ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ
ಹಿಂದೂ ಧರ್ಮದಲ್ಲಿ ಹೇಳಿರುವ ಸಾಧನೆಯಿಂದ ಆನಂದವು ಲಭಿಸುವುದರಿಂದ ಇತರ ಧರ್ಮೀಯರು ತನ್ನಷ್ಟಕ್ಕೇ ಹಿಂದೂ ಧರ್ಮದೆಡೆಗೆ ಆಕರ್ಷಿತರಾಗುತ್ತಾರೆ.
ಹಿಂದೂ ಧರ್ಮದಲ್ಲಿ ಹೇಳಿರುವ ಸಾಧನೆಯಿಂದ ಆನಂದವು ಲಭಿಸುವುದರಿಂದ ಇತರ ಧರ್ಮೀಯರು ತನ್ನಷ್ಟಕ್ಕೇ ಹಿಂದೂ ಧರ್ಮದೆಡೆಗೆ ಆಕರ್ಷಿತರಾಗುತ್ತಾರೆ.
ವೈಯಕ್ತಿಕ ಸ್ವಾತಂತ್ರ್ಯದ ಹೆಸರಿನಲ್ಲಿ ಯಾರೂ ರಾಜಕಾರಣಿಗಳ ಬಗ್ಗೆ ಅವಾಚ್ಯ ಪದಗಳಲ್ಲಿ ಮಾತನಾಡುವಂತಿಲ್ಲ; ಆದರೆ ದೇವತೆಗಳ ವಿಷಯದಲ್ಲಿ ಮಾತನಾಡುತ್ತಾರೆ!
‘ಕಾಶ್ಮೀರದ ನಂತರ ಭಾರತದಲ್ಲಿನ ಯಾವ್ಯಾವ ಗ್ರಾಮಗಳಲ್ಲಿ ಮತಾಂಧರು ಬಹುಸಂಖ್ಯಾತರಾಗಿದ್ದಾರೆಯೋ ಅಲ್ಲಿನವರು ‘ನಮ್ಮನ್ನು ಪಾಕಿಸ್ತಾನದೊಂದಿಗೆ ಸೇರಿಸಿ’ ಎಂದು ಮನವಿ ಮಾಡಿದರೆ ಆಶ್ಚರ್ಯವೆನಿಸಲಾರದು !’
‘ಹಿಂದೂಗಳೇ, ಕಳೆದ ೯೦೦ ವರ್ಷಗಳ ಪಾರತಂತ್ರ್ಯದ ಲಜ್ಜಾಸ್ಪದ ಇತಿಹಾಸವನ್ನು ಅಳಿಸಿ ಹಾಕಲು ಈಗ ಜಾಗೃತರಾಗಿ !’
ಅಧ್ಯಾತ್ಮ ಮಾತ್ರ ಜಗತ್ತಿನ ಎಲ್ಲ ವಿಷಯಗಳಿಗೂ ಸಂಬಂಧಿಸಿದ ಪೂರ್ಣ ಮಾಹಿತಿಯನ್ನು ನೀಡಬಲ್ಲ ವಿಷಯವಾಗಿದೆ.
‘ಪ್ರಸ್ತುತ ಹೆಚ್ಚಿನ ವ್ಯವಹಾರಗಳ ಒಟ್ಟು ವೆಚ್ಚದಲ್ಲಿ ಅಧಿಕೃತ ಖರ್ಚಿನ ಜೊತೆ ‘ಲಂಚಕ್ಕೆ ಎಷ್ಟು ವೆಚ್ಚವಾಗುವುದು ?’, ಎಂಬುದನ್ನೂ ಗಣನೆಗೆ ತೆಗೆದುಕೊಳ್ಳಲಾಗುತ್ತದೆ !’
ಚುನಾವಣೆಯಲ್ಲಿ ಸ್ಫರ್ಧಿಸುವವರೇ, ಇದನ್ನು ಗಮನದಲ್ಲಿಡಿ ! ‘ಅನಂತ ಕೋಟಿ ಬ್ರಹ್ಮಾಂಡವನ್ನು ಆಳುವ ಈಶ್ವರನು ಚುನಾವಣೆಯಲ್ಲಿ ಸ್ಪರ್ಧಿಸಬೇಕಾಗಿಲ್ಲ !’
‘ವೃದ್ಧಾಪ್ಯದಲ್ಲಿ ಮಕ್ಕಳು ಗಮನ ಕೊಡುವುದಿಲ್ಲ’ ಎಂದು ಹೇಳುವ ವೃದ್ಧರೇ, ಇದು ನೀವು ಮಕ್ಕಳಿಗೆ ಸಾಧನೆಯ ಸಂಸ್ಕಾರ ಕೊಡದೇ ಇರುವುದರ ಪರಿಣಾಮವಾಗಿದೆ. ಮಕ್ಕಳ ಜೊತೆ ನೀವು ಕೂಡ ಇದಕ್ಕೆ ಹೊಣೆಗಾರರಾಗಿದ್ದೀರಿ !
‘ಎಲ್ಲಿ ಯಂತ್ರಗಳ ಮೂಲಕ ಸಂಶೋಧನೆ ನಡೆಸಿ ಬದಲಾಗುತ್ತಾ ಹೋಗುವ ನಿರ್ಣಯಗಳನ್ನು ನೀಡುವ ವಿಜ್ಞಾನಿಗಳು ಮತ್ತು ಎಲ್ಲಿ ಲಕ್ಷಾಂತರ ವರ್ಷಗಳ ಹಿಂದೆಯೇ, ಯಂತ್ರಗಳು ಹಾಗೂ ಸಂಶೋಧನೆಗಳನ್ನು ಬಳಸದೇ ಅಂತಿಮ ಸತ್ಯವನ್ನು ತಿಳಿಸಿರುವ ಋಷಿಗಳು !’
ಸಾವಿರಾರು ಜನರು ಯಾವುದೇ ಆಮಂತ್ರಣವಿಲ್ಲದೆ ದೇವಸ್ಥಾನಗಳಿಗೆ ಮತ್ತು ತೀರ್ಥಕ್ಷೇತ್ರಗಳಿಗೆ ಬರುತ್ತಾರೆ, ಆದರೆ ರಾಜಕಾರಣಿಗಳು ಹಣವನ್ನು ನೀಡಿ ಜನರನ್ನು ತಮ್ಮ ತಮ್ಮ ಸಭೆಗಳಿಗೆ ಕರೆಸಬೇಕಾಗುತ್ತದೆ.