‘ಭ್ರಷ್ಟಾಚಾರ ಇಲ್ಲ’ ಎನ್ನುವಂತಹ ಒಂದೇ ಒಂದು ಕ್ಷೇತ್ರವೂ ಇಲ್ಲ. ಫ್ಲ್ಯಾಟ್ ಖರೀದಿಸಬೇಕಾದರೆ ನಗದು (ಕಪ್ಪು ಹಣ) ಮತ್ತು ಧನಾದೇಶ (ಚೆಕ್) ಮೂಲಕ ಹಣ ಕೊಡಬೇಕಾಗುತ್ತದೆ. ಫ್ಲ್ಯಾಟ್ ಮಾರಾಟ ಮಾಡುವವರ ಬಳಿ ಸುಳ್ಳು ಗ್ರಾಹಕರ ರೂಪದಲ್ಲಿ ಸರಕಾರ ಯಾರನ್ನಾದರೂ ಏಕೆ ಕಳಿಸುವುದಿಲ್ಲ ? ಫ್ಲ್ಯಾಟ್ ಮಾರಾಟ ಮಾಡುವ ೫-೧೦ ಜನರ ಭ್ರಷ್ಟಾಚಾರ ಬೆಳಕಿಗೆ ಬಂದು ಅವರಿಗೆ ತಕ್ಷಣ ಕಠಿಣ ಶಿಕ್ಷೆಯಾದರೆ ಫ್ಲ್ಯಾಟ್ ಮಾರುವ ಎಲ್ಲರೂ ಕಪ್ಪು ಹಣದ ವ್ಯವಹಾರವನ್ನು ತಕ್ಷಣ ನಿಲ್ಲಿಸುವರು. ಈ ರೀತಿ ಎಲ್ಲಾ ಕ್ಷೇತ್ರಗಳಲ್ಲಿ ಹಾಗೂ ಸರಕಾರಿ ಕಾರ್ಯಾಲಯಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ತಡೆಯಬಹುದು !
ಭಾರತದಲ್ಲಿ ಅಪರಾಧಗಳು ಕಡಿಮೆ ದಾಖಲಾಗಲು ಕಾರಣ
‘ಹೆಚ್ಚಿನ ಜನರು ದೂರು ನೀಡಲು ಪೊಲೀಸ್ ಠಾಣೆಗೆ ಹೋಗುವುದಿಲ್ಲ; ಏಕೆಂದರೆ ಅಲ್ಲಿಗೆ ಹೋದರೆ ಸಮಯ ವ್ಯರ್ಥವಾಗಿ ಕೆಲವೊಮ್ಮೆ ಪೊಲೀಸರ ಉದ್ಧಟತನದಿಂದ ಅಪಮಾನವನ್ನು ಸಹಿಸಬೇಕಾಗುತ್ತದೆ ಮತ್ತು ಕೊನೆಗೆ ಏನೂ ಪ್ರಯೋಜನವಾಗುವುದಿಲ್ಲ ಎಂಬುದು ಅವರಿಗೆ ತಿಳಿದಿರುತ್ತದೆ.’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