‘ಮ್ಯಾಕಡೊನಾಲ್ಡ್ಸ’, ‘ಸ್ಟಾರಬಕ್ಸ್’, ‘ಪೆಪ್ಸಿಕೊ’ ಮತ್ತು ‘ಕೋಕಾ-ಕೋಲಾ’ ಈ ಕಂಪನಿಗಳು ರಷ್ಯಾದಲ್ಲಿ ಕೆಲವು ಕಾಲಾವಧಿಯ ವರೆಗೆ ತಮ್ಮ ಉದ್ಯಮ ಸ್ಥಗಿತಗೊಳಿಸಿವೆ !

ರಷ್ಯಾದಿಂದ ಉಕ್ರೇನ ಮೇಲೆ ಆಕ್ರಮಣ ನಡೆಸುತ್ತಿರುವ ಕುರಿತು ನಿಷೇಧ ವ್ಯಕ್ತಪಡಿಸಲು ‘ಮ್ಯಾಕಡೊನಾಲ್ಡ್ಸ’, ‘ಸ್ಟಾರಬಕ್ಸ್’, ‘ಪೆಪ್ಸಿಕೊ’ ಮತ್ತು ‘ಕೋಕಾ-ಕೋಲಾ’ ಈ ಹೆಸರಾಂತ ಅಮೇರಿಕಾ ಕಂಪನಿಗಳು ರಷ್ಯಾದಲ್ಲಿರುವ ತಮ್ಮ ಉದ್ಯಮವನ್ನು ಕೆಲವು ಕಾಲಾವಧಿಯವರೆಗೆ ಸ್ಥಗಿತಗೊಳಿಸುವುದಾಗಿ ಘೋಷಿಸಿವೆ.

ಅಮೇರಿಕಾದಲ್ಲಿ ಸಿಖ್ಖರ ವಿರುದ್ಧ ಭೇದಭಾವ ಹೆಚ್ಚಳ ! – ಮಾನವ ಹಕ್ಕುಗಳ ತಜ್ಞರ ಅಭಿಪ್ರಾಯ

ಅಮೇರಿಕಾದಲ್ಲಿರುವ ಸಿಖ್ಖ ಸಮುದಾಯದ ವಿರುದ್ಧ ಧಾರ್ಮಿಕ ಭೇದಭಾವ ಮತ್ತು ದ್ವೇಷಪೂರಿತ ಅಪರಾಧಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಳವಾಗಿದೆಯೆಂದು ಹೆಸರಾಂತ ಮಾನವ ಹಕ್ಕುಗಳ ತಜ್ಞರಾದ ಶ್ರೀಮತಿ ಅಮೃತಕೌರ ಆಕರೆಯವರು ಇತ್ತೀಚೆಗಷ್ಟೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಶಾರೀರಿಕ ಸಂಬಂಧಕ್ಕಾಗಿ ಚಿಕ್ಕ ಮಕ್ಕಳ ಖರೀದಿ-ಮಾರಾಟ ಮಾಡುವ ವ್ಯಕ್ತಿಗೆ ಬಿಲ್‌ ಗೇಟ್ಸ ಭೇಟಿಯಾಗುತ್ತಿದ್ದರು ! – ಗೇಟ್ಸ್‌ರವರ ಮಾಜಿ ಪತ್ನಿ ಮೆಲಿಂಡಾ ಗೇಟ್ಸ್‌ರವರ ಹೇಳಿಕೆ

‘ಮೈಕ್ರೋಸಾಫ್ಟ್‌’ ಸಂಸ್ಥೆಯ ಸಹಸಂಸ್ಥಾಪಕರಾದ ಮತ್ತು ಜಗತ್ತಿನ ಅತ್ಯಂತ ಶ್ರೀಮಂತರ ಪೈಕಿ ಒಬ್ಬರಾದ ಬಿಲ್‌ ಗೇಟ್ಸ್‌ರವರ ವಿವಾಹ ವಿಚ್ಛೇದನದ ನಂತರ ಅವರ ಮಾಜಿ ಪತ್ನಿ ಫ್ರೆಂಚ ಮೆಲಿಂಡಾ ಗೇಟ್ಸ್‌ರವರು ಮೊದಲ ಬಾರಿಗೆ ಕೆಲವು ವಿಷಯಗಳನ್ನು ಬಹಿರಂಗಗೊಳಿಸಿದ್ದಾರೆ.

