ಅನೇಕರಿಗೆ ಗಾಯ
ಮೊರಾದಾಬಾದ್ (ಉತ್ತರ ಪ್ರದೇಶ) – ಇಲ್ಲಿನ ಬಹದ್ದೂರ್‌ಪುರ ಗ್ರಾಮದಲ್ಲಿ ದೊಡ್ಡ ಧ್ವನಿಯಲ್ಲಿ ಕೀರ್ತನೆ ನಡೆಯುತ್ತಿತ್ತು ಎಂಬ ಕಾರಣಕ್ಕೆ ಮುಸ್ಲಿಮರು ಹಿಂದೂಗಳ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಕಲ್ಲು ತೂರಾಟದ ಜೊತೆಗೆ ದೊಣ್ಣೆಗಳನ್ನೂ ಬಳಸಲಾಗಿದೆ. ಇದರಿಂದ ಅನೇಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು 16 ಗುರುತಿಸಲ್ಪಟ್ಟ ಮತ್ತು ಅನೇಕ ಗುರುತಿಸದವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಇಲ್ಲಿ ಉದ್ವಿಗ್ನ ವಾತಾವರಣವಿದೆ. ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.
1. ಗ್ರಾಮದ ಹಿಂದೂ ಮಹಿಳೆಯರ ಆರೋಪದ ಪ್ರಕಾರ, ಅವರು ಕೀರ್ತನೆ ಮಾಡುತ್ತಿದ್ದಾಗ ಕೆಲವು ಮುಸ್ಲಿಮರು ಅವರನ್ನು ತಡೆಯಲು ಪ್ರಯತ್ನಿಸಿದರು. ವಾಗ್ವಾದ ಹೆಚ್ಚಾದಾಗ ಅವರ ಮೇಲೆ ಕಲ್ಲು ತೂರಾಟ ನಡೆಸಲಾಯಿತು. ಇದರಿಂದ ಅನೇಕರು ಗಾಯಗೊಂಡಿದ್ದಾರೆ.
2. ಪೊಲೀಸ್ ವರಿಷ್ಠಾಧಿಕಾರಿ ಕುನ್ವರ್ ಆಕಾಶ್ ಸಿಂಗ್ ಮಾತನಾಡಿ, ಮಾರ್ಚ್ 24 ರ ಸಂಜೆ ಮಸೀದಿಯೊಳಗೆ ಪ್ರಾಣಿಯೊಂದು ನುಗ್ಗಿದ್ದರಿಂದ ವಾಗ್ವಾದ ಆರಂಭವಾಯಿತು. ನಂತರ ಎರಡೂ ಕಡೆ ವಾಗ್ವಾದ ನಡೆದು ಹೊಡೆದಾಟಕ್ಕೆ ತಿರುಗಿತು. ಕೀರ್ತನೆಯ ಶಬ್ದದಿಂದ ಉದ್ವಿಗ್ನತೆ ಹೆಚ್ಚಾಯಿತು.