‘ಮನುಷ್ಯನಿಗೆ ಅವನ ಜೀವನದಲ್ಲಿ ಜನ್ಮದಿಂದ ಪ್ರೌಢಾವಸ್ಥೆಯ ನಡುವೆ ತುಂಬಾ ಸಮಯವಿರುತ್ತದೆ. ಆ ಅವಧಿಯಲ್ಲಿ ಹೇಗೆ ವರ್ತಿಸಬೇಕು, ಹೇಗಿರಬೇಕು, ಎಂಬುದನ್ನು ಕಲಿಯಬಹುದು. ಇದನ್ನು ಕಲಿಯಲು ಅನೇಕ ಪರ್ಯಾಯ ಮಾರ್ಗಗಳೂ ಲಭ್ಯವಿರುತ್ತವೆ. ಅನಂತರ ವೃದ್ಧಾಪ್ಯದಿಂದ ಮೃತ್ಯುವರೆಗಿನ ಅವಧಿಯು ತುಂಬಾ ಕಡಿಮೆಯಿರುತ್ತದೆ. ಈ ಅಲ್ಪ ಕಾಲಾವಧಿಯಲ್ಲಿ ಏನು ಮಾಡಬೇಕು, ಏನು ಮಾಡಬಾರದು, ಎಂದು ಹೇಳುವವರು ಯಾರು ಇರುವುದಿಲ್ಲ ಮತ್ತು ಹಾಗೆ ಕಲಿಸುವ ವ್ಯವಸ್ಥೆಯೂ ಇರುವುದಿಲ್ಲ. ಅದರೊಂದಿಗೆ ಆ ವ್ಯಕ್ತಿಗೆ ವಯಸ್ಸಿನಿಂದ ಉಂಟಾಗುವ ದೈಹಿಕ ಮತ್ತು ಮಾನಸಿಕ ಸ್ಥಿತಿಯಿಂದ ಹೊಸದೇನು ಕಲಿಯುವುದು ಕಷ್ಟವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಎದುರಿಸಲು ಕೇವಲ ತನ್ನ ಸಾಧನೆಯೇ ಉಪಯೋಗವಾಗುತ್ತದೆ. ಅದಕ್ಕಾಗಿ ಈ ಸಾಧನೆಯನ್ನು ಯುವಾವಸ್ಥೆಯಲ್ಲಿಯೇ ಮಾಡುವುದು ಆವಶ್ಯಕವಾಗಿರುತ್ತದೆ.’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