ಅಯೋಧ್ಯೆ – ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಪ್ರತಿಷ್ಠಾಪಿಸಲಾಗಿರುವ ಶ್ರೀ ರಾಮ ಲಲ್ಲಾನಿಗೆ ಪ್ರತಿದಿನ ಸೂರ್ಯ ತಿಲಕವನ್ನು ಹಚ್ಚಲಾಗುತ್ತದೆ. ಸೂರ್ಯ ತಿಲಕ ಮುಂಬರುವ ರಾಮ ನವಮಿಯಿಂದ, ಅಂದರೆ ಏಪ್ರಿಲ್ 6 ರಿಂದ ಪ್ರಾರಂಭವಾಗಲಿದೆ. ಮಂದಿರ ನಿರ್ಮಾಣ ಸಮಿತಿ ಈ ನಿರ್ಧಾರವನ್ನು ತೆಗೆದುಕೊಂಡಿದೆ. ‘ಸೂರ್ಯತಿಲಕ’ ಎಂದರೆ ಮೂರ್ತಿಯ ಹಣೆಯ ಮೇಲೆ ಬೀಳುವ ಸೂರ್ಯನ ಕಿರಣಗಳಾಗಿದೆ. ಅಯೋಧ್ಯೆಯ ಶ್ರೀ ರಾಮಮಂದಿರದಲ್ಲಿ ವಿಶೇಷ ಕನ್ನಡಿಗಳು ಮತ್ತು ಇತರ ಸಾಧನಗಳನ್ನು ಬಳಸಿಕೊಂಡು ವಿಶೇಷ ಶ್ರೀ ರಾಮಲಲ್ಲಾ ಮೂರ್ತಿಯ ಹಣೆಯ ಮೇಲೆ ಸೂರ್ಯನ ಕಿರಣಗಳು ಬೀಳುವಂತೆ ಒಂದು ವಿಶೇಷ ಕಾರ್ಯತಂತ್ರವನ್ನು ಸಿದ್ಧಪಡಿಸಲಾಗಿದೆ.
ಸೂರ್ಯನ ಕಿರಣಗಳು ಶ್ರೀ ರಾಮಲಲ್ಲಾನ ಹಣೆಯ ಮೇಲೆ ಸುಮಾರು 3-4 ನಿಮಿಷಗಳ ಕಾಲ ಬೀಳುತ್ತವೆ. ಸಮಿತಿಯ ಅಧ್ಯಕ್ಷ ಮತ್ತು ಮಾಜಿ ಆಡಳಿತ ಅಧಿಕಾರಿ ನೃಪೇಂದ್ರ ಮಿಶ್ರಾ ಮಾತನಾಡಿ, “ಸೂರ್ಯತಿಲಕದ ಪ್ರತಿಯೊಂದು ದಿನವನ್ನು ಮುಂದಿನ 20 ವರ್ಷಗಳವರೆಗೆ ಯೋಜಿಸಲಾಗಿದೆ” ಎಂದು ಹೇಳಿದರು. ಕಳೆದ ವರ್ಷ, ರಾಮ ನವಮಿಯ ದಿನದಂದು, ಅಂದರೆ ಏಪ್ರಿಲ್ 17, 2024 ರಂದು, ಶ್ರೀ ರಾಮಲಲ್ಲಾನಿಗೆ ಸೂರ್ಯನ ಕಿರಣಗಳ ರಾಜತಿಲಕವಾಗಿತ್ತು.