|
ವಾಷಿಂಗ್ಟನ್ (ಅಮೇರಿಕಾ) – ಅಮೇರಿಕಾದ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗವು (ಯುಎಸ್ ಕಮಿಷನ್ ಆನ್ ಇಂಟರ್ನ್ಯಾಷನಲ್ ರಿಲಿಜಿಯಸ್ ಫ್ರೀಡಮ್) ಪ್ರತಿವರ್ಷದಂತೆ ಈ ವರ್ಷವೂ ‘ಭಾರತದಲ್ಲಿ ಅಲ್ಪಸಂಖ್ಯಾತರಿಗೆ ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತದೆ’ ಎಂದು ವರದಿ ಸಲ್ಲಿಸಿದೆ. ಅಷ್ಟೇ ಅಲ್ಲದೆ, ಈ ಆಯೋಗವು ಭಾರತದ ಗುಪ್ತಚರ ಸಂಸ್ಥೆ ‘ರಿಸರ್ಚ್ ಆಂಡ್ ಅನಾಲಿಸಿಸ್ ವಿಂಗ್’ (ರಾ) ಮೇಲೆ ನಿರ್ಬಂಧ ಹೇರಲು ಶಿಫಾರಸ್ಸು ಮಾಡಿದೆ. ಇದಕ್ಕಾಗಿ, ಖಲಿಸ್ತಾನಿ ಭಯೋತ್ಪಾದಕನ ಹತ್ಯೆಯಲ್ಲಿ ಈ ಸಂಸ್ಥೆಯ ಪಾತ್ರವಿದೆ ಎಂದು ಆಯೋಗವು ದಾವೆ ಮಾಡಿದೆ.
೧. ‘ರಾಯಿಟರ್ಸ್’ ಸುದ್ದಿ ಸಂಸ್ಥೆಯು ತನ್ನ ವರದಿಯಲ್ಲಿ, ಆಯೋಗದ ಶಿಫಾರಸ್ಸುಗಳು ಕಡ್ಡಾಯವಲ್ಲದ ಕಾರಣ, ಅಮೇರಿಕನ್ ಸರಕಾರವು ‘ರಾ’ ಮೇಲೆ ನಿರ್ಬಂಧಗಳನ್ನು ಹೇರುವ ಸಾಧ್ಯತೆ ಬಹಳ ಕಡಿಮೆ.
೨. ತಜ್ಞರ ಪ್ರಕಾರ, ಏಷ್ಯಾ ಮತ್ತು ಇತರ ಕಡೆಗಳಲ್ಲಿ ಚೀನಾದ ಹೆಚ್ಚುತ್ತಿರುವ ಪ್ರಭಾವವನ್ನು ಎದುರಿಸಲು ಅಮೇರಿಕಾ ಭಾರತವನ್ನು ಒಂದು ಪರ್ಯಾಯವಾಗಿ ನೋಡಿದೆ. ಆದ್ದರಿಂದ ಭಾರತದ ಮೇಲೆ ಯಾವುದೇ ಕ್ರಮ ಕೈಗೊಳ್ಳುವ ಸಾಧ್ಯತೆ ಇಲ್ಲ.
೩. ಈ ಹಿಂದೆ ಬೈಡೆನ್ ಸರಕಾರದ ಅವಧಿಯಲ್ಲಿ ಅಮೇರಿಕಾದಲ್ಲಿ ಖಲಿಸ್ತಾನಿ ಬೆಂಬಲಿಗರನ್ನು ಗುರಿಯಾಗಿಸಿಕೊಂಡ ಆರೋಪಗಳಿಂದಾಗಿ ಅಮೇರಿಕಾ ಮತ್ತು ಭಾರತದ ನಡುವಿನ ಸಂಬಂಧಗಳು ಹದಗೆಟ್ಟಿದ್ದವು. ಅಮೇರಿಕಾದ ಮಾಜಿ ಭಾರತೀಯ ಗುಪ್ತಚರ ಅಧಿಕಾರಿ ವಿಕಾಸ್ ಯಾದವ್ ಅವರು ಅಮೇರಿಕನ್ ನಾಗರಿಕನಾದ ಖಲಿಸ್ತಾನಿ ಭಯೋತ್ಪಾದಕ ಗುರುಪತವಂತ್ ಸಿಂಗ್ ಪನ್ನುನ ಹತ್ಯೆ ಮಾಡಲು ಸಂಚು ರೂಪಿಸಿದ್ದಾರೆ ಎಂದು ಅಮೇರಿಕಾ ಆರೋಪಿಸಿತ್ತು.
ಆಯೋಗವು ವರದಿಯಲ್ಲಿ ಏನು ಹೇಳಿದೆ?ಅಮೇರಿಕನ್ ಆಯೋಗದ ವರದಿಯಲ್ಲಿ, ೨೦೨೪ ರಲ್ಲಿ ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ ಎಂದು ಹೇಳಲಾಗಿದೆ; ಏಕೆಂದರೆ ಅಲ್ಪಸಂಖ್ಯಾತರ ಮೇಲಿನ ದಾಳಿಗಳು ಮತ್ತು ತಾರತಮ್ಯ ಹೆಚ್ಚುತ್ತಲೇ ಇರುತ್ತದೆ. ಹಿಂದೂ ರಾಷ್ಟ್ರವಾದಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಭಾರತೀಯ ಜನತಾ ಪಕ್ಷವು ಕಳೆದ ವರ್ಷದ ಚುನಾವಣಾ ಪ್ರಚಾರದ ಸಮಯದಲ್ಲಿ ಮುಸ್ಲಿಮರು ಮತ್ತು ಇತರ ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ದ್ವೇಷಪೂರಿತ ಭಾಷಣ ಮತ್ತು ಸುಳ್ಳು ಮಾಹಿತಿಯನ್ನು ಹರಡಿದ್ದರು. ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆಗಾಗಿ ಭಾರತವನ್ನು ವಿಶೇಷ ಚಿಂತೆಯ ದೇಶವೆಂದು ಘೋಷಿಸಬೇಕು ಮತ್ತು ಯಾದವ್ ಮತ್ತು ರಾ ಮೇಲೆ ನಿರ್ಬಂಧಗಳನ್ನು ವಿಧಿಸಬೇಕು. ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಬೇಕು ಮತ್ತು ಅವರನ್ನು ಅಮೇರಿಕಾದಲ್ಲಿ ಪ್ರವೇಶಿಸುವುದನ್ನು ನಿಷೇಧಿಸಬೇಕು. ಈ ವರದಿಯಲ್ಲಿ ಕಮ್ಯುನಿಸ್ಟ್ ಆಡಳಿತದ ವಿಯೆಟ್ನಾಂ ಅನ್ನು ವಿಶೇಷ ಚಿಂತೆಯ ದೇಶಗಳಲ್ಲಿ ಸೇರಿಸಲು ಶಿಫಾರಸ್ಸು ಮಾಡಲಾಗಿದೆ. |
ಸಂಪಾದಕೀಯ ನಿಲುವು
|