ಮೂರನೇ ಮಹಾಯುದ್ಧವನ್ನು ತಪ್ಪಿಸ ಬೇಕಾದರೆ, ರಷ್ಯಾದ ಮೇಲೆ ನಿರ್ಬಂಧ ಹೇರುವುದು ಅತ್ಯಂತ ಆವಶ್ಯಕ ! – ಅಮೇರಿಕಾ

ವಾಷಿಂಗ್ಟನ್ (ಅಮೇರಿಕಾ) – ಮೂರನೇ ಜಾಗತಿಕ ಮಹಾಯುದ್ಧವನ್ನು ತಪ್ಪಿಸಬೇಕಾದರೆ ರಷ್ಯಾದ ಮೇಲೆ ನಿರ್ಬಂಧ ಹೇರುವುದು ಅತ್ಯಂತ ಆವಶ್ಯಕವಾಗಿದೆ, ಎಂದು ಅಮೇರಿಕಾದ ರಾಷ್ಟ್ರಾಧ್ಯಕ್ಷ ಜೋ ಬಾಯಡೆನ್‌ರವರು ಹೇಳಿದ್ದಾರೆ. ರಷ್ಯಾದ ವಾರ್ತಾಸಂಸ್ಥೆಯಾದ ‘ತಾಸ ಈ ಸಮಾಚಾರವನ್ನು ಪ್ರಸಾರ ಮಾಡಿದೆ.

ಬಾಯಡೆನ್‌ರವರು ಮುಂದುವರಿದು ‘ಈಗ ಜಗತ್ತಿನ ಬಳಿ ಎರಡೇ ಪರ್ಯಾಯವಿದೆ, ಒಂದು ಮೂರನೆಯ ಮಹಾಯುದ್ಧವನ್ನು ಆರಂಭಿಸುವುದು ಮತ್ತು ನೇರವಾಗಿ ರಷ್ಯಾದ ಸೈನ್ಯದ ಜೊತೆಗೆ ಎದುರು-ಬದುರು ಹೋರಾಡುವುದು ಅಥವಾ ಯಾವ ದೇಶಗಳು (ರಷ್ಯಾ) ಅಂತರರಾಷ್ಟ್ರೀಯ ನಿಯಮಗಳನ್ನು ಪಾಲಿಸುತ್ತಿಲ್ಲ, ಅವುಗಳಿಗೆ ಅದರ ಬೆಲೆ ತೆರುವಂತೆ ಮಾಡುವುದು. ಈ ನಿರ್ಬಂಧ ಹೇಗಿರುವುದು ಎಂಬುದರ ನಿಜವಾದ ಸ್ವರೂಪವನ್ನು ಈಗಲೇ ಹೇಳುವುದು ಕಠಿಣವಾಗಿದೆ, ಆದರೆ ನನಗೆ ಇದು ಇಲ್ಲಿಯವರೆಗಿನ ಇತಿಹಾಸದಲ್ಲಿನ ಎಲ್ಲಕ್ಕಿಂತ ಕಠೋರ ನಿರ್ಬಂಧವಾಗಲಿದೆ ಎಂದು ಅನಿಸುತ್ತದೆ. ರಷ್ಯಾಗೆ ತನ್ನ ಈ ವರ್ತನೆಗಾಗಿ ದೀರ್ಘಕಾಲದವರೆಗೆ ದೊಡ್ಡಬೆಲೆ ತೆರಬೇಕಾಗಬಹುದು ಎಂದು ಹೇಳಿದರು.