ಯುಕ್ರೇನಿನಲ್ಲಿರುವ ಆಸ್ಪತ್ರೆಗಳಲ್ಲಿ ಆಮ್ಲಜನಕದ (ಆಕ್ಸಿಜನ್‌ನ) ಭಾರಿ ಕೊರತೆ

ಯುಕ್ರೇನನಲ್ಲಿ ಆಮ್ಲಜನಕದ (ಆಕ್ಸಿಜನ್‌ನ) ಭಾರಿ ಕೊರತೆ ನಿರ್ಮಾಣವಾಗಿದೆ. ಇದರಿಂದ ಮೊದಲೇ ಸಂಕಟದಲ್ಲಿರುವ ಯುಕ್ರೇನ ಇನ್ನೂ ಸಂಕಟದಲ್ಲಿ ಸಿಲುಕಿದೆ. ಆದುದರಿಂದ ಜಾಗತಿಕ ಆರೋಗ್ಯ ಸಂಘಟನೆಯು ಚಿಂತೆ ವ್ಯಕ್ತಪಡಿಸಿದ್ದು ‘ಯುಕ್ರೇನಿನಲ್ಲಿರುವ ಆಸ್ಪತ್ರೆಗಳಿಗೆ ತಕ್ಷಣ ಆಮ್ಲಜನಕವನ್ನು ನೀಡದಿದ್ದರೆ ದೊಡ್ಡ ಅನರ್ಥ ಸಂಭವಿಸಬಹುದು

ಪುತಿನ್ ಇವರು ಜೋ ಬಾಯಿಡೆನರನ್ನು ಡೋಲಿನಂತೆ ಬಾರಿಸುತ್ತಿದ್ದಾರೆ – ಅಮೇರಿಕದ ಮಾಜಿ ರಾಷ್ಟ್ರಧ್ಯಕ್ಷ ಡೋನಾಲ್ಡ ಟ್ರಂಪ್‍ರ ಟೀಕೆ

ನನ್ನ ಆಡಳಿತಾವಧಿಯಲ್ಲಿ ಯುದ್ಧವಾಗಲಿಲ್ಲ. ನಾನು ಅಮೇರಿಕವನ್ನು ಯುದ್ಧದಿಂದ ಹೊರತೆಗೆದೆನು. ದುರ್ಬಲ ರಾಷ್ಟ್ರಾಧ್ಯಕ್ಷರಿಂದ ಈ ಜಗತ್ತು ಯಾವಾಗಲೂ ಹೆದರಿಕೆಯ ನೆರಳಲ್ಲಿಯೇ ಇರುವುದು ಎಂದು ಅಮೇರಿಕದ ಮಾಜಿ ರಾಷ್ಟ್ರಾಧ್ಯಕ್ಷ ಡೋನಾಲ್ಢ ಟ್ರಂಪ್‍ರು ಒಂದು ಕಾರ್ಯಕ್ರಮದಲ್ಲಿ ಮಾತನಾಡುವಾಗ ಟೀಕಿಸಿದರು

ಮೂರನೇ ಮಹಾಯುದ್ಧವನ್ನು ತಪ್ಪಿಸ ಬೇಕಾದರೆ, ರಷ್ಯಾದ ಮೇಲೆ ನಿರ್ಬಂಧ ಹೇರುವುದು ಅತ್ಯಂತ ಆವಶ್ಯಕ ! – ಅಮೇರಿಕಾ

ಮೂರನೇ ಜಾಗತಿಕ ಮಹಾಯುದ್ಧವನ್ನು ತಪ್ಪಿಸಬೇಕಾದರೆ ರಷ್ಯಾದ ಮೇಲೆ ನಿರ್ಬಂಧ ಹೇರುವುದು ಅತ್ಯಂತ ಆವಶ್ಯಕವಾಗಿದೆ, ಎಂದು ಅಮೇರಿಕಾದ ರಾಷ್ಟ್ರಾಧ್ಯಕ್ಷ ಜೋ ಬಾಯಡೆನ್‌ರವರು ಹೇಳಿದ್ದಾರೆ. ರಷ್ಯಾದ ವಾರ್ತಾಸಂಸ್ಥೆಯಾದ ‘ತಾಸ ಈ ಸಮಾಚಾರವನ್ನು ಪ್ರಸಾರ ಮಾಡಿದೆ.

