ನ್ಯೂಯಾರ್ಕ (ಅಮೇರಿಕಾ) – ರಷ್ಯಾದಿಂದ ಉಕ್ರೇನ ಮೇಲೆ ಆಕ್ರಮಣ ನಡೆಸುತ್ತಿರುವ ಕುರಿತು ನಿಷೇಧ ವ್ಯಕ್ತಪಡಿಸಲು ‘ಮ್ಯಾಕಡೊನಾಲ್ಡ್ಸ’, ‘ಸ್ಟಾರಬಕ್ಸ್’, ‘ಪೆಪ್ಸಿಕೊ’ ಮತ್ತು ‘ಕೋಕಾ-ಕೋಲಾ’ ಈ ಹೆಸರಾಂತ ಅಮೇರಿಕಾ ಕಂಪನಿಗಳು ರಷ್ಯಾದಲ್ಲಿರುವ ತಮ್ಮ ಉದ್ಯಮವನ್ನು ಕೆಲವು ಕಾಲಾವಧಿಯವರೆಗೆ ಸ್ಥಗಿತಗೊಳಿಸುವುದಾಗಿ ಘೋಷಿಸಿವೆ.
McDonald’s, Starbucks, PepsiCo, Coca-Cola suspend business in Russia @McDonalds @Starbucks @PepsiCo @CocaCola https://t.co/M0d6FnFiZs
— Dynamite News (@DynamiteNews_) March 9, 2022
೧. ‘ಉಕ್ರೇನ್‌ನಲದಲಿಯ ಭಯಾನಕ ಆಗುಹೋಗುಗಳನ್ನು ಕಂಡು ನಾವು ಪೆಪ್ಸಿಕೊದೊಂದಿಗೆ ನಮ್ಮ ‘ಸೆವನ್‌ಅಪ್’ ಮತ್ತು ‘ಮಿರಿಂಡಾ’ ಈ ತಂಪು ಪಾನೀಯಗಳ ಮಾರಾಟವನ್ನು ಕೂಡ ಸ್ಥಗಿತಗೊಳಿಸಿದ್ದೇವೆ’. ಎಂದು ಪೆಪ್ಸಿಕೊ ಕಂಪನಿಯ ಮುಖ್ಯ ಕಾರ್ಯಕಾರಿ ಅಧಿಕಾರಿ ರಮನ ಲಗುಆರ್ತಾ ಇವರು ಮಾಹಿತಿ ನೀಡಿದ್ದಾರೆ.
೨. ಕೋಕಾ-ಕೋಲಾದ ಮುಖ್ಯಾಧಿಕಾರಿಗಳು ತಾವು ಉಕ್ರೇನ ನಾಗರಿಕರ ಪರವಾಗಿ ಇರುವುದಾಗಿ ಘೋಷಿಸಿ ಕೋಕಾ-ಕೋಲಾದೊಂದಿಗೆ ‘ಸ್ಪ್ರೈಟ್’ ಮತ್ತು ‘ಫಾಂಟಾ’ ಈ ತಮ್ಮ ತಂಪು ಪಾನೀಯಗಳ ಮಾರಾಟವನ್ನು ಸದ್ಯ ರಷ್ಯಾದಲ್ಲಿ ಸ್ಥಗಿತಗೊಳಿಸುವುದಾಗಿ ಸ್ಪಷ್ಟ ಪಡಿಸಿದ್ದಾರೆ.
೩. ಮ್ಯಾಕಡೊನಾಲ್ಡ್ ಕೂಡ ರಷ್ಯಾದಲ್ಲಿರುವ ತಮ್ಮ ಎಲ್ಲ ಹೊಟೆಲಗಳನ್ನು ಮುಚ್ಚಲು ನಿರ್ಧರಿಸಿದ್ದಾರೆ.