ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

ಚುನಾವಣೆಯಲ್ಲಿ ಆಯ್ಕೆಯಾಗಲು ರಾಜಕಾರಣಿಗಳು ಜನರನ್ನು ಸಂತೋಷ ಪಡಿಸಬೇಕಾಗುತ್ತದೆ. ಆದರೆ ಸಾಧನೆ ಮಾಡುವವನನ್ನು ಭಗವಂತನು ಸ್ವತಃ ಆಯ್ಕೆ ಮಾಡಿಕೊಳ್ಳುತ್ತಾನೆ !’

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

‘ನಮಗೆ ಯಾವುದರ ಬಗ್ಗೆ ಮಾಹಿತಿಯು ಇಲ್ಲವೋ, ನಾವು ಯಾವುದರ ಅಧ್ಯಯನ ಮಾಡಿಲ್ಲವೋ, ಆ ಬಗ್ಗೆ ಸಮಾಜದಲ್ಲಿ ಜನರಿಗೆ ಸಂದೇಹ ಮೂಡುವಂತೆ ಮಾತನಾಡುವುದು ಮತ್ತು ವರ್ತಿಸುವುದನ್ನು ನಿಜವಾದ ಬುದ್ಧಿಪ್ರಾಮಾಣ್ಯವಾದಿಗಳ ಲಕ್ಷಣ ಎನ್ನಬಹುದೇ ?’

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

‘ಬುದ್ಧಿಪ್ರಾಮಾಣ್ಯವಾದಿಗಳಿಂದಾಗಿ ಹಿಂದೂಗಳಲ್ಲಿ ಧರ್ಮದ ಮೇಲೆ ಶ್ರದ್ಧೆ ಇಲ್ಲದಂತಾಯಿತು. ಜಾತಿವಾದಿಗಳಿಂದಾಗಿ ಹಿಂದೂಗಳಲ್ಲಿ ಒಡಕು ಮೂಡಿತು. ಆದ್ದರಿಂದ ಹಿಂದೂಗಳು ಭಾರತದಲ್ಲಿ ಬಹುಸಂಖ್ಯಾತರಾಗಿದ್ದರು ಸಹ ಅನ್ಯಧರ್ಮೀಯರು ಮತ್ತು ನಕ್ಸಲೀಯರಿಂದ ಪೆಟ್ಟು ತಿನ್ನುತ್ತಿದ್ದಾರೆ !’

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

‘ಎಲ್ಲಿ ತಮ್ಮ ಕುಟುಂಬದ ಅಥವಾ ತಮ್ಮ ಜಾತಿಬಾಂಧವರ ಹಿತವನ್ನು ನೋಡುವ ಸಂಕುಚಿತ ವೃತ್ತಿಯ ಮಾನವರು ಮತ್ತು ಎಲ್ಲಿ ಅನಂತ ಕೋಟಿ ಬ್ರಹ್ಮಾಂಡಗಳಲ್ಲಿ ಇರುವ ಪ್ರಾಣಿಮಾತ್ರರ ಹಿತಾಸಕ್ತಿ ಕಾಪಾಡುವ ಈಶ್ವರ !’

ವೈಯಕ್ತಿಕ ಸ್ವಾತಂತ್ರ್ಯದ ಸಮರ್ಥಕರಿಗೆ ಇದು ಲಜ್ಜಾಸ್ಪದವೇ !

‘ವೈಯಕ್ತಿಕ ಸ್ವಾತಂತ್ರ್ಯಕ್ಕಿಂತ ಸಮಾಜ ಮತ್ತು ರಾಷ್ಟ್ರದ ಹಿತಾಸಕ್ತಿ ಹೆಚ್ಚು ಮುಖ್ಯ ಎಂಬುದು ವೈಯಕ್ತಿಕ ಸ್ವಾತಂತ್ರ್ಯದ ಸಮರ್ಥಕರಿಗೆ ಏಕೆ ತಿಳಿಯುವುದಿಲ್ಲ?

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಅಧ್ಯಾತ್ಮದ ಮಹತ್ವ ತಿಳಿಯದ ರಾಜಕಾರಣಿಗಳಿಂದಾಗಿ ದೇಶವು ಹೀನಾಯ ಸ್ಥಿತಿಗೆ ಹೋಗಿದೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

‘ಬುದ್ಧಿವಾದಿಗಳಿಂದಾಗಿ ಹಿಂದೂಗಳಲ್ಲಿ ಭಗವಂತನ ಮೇಲಿನ ಶ್ರದ್ಧೆ ನಷ್ಟವಾಯಿತು. ಸರ್ವಧರ್ಮಸಮಭಾವ ವಿಚಾರಧಾರೆಯವರಿಂದಾಗಿ ಹಿಂದೂಗಳಿಗೆ ಹಿಂದೂ ಧರ್ಮದ ಅದ್ವಿತೀಯತೆಯು ತಿಳಿಯಲಿಲ್ಲ ಮತ್ತು ಕಮ್ಯುನಿಸ್ಟರಿಂದಾಗಿ ಹಿಂದೂಗಳು ಭಗವಂತನ ಅಸ್ತಿತ್ವವನ್ನು ಒಪ್ಪಿಕೊಳ್ಳದಂತಾಯಿತು.

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

‘ಎಲ್ಲಿ ಇತರ ಧರ್ಮದವರನ್ನು ತುಳಿದು ಅವರನ್ನು ಆಳುವ ಬೋಧನೆ ನೀಡುವ ಕೆಲವು ಪಂಥಗಳು ಮತ್ತು ಎಲ್ಲಿ ‘ಸರ್ವೇಷಾಂ ಅವಿರೋಧೇಣ’ ಎಂಬಂತಹ ಸಹಿಷ್ಣುತಾವಾದದ ಬೋಧನೆಯನ್ನು ನೀಡುವ ಮಹಾನ್‌ ಹಿಂದೂ ಧರ್ಮ !’

‘ಗುರುಕೃಪಾಯೋಗವು ಸಾಧನಾಮಾರ್ಗದ ಒಂದು ಫಲನಿಷ್ಪತ್ತಿ !

ಅನೇಕ ಸಂಪ್ರದಾಯಗಳಲ್ಲಿ ಸಂತರ ಬಳಿ ಅವರ ಬೆರಳೆಣಿಕೆಯಷ್ಟೇ ಅವರ ಶಿಷ್ಯರಿರುತ್ತಾರೆ, ಅವರಿಂದ ಅವರು ಸೇವೆ ಮಾಡಿಸಿಕೊಳ್ಳುತ್ತಾರೆ. ಸನಾತನ ಸಂಸ್ಥೆಯಲ್ಲಿ ಸದ್ಯ ಶಿಷ್ಯಮಟ್ಟದಲ್ಲಿರುವ  ಸಾವಿರಾರು ಸಾಧಕರಿದ್ದಾರೆ ಮತ್ತು ಅವರು ಸೇವಾನಿರತರಾಗಿದ್ದಾರೆ