ಅಮೇರಿಕಾದ ೪೦ ವಿದ್ಯಾಪೀಠಗಳಲ್ಲಿ ಜೈನ್ ಧರ್ಮದ ಪಠ್ಯಕ್ರಮವನ್ನು ಕಲಿಸಲಾಗುವುದು !

ಅಮೇರಿಕಾದ ವಿಸ್ಕಾನ್ಸಿನ್ ವಿದ್ಯಾಪೀಠ, ಕನೆಕ್ಟಿಕಟ್ ವಿದ್ಯಾಪೀಠ, ಕ್ಯಾಲಿಫೋರ್ನಿಯಾ ವಿದ್ಯಾಪೀಠ ಮತ್ತು ಫ್ಲೋರಿಡಾ ವಿದ್ಯಾಪೀಠ ಸೇರಿದಂತೆ ೪೦ ವಿದ್ಯಾಪೀಠಗಳಲ್ಲಿ ಜೈನ್ ಧರ್ಮದ ಪಠ್ಯಕ್ರಮವನ್ನು ಬೋದಿಸಲಾಗುವುದು. ಇದರಲ್ಲಿ ವಿದ್ಯಾರ್ಥಿಗಳು ಪಿ.ಎಚ್.ಡಿ. ಮಾಡಬಹುದು.

ಕೆನಡಾದ ಸಂಸತ್ತಿನಲ್ಲಿ ಖಲಿಸ್ತಾನವಾದಿ ಸಿಕ್ಖ್ ನಾಯಕನ ಬೆಂಬಲಿಗರಿಂದ ಎಲ್ಲ ಸ್ವಸ್ತಿಕಗಳ ಮೇಲೆ ನಿಷೇಧ ಹೇರುವಂತೆ ಮಸೂದೆ ಮಂಡನೆ

ಕೆನಡಾದ ಆಂದೋಲನದಲ್ಲಿ ನಾಜಿಯ ಸ್ವಸ್ತಿಕ ಇರುವ ಧ್ವಜದ ಬಳಕೆ ಮಾಡಿದ ಪರಿಣಾಮ

ಕೊರೊನದಿಂದ ಗುಣಮುಖರಾದವರ ಪೈಕಿ 1 ಕೋಟಿ ಜನರಿಗೆ ಮಾನಸಿಕ ರೋಗ

ಜಗತ್ತಿನೆಲ್ಲೆಡೆ ಈವರೆಗೆ 41 ಕೋಟಿ 80 ಲಕ್ಷ ಜನರಿಗೆ ಕೊರೋನಾದ ಸೋಂಕು ತಗಲಿದೆ ಅದರಲ್ಲಿ 1 ಕೋಟಿ 48 ಲಕ್ಷ ಜನರಿಗೆ ಈಗ ಮಾನಸಿಕ ರೋಗವು ಬಂದಿದೆ, ಎಂದು ಒಂದು ಅಭ್ಯಾಸದಿಂದ ಕಂಡುಬಂದಿದೆ

ಟ್ರಕ್ ಚಾಲಕರ ಆಂದೋಲನದಿಂದಾಗಿ ಕೆನಡಾದಲ್ಲಿ ತುರ್ತು ಪರಿಸ್ಥಿತಿ ಜಾರಿ

ಕೆನಡಾದಲ್ಲಿ ಕೊರೋನಾ ಪ್ರತಿಬಂಧಾತ್ಮಕ ಲಸಿಕೆ ಹಾಕಿಸಿ ಕೊಳ್ಳುವುದು ಕಡ್ಡಾಯ ಮಾಡಿದ್ದರಿಂದ ಕಳೆದ ಕೆಲವು ದಿನಗಳಿಂದ ದೇಶಾದ್ಯಂತ ಇದಕ್ಕೆ ವಿರೋಧವಾಗುತ್ತದೆ. ಪ್ರಧಾನಿ ಜಸ್ಟಿನ್ ಟ್ರುಡೋ ಇವರ ನಿವಾಸಸ್ಥಾನದಲ್ಲಿ ೨೦ ಸಾವಿರ ಟ್ರಕ್ಕುಗಳ ಮೂಲಕ ೫೦ ಸಾವಿರ ಟ್ರಕ್ ಚಾಲಕರು ಸುತ್ತುವರೆದರು.