಿಕೆಯಲ್ಲಿ ಚೋಕಸಿಯು ದೇಶದಲ್ಲಿರುವ ಬಗ್ಗೆ ಮಾಹಿತಿ ನೀಡಲಾಗಿದೆ. ಚೋಕಸಿಯನ್ನು ಹಸ್ತಾಂತರಿಸುವ ಪ್ರಕ್ರಿಯೆಯನ್ನು ಆರಂಭಿಸಲು ಭಾರತವು ಬೆಲ್ಜಿಯಂನ ಅಧಿಕಾರಿಗಳನ್ನು ಸಂಪರ್ಕಿಸಿದೆ.

1. ಮೆಹುಲ ಚೋಕಸಿ ಹಾಗೂ ಪರಾರಿಯಾಗಿರುವ ಇನ್ನೊಬ್ಬ ವಜ್ರದ ವ್ಯಾಪಾರಿರಾದ ನೀರವ ಮೋದಿಯ ಮೇಲೆ ಪಿ.ಎನ್‌.ಬಿ. ಯ ಮುಂಬಯಿಯ ಬ್ರಾಡಿ ಹೌಸ್ ಶಾಖೆಯಲ್ಲಿ 13ಸಾವಿರದ 850 ಕೋಟಿ ರೂಪಾಯಿಗಳ ವಂಚನೆಯ ಆರೋಪವಿದೆ.

2. ಬೆಲ್ಜಿಯಂನಲ್ಲಿ ಆಶ್ರಯ ಪಡೆಯುವ ಮೊದಲು ಆರೋಪಿಯಾದ ಚೋಕಸಿಯು ದಕ್ಷಿಣ ಅಮೇರಿಕ ಖಂಡದ ಬಳಿ ಇರುವ ಆಂಟಿಗ್ವಾ-ಬಾರ್ಬುಡಾದಲ್ಲಿ ವಾಸಿಸುತ್ತಿದ್ದನು. ಚೋಕಸಿಯು 2018 ರಲ್ಲಿ ಭಾರತವನ್ನು ತೊರೆಯುವ ಮೊದಲು 2017 ರಲ್ಲಿ ಆಂಟಿಗ್ವಾ-ಬಾರ್ಬುಡಾದ ಪೌರತ್ವವನ್ನು ಪಡೆದಿದ್ದನು.

3. 2021 ರಲ್ಲಿ, ದಕ್ಷಿಣ ಅಮೇರಿಕ ಖಂಡದ ಬಳಿ ಇರುವ ಡೊಮಿನಿಕಾ ದೇಶದಲ್ಲಿ ಚೋಕ್ಸಿಯನ್ನು ಬಂಧಿಸಲಾಗಿತ್ತು. ಅವನನ್ನು ಹಸ್ತಾಂತರಿಸಲು ಸಿ.ಬಿ.ಐ. ನ ತಂಡವು ಡೊಮಿನಿಕಾ ತಲುಪಿತು; ಆದರೆ ಅದಕ್ಕೂ ಮೊದಲು, ಅವನನ್ನು ಆಂಟಿಗ್ವಾಗೆ ವಾಪಸ್ಸು ಕಳುಹಿಸಲಾಗಿತ್ತು.

4. ಚೋಕಸಿಯು ನಕಲಿ ದಾಖಲೆಗಳ ಆಧಾರದಲ್ಲಿ ಬೆಲ್ಜಿಯಂನಲ್ಲಿ ಆಶ್ರಯ ಪಡೆದಿದ್ದಾನೆ. ಅವನು ಕ್ಯಾನ್ಸರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ನೆಪ ಮಾಡಿಕೊಂಡಿದ್ದಾನೆ.