ಮಾನವ ಹಕ್ಕುಗಳನ್ನು ಪಾಲಿಸುವಂತೆ ಆದೇಶ!
ವಾಷಿಂಗ್ಟನ್ – ಅಮೇರಿಕಾವು ಬಾಂಗ್ಲಾದೇಶಕ್ಕೆ ಮತ್ತೊಮ್ಮೆ ಇಲ್ಲಿಯ ಅಲ್ಪಸಂಖ್ಯಾತರ ವಿರುದ್ಧ ನಡೆಯುತ್ತಿರುವ ತಾರತಮ್ಯದ ಬಗ್ಗೆ ತೀವ್ರ ಎಚ್ಚರಿಕೆ ನೀಡಿದೆ. ಅಮೇರಿಕಾದ ವಿದೇಶಾಂಗ ಸಚಿವಾಲಯದ ವಕ್ತೆ ಟ್ಯಮಿ ಬ್ರೂಸ್ ಇವರು, ಬಾಂಗ್ಲಾದೇಶವು ಮಾನವ ಹಕ್ಕುಗಳ ನಿಯಮವನ್ನು ಪಾಲಿಸಬೇಕು ಮತ್ತು ತಮ್ಮ ನಾಗರೀಕರ ಜೊತೆಗೆ ಸಮಾನವಾಗಿ ವರ್ತಿಸಬೇಕು. ಬಾಂಗ್ಲಾದೇಶದಲ್ಲಿನ ಅಲ್ಪಸಂಖ್ಯಾತರ ಮೇಲಿನ ಹಿಂಸಾಚಾರವನ್ನು ನಿಷೇಧಿಸಿದ ನಂತರ ಅಮೇರಿಕಾದ ವಿದೇಶಾಂಗ ಇಲಾಖೆ ಕೂಡ ಟಿಪ್ಪಣಿ ಮಾಡಿದೆ.
ಇತ್ತೀಚಿಗೆ ಅಮೆರಿಕಾದ ರಾಷ್ಟ್ರೀಯ ಗುಪ್ತಚರ ಸಂಚಾಲಕಿ ತುಳಸಿ ಗಬಾರ್ಡ್ ಇವರು ಕೂಡ ಬಾಂಗ್ಲಾದೇಶವನ್ನು ಟೀಕಿಸಿದರು. ಇದರ ಬಗ್ಗೆ ವಿಚಾರಿಸಿದಾಗ ಟಾಮಿ ಬ್ರೂಸ್ ಇವರು, ಬಾಂಗ್ಲಾದೇಶದಲ್ಲಿನ ಅಲ್ಪಸಂಖ್ಯಾತರ ವಿರೋಧದಲ್ಲಿನ ಹಿಂಸಾಚಾರದ ಘಟನೆಗಳು ನಿಲ್ಲಿಸುವ ಬಗ್ಗೆ ಒತ್ತು ನೀಡಿದರು. ಅವರು, ಯಾವುದೇ ದೇಶದಲ್ಲಿ ಅಲ್ಪಸಂಖ್ಯಾತರ ವಿರುದ್ಧ ಹಿಂಸಾಚಾರ ಅಥವಾ ಅಸಹಿಷ್ಣುತೆಯ ಘಟನೆಗಳನ್ನು ನಾವು ನಿಷೇಧಿಸುತ್ತೇವೆ. ನಾವು ಪರಿಸ್ಥಿತಿಯ ಮೇಲೆ ನಿಗಾ ವಹಿಸಿದ್ದೇವೆ, ಎಂದು ಹೇಳಿದರು.
ಸಂಪಾದಕೀಯ ನಿಲುವುಬಾಂಗ್ಲಾದೇಶದಲ್ಲಿ ಪ್ರಸ್ತುತ ಹಿಂಸಾಚಾರವು ಕೇವಲ ಎಚ್ಚರಿಕೆಯಿಂದ ನಿಲ್ಲುವುದಿಲ್ಲ, ಬದಲಾಗಿ ಬಾಂಗ್ಲಾದೇಶದ ವಿರುದ್ಧ ಅಮೇರಿಕಾದಿಂದ ಆರ್ಥಿಕ ನಿಷೇಧದಂತಹ ಕಠಿಣ ಕ್ರಮಗಳು ಕೈಗೊಳ್ಳುವುದು ಅಪೇಕ್ಷಿತ ಇದೆ ! |