ಕೆನಡಾದ ಸಂಸತ್ತಿನಲ್ಲಿ ಖಲಿಸ್ತಾನವಾದಿ ಸಿಕ್ಖ್ ನಾಯಕನ ಬೆಂಬಲಿಗರಿಂದ ಎಲ್ಲ ಸ್ವಸ್ತಿಕಗಳ ಮೇಲೆ ನಿಷೇಧ ಹೇರುವಂತೆ ಮಸೂದೆ ಮಂಡನೆ

ಕೆನಡಾದ ಆಂದೋಲನದಲ್ಲಿ ನಾಜಿಯ ಸ್ವಸ್ತಿಕ ಇರುವ ಧ್ವಜದ ಬಳಕೆ ಮಾಡಿದ ಪರಿಣಾಮ

ಅಮೇರಿಕದ ಹಿಂದೂ ಸಂಘಟನೆಯಿಂದ ಹಿಂದೂಗಳ ಸ್ವಸ್ತಿಕದ ಮೇಲೆ ನಿಷೇಧ ಹೇರದಿರಲು ಮನವಿ

ಖಾಲಿಸ್ತಾನವಾದಿಗಳಿಗೆ ಇಂತಹ ಪ್ರಕರಣಗಳಿಂದಾಗಿ ಹಿಂದೂದ್ವೇಷ ಮಾಡಲು ಅವಕಾಶ ಸಿಕ್ಕಿದಂತಾಗಿದೆ, ಎಂಬುದು ಇದರಿಂದ ಗಮನಕ್ಕೆ ಬರುತ್ತದೆ ! – ಸಂಪಾದಕರು 

(ಎಡದಲ್ಲಿ ) ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ

ಒಟಾವಾ (ಕೆನಡಾ) – ಕೆನಡಾದಲ್ಲಿ ಕಳೆದ ಕೆಲವು ವಾರಗಳಿಂದ ಟ್ರಕ್ ಚಾಲಕರು ಮತ್ತು ಸಾರ್ವಜನಿಕರು ಕೊರೊನಾ ಲಸಿಕೆಯ ಕಡ್ಡಾಯ ಮಾಡಿದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವುದರಿಂದ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ. ಈ ಆಂದೊಲನದ ಸಮಯದಲ್ಲಿ ಕೆಲವರಿಂದ ನಾಜಿಯ ಸ್ವಸ್ತಿಕದ ಚಿಹ್ನೆ ಇರುವ ಧ್ವಜಗಳನ್ನು ಬಳಸಿದರು. ಇದರಿಂದಾಗಿ ಕೆನಡಾದ ಸರಕಾರವು ಎಲ್ಲಾ ಸ್ವಸ್ತಿಕಗಳನ್ನು ನಿಷೇಧಿಸುವ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿದೆ.

`ನ್ಯೂ ಡೆಮಾಕ್ರಟಿಕ್ ಪಕ್ಷ’ದ ನಾಯಕ ಜಗಮಿತ್ ಸಿಂಹ ಅವರನ್ನು ಬೆಂಬಲಿಸಿ ಸದಸ್ಯರು ಮಸೂದೆಯನ್ನು ಮಂಡಿಸಿದರು. ಇದನ್ನು ಕೆನಡಾದಲ್ಲಿಯ ಹಿಂದೂಗಳು ವಿರೋಧಿಸುತ್ತಿದ್ದಾರೆ.

ಜಗಮಿತ್ ಸಿಂಹ ಇವನು ಖಲಿಸ್ತಾನ ಮತ್ತು ಪಾಕಿಸ್ತಾನದ ಕಟ್ಟಾ ಬೆಂಬಲಿಗರಿದ್ದಾರೆ.

ಅಮೇರಿಕಾದ ಒಂದು ಮುಖ್ಯ ಹಿಂದೂ ಸಂಘಟನೆಯು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಮತ್ತು ಮಸೂದೆಯನ್ನು ಬೆಂಬಲಿಸುವ ಭಾರತೀಯ ಮೂಲದ ನಾಯಕ ಜಗಮಿತ್ ಸಿಂಹ ಅವರಲ್ಲಿ ನಿಷೇಧಿಸದಂತೆ ಒತ್ತಾಯಿಸಿದೆ. ಹಿಂದೂ ಸಂಘಟನೆಯು, ನಾಜಿಯ ಸ್ವಸ್ತಿಕಕ್ಕೂ ಹಿಂದೂ ಧರ್ಮದಲ್ಲಿರುವ ಪ್ರಾಚೀನ ಮತ್ತು ಶುಭವೆಂದು ಪರಿಗಣಿಸಲ್ಪಡುವ ಸ್ವಸ್ತಿಕಕ್ಕೂ ವ್ಯತ್ಯಾಸವಿದೆ ಎಂದು ಹೇಳಿದೆ.