ಕೊರೊನದಿಂದ ಗುಣಮುಖರಾದವರ ಪೈಕಿ 1 ಕೋಟಿ ಜನರಿಗೆ ಮಾನಸಿಕ ರೋಗ

ವಾಶಿಂಗ್ಟನ್ (ಅಮೇರಿಕ) – ಜಗತ್ತಿನೆಲ್ಲೆಡೆ ಈವರೆಗೆ 41 ಕೋಟಿ 80 ಲಕ್ಷ ಜನರಿಗೆ ಕೊರೋನಾದ ಸೋಂಕು ತಗಲಿದೆ ಅದರಲ್ಲಿ 1 ಕೋಟಿ 48 ಲಕ್ಷ ಜನರಿಗೆ ಈಗ ಮಾನಸಿಕ ರೋಗವು ಬಂದಿದೆ, ಎಂದು ಒಂದು ಅಭ್ಯಾಸದಿಂದ ಕಂಡುಬಂದಿದೆ ಈ ಜನರಿಗೆ ಚಿಂತೆ, ನಿರಾಶೆ, ನಿದ್ರೆ ಬಾರದಿರುವುದು ಮುಂತಾದ ಲಕ್ಷಣಗಳು ಕಂಡುಬಂದಿದೆ. ‘ಈ ಸಂಖ್ಯೆ ಹೆಚ್ಚು ಇರಬಹುದು’, ಎಂದು ವಾಶಿಂಗ್ಟನ್ ವಿಶ್ವವಿದ್ಯಾಲಯದ ಸಂಶೋದಕರಾದ ಅಲ್ ಎಲೀಯವರು ಹೇಳಿದ್ದಾರೆ.

ಕೊರೋನ ಆಗದೇ ಇರುವವರ ತುಲನೆಯಲ್ಲಿ ಆಗಿರುವ ಜನರಲ್ಲಿ ಮಾನಸಿಕ ರೋಗವು ಉಂಟಾಗುವ ಶಕ್ಯತೆಯು ಶೇ. 66 ರಷ್ಟಿದೆ ಎಂದು ಕಂಡುಬಂದಿದೆ. ಮಾನಸಿಕ ರೋಗವಾದ ಶೇ. 34 ಕ್ಕಿಂತ ಹೆಚ್ಚು ಜನ ಅಫಿಮು ಉಪಯೋಗ ಮಾಡಲಾದ ಔಷದಿಯ ವ್ಯಸನವು ಉಂಟಾಗುವ ಸಾಧ್ಯತೆ ಇರಬಹುದು ಎಂದು ಗಮನಕ್ಕೆ ಬಂದಿದೆ ಮದ್ಯ ಅಥವಾ ಬೇರೆ ಯಾವುದೇ ಮಾದಕ ಪದಾರ್ಥದ ವ್ಯಸನದ ಸಾಧ್ಯತೆಯು ಶೇ. 20 ಕಂಡುಬಂದಿದೆ ಹಾಗೆಯೇ ಶೇ. 47 ರಷ್ಟು ಜನರಲ್ಲಿ ಆತ್ಮಹತ್ಯೆಯ ವಿಚಾರ ಮಾಡುವ ಸಾಧ್ಯತೆಯಿದೆ ಅದುದರಿಂದ ಈ ಸಂದರ್ಭದ ಔಷದಿಗಳ ಮಾರಾಟವು ಹೆಚ್ಚಾಗಿರುವುದು ಕಂಡುಬಂದಿದೆ, ಎಂದು ಅಭ್ಯಾಸದಿಂದ ಬೆಳಕಿಗೆ ಬಂದಿದೆ.