ಅಮೇರಿಕಾದ ೪೦ ವಿದ್ಯಾಪೀಠಗಳಲ್ಲಿ ಜೈನ್ ಧರ್ಮದ ಪಠ್ಯಕ್ರಮವನ್ನು ಕಲಿಸಲಾಗುವುದು !

ಸಾಂಧರ್ಭಿಕ ಚಿತ್ರ

ನ್ಯೂಯಾರ್ಕ್ (ಅಮೇರಿಕ) – ಅಮೇರಿಕಾದ ವಿಸ್ಕಾನ್ಸಿನ್ ವಿದ್ಯಾಪೀಠ, ಕನೆಕ್ಟಿಕಟ್ ವಿದ್ಯಾಪೀಠ, ಕ್ಯಾಲಿಫೋರ್ನಿಯಾ ವಿದ್ಯಾಪೀಠ ಮತ್ತು ಫ್ಲೋರಿಡಾ ವಿದ್ಯಾಪೀಠ ಸೇರಿದಂತೆ ೪೦ ವಿದ್ಯಾಪೀಠಗಳಲ್ಲಿ ಜೈನ್ ಧರ್ಮದ ಪಠ್ಯಕ್ರಮವನ್ನು ಬೋದಿಸಲಾಗುವುದು. ಇದರಲ್ಲಿ ವಿದ್ಯಾರ್ಥಿಗಳು ಪಿ.ಎಚ್.ಡಿ. ಮಾಡಬಹುದು. ಅಹಿಂಸೆ ತತ್ತ್ವ ಮತ್ತು ಸಾತ್ವಿಕ ಆಹಾರಗಳ ಕುರಿತು ವಿಶೇಷ ಪಠ್ಯ ಕ್ರಮಗಳು ಇರುತ್ತವೆ. ಎಂದು ‘ಫೆಡರೆಶನ್ ಆಫ್ ಅಸೋಶಿಯೆಶನ್ಸ್ ಆಫ್ ನಾರ್ಥ’ ಈ ಸಂಸ್ಥೆಯು ಮಾಹಿತಿ ನೀಡಿದೆ ಅಮೇರಿಕಾ ಹೊರತುಪಡಿಸಿ ಇಸ್ರೇಲ್, ಯುನೈಟೆಡ್ ಅರಬ್ ಎಮಿರೆಟ್ಸ್ ಮತ್ತು ಏಷ್ಯಾದ ಕೆಲವು ದೇಶಗಳ ವಿದ್ಯಾಪೀಠಗಳೂ ಕೂಡ ಜೈನ್ ಧರ್ಮದ ಬಗ್ಗೆ ಪಠ್ಯಕ್ರಮಗಳನ್ನು ಸೇರಿಸಲಿದೆ. ಅಮೇರಿಕಾ ಮತ್ತು ಇತರ ದೇಶಗಳ ವಿದ್ಯಾಪೀಠಗಳಲ್ಲಿ ಈ ಪಠ್ಯಕ್ರಮವನ್ನು ಪ್ರಾರಂಭಗೊಳಿಸುವ ಯೋಜನೆಯು ೪೫೦ ಕೋಟಿ ರೂಪಾಯಿಗಳಷ್ಟಿದೆ.

‘ಫೆಡರೇಶನ್ ಆಫ ಜೈನ್ ಅಸೋಶಿಯೆಶನ್ಸ್ ಆಫ್ ನಾರ್ಥ್’ ಈ ಸಂಸ್ಥೆಯ ಅಧ್ಯಕ್ಷ ಡಾ. ಸುಲೇಖ್ ಜೈನ್ ಇವರು ಮಾತನಾಡುತ್ತಾ, ಪ್ರಸ್ತುತ ಅಮೇರಿಕಾ ಸೇರಿದಂತೆ ಹಲವು ದೇಶಗಳಲ್ಲಿ ಅಹಿಂಸೆ, ಸಾತ್ವಿಕ ಆಹಾರ ಇತ್ಯಾದಿ ಪದಗಳ ಬಳಕೆ ಹೆಚ್ಚಾಗಿದೆ. ಅನೇಕರು ಈ ಪರಿಕಲ್ಪನೆಯನ್ನು ಅರ್ಥ ಮಾಡಿಕೊಳ್ಳಲು ಮತ್ತು ಅದರಂತೆ ಕಾರ್ಯ ನಿರ್ವಹಿಸಲು ಸಿದ್ಧತೆಯನ್ನು ತೋರಿಸಿದ್ದಾರೆ. ಆದ್ದರಿಂದ ಜನರು ಜೈನ್ ಧರ್ಮದ ಬಗ್ಗೆ ಹೆಚ್ಚು ತಿಳದುಕೊಳ್ಳಬೇಕು; ಆದ್ದರಿಂದ ನಾವು ವಿವಿಧ ವಿದ್ಯಾಪೀಠಗಳಲ್ಲಿ ಅವರ ಪಠ್ಯಕ್ರಮಗಳನ್ನು ಪ್ರಾರಂಭಿಸಲು ಪ್ರಯತ್ನಿಸುತ್ತಿದ್ದೇವೆ. ಸುಮಾರು ಒಂದುವರೆ ಲಕ್ಷ ಜೈನ್‌ರು ಅಮೇರಿಕಾ ಮತ್ತು ಕೆನಡಾದಲ್ಲಿ ವಾಸಿಸುತ್ತಿದ್ದಾರೆ. ಇಂತಹ ಯೋಜನೆಗಳಿಗೆ ಅವರ ಕಡೆಯಿಂದ ದೇಣಿಗೆ ದೊರೆಯುತ್ತದೆ. ಅದರಿಂದ ಜೈನ್ ದರ್ಮದ ಬಗ್ಗೆ ಆಳವಾದ ಸಂಶೋಧನೆ ನಡೆಯುತ್ತದೆ. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನೂ ಕೂಡಾ ನೀಡಲಾಗುತ್ತದೆ ಎಂದು ಹೇಳಿದರು.