ಟ್ರಕ್ ಚಾಲಕರ ಆಂದೋಲನದಿಂದಾಗಿ ಕೆನಡಾದಲ್ಲಿ ತುರ್ತು ಪರಿಸ್ಥಿತಿ ಜಾರಿ

ಓಟಾವಾ (ಕೆನಡಾ) – ಕೆನಡಾದಲ್ಲಿ ಕೊರೋನಾ ಪ್ರತಿಬಂಧಾತ್ಮಕ ಲಸಿಕೆ ಹಾಕಿಸಿ ಕೊಳ್ಳುವುದು ಕಡ್ಡಾಯ ಮಾಡಿದ್ದರಿಂದ ಕಳೆದ ಕೆಲವು ದಿನಗಳಿಂದ ದೇಶಾದ್ಯಂತ ಇದಕ್ಕೆ ವಿರೋಧವಾಗುತ್ತದೆ. ಪ್ರಧಾನಿ ಜಸ್ಟಿನ್ ಟ್ರುಡೋ ಇವರ ನಿವಾಸಸ್ಥಾನದಲ್ಲಿ ೨೦ ಸಾವಿರ ಟ್ರಕ್ಕುಗಳ ಮೂಲಕ ೫೦ ಸಾವಿರ ಟ್ರಕ್ ಚಾಲಕರು ಸುತ್ತುವರೆದರು. ಈ ಹಿನ್ನಲೆಯಲ್ಲಿ ಟ್ರುಡೋ ಇವರು ದೇಶದಲ್ಲಿ ತುರ್ತುಪರಿಸ್ಥಿತಿ ಜಾರಿ ಮಾಡಿದ್ದಾರೆ. ಕೆನಡಾದಲ್ಲಿ ೫೦ ವರ್ಷಗಳಲ್ಲಿ ಇದೇ ಮೊದಲ ಬಾರಿ ತುರ್ತುಪರಿಸ್ಥಿತಿ ಜಾರಿಮಾಡಲಾಗಿದೆ.