ನವದೆಹಲಿ – ‘ಮೈಕ್ರೋಸಾಫ್ಟ್’ ಸಂಸ್ಥೆಯ ಸಹಸಂಸ್ಥಾಪಕರಾದ ಮತ್ತು ಜಗತ್ತಿನ ಅತ್ಯಂತ ಶ್ರೀಮಂತರ ಪೈಕಿ ಒಬ್ಬರಾದ ಬಿಲ್ ಗೇಟ್ಸ್‌ರವರ ವಿವಾಹ ವಿಚ್ಛೇದನದ ನಂತರ ಅವರ ಮಾಜಿ ಪತ್ನಿ ಫ್ರೆಂಚ ಮೆಲಿಂಡಾ ಗೇಟ್ಸ್‌ರವರು ಮೊದಲ ಬಾರಿಗೆ ಕೆಲವು ವಿಷಯಗಳನ್ನು ಬಹಿರಂಗಗೊಳಿಸಿದ್ದಾರೆ. ಅವರು ‘ಬಿಲ್ ಗೇಟ್ಸ್‌ರವರು ಕಳೆದ ಕೆಲವು ವರ್ಷಗಳಲ್ಲಿ ಅನೇಕ ಬಾರಿ ಜೆಫರೀ ಎಪಸ್ಟಿನನನ್ನು ಭೇಟಿಯಾಗಿದ್ದಾರೆ’ ಎಂಬ ಹೇಳಿಕೆಯನ್ನು ನೀಡಿದ್ದಾರೆ. ಎಪಸ್ಟಿನನನ್ನು ಅಮೇರಿಕಾದ ಪೊಲೀಸರು ಶಾರೀರಿಕ ಸಂಬಂಧಕ್ಕಾಗಿ ಚಿಕ್ಕ ಮಕ್ಕಳ ಖರೀದಿ ಮತ್ತು ಮಾರಾಟ ಮಾಡುವ ಪ್ರಕರಣದಲ್ಲಿ ಬಂಧಿಸಿದ್ದರು. ಬಂಧನದಲ್ಲಿರುವಾಗಲೇ ಆಗಸ್ಟ್ ೨೦೧೯ರಲ್ಲಿ ಅವನು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದನು.
Bill Gates’ ex-wife, Melinda French Gates, recalls meeting Jeffrey Epstein: ‘He was evil personified’https://t.co/3SQfrAjwxv
— FOX Business (@FoxBusiness) March 4, 2022
೧. ಮೆಲಿಂಡಾರವರು ಒಂದು ಸಂದರ್ಶನದಲ್ಲಿ ಈ ಹೇಳಿಕೆಯನ್ನು ನೀಡಿದ್ದರು. ‘ಬಿಲಗೇಟ್ಸ್ ರವರು ಎಪಸ್ಟಿನನನ್ನು ಭೇಟಿಯಾಗಬಾರದೆಂದು ನೀವು ಏನಾದರೂ ಪ್ರಯತ್ನ ಮಾಡಿರುವಿರೇ ?’ ಎಂಬ ಪ್ರಶ್ನೆಗೆ ಮೆಲಿಂಡಾರವರು ಯಾವುದೇ ಉತ್ತರ ನೀಡಲಿಲ್ಲ. ಅವರು ಈ ವಿಷಯದಲ್ಲಿ ಬಿಲ ಗೇಟ್ಸ್‌ರವರೇ ಸ್ಪಷ್ಟೀಕರಣ ನೀಡಬೇಕು. ಅವರೇ ಇಂತಹ ಪ್ರಶ್ನೆಗಳನ್ನು ಉತ್ತರಿಸಬಲ್ಲರು. ವಿಚ್ಛೇದನದ ಅನೇಕ ಕಾರಣಗಳಲ್ಲಿ ಈ ಭೇಟಿಯೂ ಒಂದು ಕಾರಣವಾಗಿತ್ತು’ ಎಂದು ಹೇಳಿದರು.
೨. ಮೆಲಿಂಡಾರವರು ಮಾತನ್ನು ಮುಂದುವರಿಸುತ್ತ ‘ನನಗೆ ಎಪಸ್ಟಿನರನ್ನು ಭೇಟಿಯಾಗಿ ‘ಈ ವ್ಯಕ್ತಿ ಹೇಗಿದ್ದಾನೆ ?’ ಎಂಬುದನ್ನು ನೋಡಬೇಕಿತ್ತು. ನಾನು ಆತನನ್ನು ಭೇಟಿಯಾದಾಗ ಆತನು ಓರ್ವ ದುಷ್ಟ ಎಂಬುದು ನನ್ನ ಗಮನಕ್ಕೆ ಬಂದಿತು. ನನಗೆ ಈ ಭೇಟಿಯ ಅನುಭವವು ಒಂದು ಭಯಾನಕ ಕನಸಿನಂತಾಗಿತ್ತು. ನನಗೆ ಈ ಘಟನೆಯ ನೆನಪಾದರೂ ಭಯವಾಗುತ್ತದೆ. ನಾನು ಆ ವ್ಯಕ್ತಿಯನ್ನು ಏಕೆ ಭೇಟಿಯಾದೆ ? ಎಂಬ ಪ್ರಶ್ನೆಯು ನನಗೆ ಕಾಡುತ್ತಿರುತ್ತದೆ’ ಎಂದು ಹೇಳಿದರು.