ಸಮಷ್ಟಿಯ ವಿಚಾರ ಮಾಡಿ ಜ್ಞಾನ ಸಂಪಾದನೆ ಮಾಡುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ನನ್ನಲ್ಲಿ ೧೯೮೬ ನೇ ಇಸವಿಯಲ್ಲಿ ಅಧ್ಯಾತ್ಮದ ಕುರಿತು ಜಿಜ್ಞಾಸೆ ನಿರ್ಮಾಣವಾದ ನಂತರ ನಾನು ನನ್ನ ಪ್ರಶ್ನೆಗಳನ್ನು ವಿವಿಧ ಸಂತರಿಗೆ ಕೇಳಬೇಕಾಗುತ್ತಿತ್ತು. ಕಾಲಕ್ರಮೇಣ ಗುರುಕೃಪೆಯಿಂದ ನನ್ನ ಪ್ರಶ್ನೆಗಳಿಗೆ ಸೂಕ್ಷ್ಮದಿಂದ ಉತ್ತರ ಸಿಗಲು ಪ್ರಾರಂಭವಾಯಿತು. ಸೂಕ್ಷ್ಮದಿಂದ ಪಡೆದ ಜ್ಞಾನವು ಇತರರಿಗೆ ಅಭ್ಯಾಸಕ್ಕಾಗಿ ಸಿಗಲಿ, ಎಂದು ನಾನು ಅದನ್ನು ಗ್ರಂಥದ ರೂಪದಲ್ಲಿ ಪ್ರಕಟಿಸಲು ಆರಂಭಿಸಿದೆ. ಆ ಸಮಯದಲ್ಲಿ, ಗ್ರಂಥದಲ್ಲಿನ ವಿಷಯ ಪೂರ್ಣಗೊಳಿಸಲು ಅಥವಾ ಅದರ ಹೆಚ್ಚಿನ ವಿವರಣೆಯನ್ನು ನೀಡಲು ಇತರ ಲೇಖಕರ ಗ್ರಂಥಗಳನ್ನು ಓದಿದ ನಂತರ, ಅದರಲ್ಲಿನ ಆವಶ್ಯಕ ಲೇಖನ ನನ್ನ ಗ್ರಂಥದಲ್ಲಿ ತೆಗೆದುಕೊಳ್ಳತೊಡಗಿದೆನು.

ಆ ಸಮಯದಲ್ಲಿ ಗಮನಕ್ಕೆ ಬಂದ ಅಂಶವೆಂದರೆ, ‘ಸರ್ವಸಾಮಾನ್ಯ ಸಾಧಕರಿಗೆ ಅವನ ಇಷ್ಟವಾದ ವಿಷಯದ ಬಗ್ಗೆ ಜ್ಞಾನವನ್ನು ಪಡೆಯಲು ಅನೇಕ ಗ್ರಂಥಗಳನ್ನು ಓದಬೇಕಾಗುತ್ತದೆ. ಈ ಜ್ಞಾನ ಒಂದೆಡೆ ಅಭ್ಯಾಸಕ್ಕಾಗಿ ದೊರೆಯುವಂತಹ ಸೌಲಭ್ಯ ಎಲ್ಲಿಯೂ ಇಲ್ಲ.’

‘ಅಧ್ಯಾತ್ಮದಲ್ಲಿ ಯಾವುದೇ ಒಂದು ವಿಷಯದ ಸಂದರ್ಭದಲ್ಲಿ ವಿವಿಧ ಅಧಿಕಾರಿ ವ್ಯಕ್ತಿಗಳ ಲೇಖನಗಳ ಸಾರವನ್ನು ಒಂದೇ ಗ್ರಂಥದಲ್ಲಿ ಓದಲು ಸಿಗಬೇಕೆಂಬ’ ಧ್ಯೇಯದಿಂದ ನಾನು ಕಳೆದ ೩೫ ವರ್ಷಗಳಿಂದ ವಿವಿಧ ಗ್ರಂಥಗಳನ್ನು ಓದುತ್ತ, ಅವುಗಳ ಆವಶ್ಯಕ ಲೇಖನ ಸಂಗ್ರಹಿಸಿ, ವಿಷಯಾನುಸಾರ ವಿಭಜಿಸಿಡುತ್ತಾ ಬಂದಿದ್ದೇನೆ. ಈಗ ಈ ಸಂಗ್ರಹದ ಆಧಾರದಲ್ಲಿ ಪ್ರತಿಯೊಂದು ವಿಷಯದ ಸಂದರ್ಭದಲ್ಲಿ ಗ್ರಂಥ ಪ್ರಕಟಿಸಲು ಪ್ರಾರಂಭಿಸಿದ್ದೇನೆ. ಇದರಿಂದ ಯಾವುದೇ ಮಾರ್ಗದಿಂದ ಸಾಧನೆ ಮಾಡುವ ಸಾಧಕನಿಗೂ ಅವನಿಗೆ ಆವಶ್ಯಕವಿರುವ ಎಲ್ಲಾ ರೀತಿಯ ಜ್ಞಾನವು ಸನಾತನದ ಆಯಾ ವಿಷಯದ ಗ್ರಂಥಗಳಲ್ಲಿ ಸಿಗುವಂತೆ ಅನುಕೂಲವಾಗಬಹುದು’.

– ಸಚ್ಚಿದಾನಂದ ಪರಬ್ರಹ್ಮ ಡಾ.ಆಠವಲೆ