ಬಾಂಗ್ಲಾದೇಶದ ಸೇನೆ ಅಧಿಕಾರ ಬದಲಾವಣೆಯ ಸುದ್ದಿ ನಿರಾಕರಿಸಿದೆ!

ಡಿಸೆಂಬರನಲ್ಲಿ ಚುನಾವಣೆ

ಢಾಕಾ (ಬಾಂಗ್ಲಾದೇಶ) – ಮಧ್ಯಂತರ ಸರಕಾರದ ಮುಖ್ಯ ಸಲಹೆಗಾರ ಮಹಮ್ಮದ ಯೂನಸ ಅವರನ್ನು ಪದಚ್ಯುತಗೊಳಿಸಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂಬ ವರದಿಗಳು ಹರಡಿದ ನಂತರ, ಬಾಂಗ್ಲಾದೇಶದಲ್ಲಿ ಸೇನೆಯು ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಸೇನೆಯು ವರದಿಯನ್ನು ನಿರಾಕರಿಸುತ್ತಾ, ಸೇನೆಯು ಢಾಕಾದಲ್ಲಿ ನಿಯಮಿತ ಸಭೆ ನಡೆಸಿತು. ಕೆಲವು ಮಾಧ್ಯಮಗಳು ಈ ಸುದ್ದಿಯನ್ನು ಸೇನೆಯು ದಂಗೆ ನಡೆಸಲು ಹೊರಟಿದೆ ಎಂಬಂತೆ ವರದಿ ಮಾಡಿದ್ದವು.

ಈ ಸುದ್ದಿ ಆಧಾರರಹಿತವಾಗಿದ್ದು, ಈ ರೀತಿ ಏನೂ ಆಗುವುದಿಲ್ಲ ಎಂದು ಬಾಂಗ್ಲಾದೇಶದ ಮಾಹಿತಿ ಕಾರ್ಯದರ್ಶಿ ಶಫೀಕುಲ್ ಆಲಂ ಹೇಳಿದ್ದಾರೆ. ನಾವು ಡಿಸೆಂಬರ್‌ನಲ್ಲಿ ಬಾಂಗ್ಲಾದೇಶದಲ್ಲಿ ಚುನಾವಣೆ ನಡೆಸಲು ಸಿದ್ಧತೆ ನಡೆಸುತ್ತಿದ್ದೇವೆ. ಬಾಂಗ್ಲಾದೇಶದ ಮಧ್ಯಂತರ ಸರಕಾರವು ಎಲ್ಲಾ ರಾಜಕೀಯ ಪಕ್ಷಗಳೊಂದಿಗೆ ಮಾತನಾಡುತ್ತಿದೆ ಮತ್ತು ಅವರ ಸೂಚನೆಯಂತೆ ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳನ್ನು ನಡೆಸಲು ಬದ್ಧವಾಗಿದೆ.