ಯುಕ್ರೇನಿನಲ್ಲಿರುವ ಆಸ್ಪತ್ರೆಗಳಲ್ಲಿ ಆಮ್ಲಜನಕದ (ಆಕ್ಸಿಜನ್‌ನ) ಭಾರಿ ಕೊರತೆ

ವಿಶ್ವ ಆರೋಗ್ಯ ಸಂಸ್ಥೆಯು ಚಿಂತೆಯನ್ನು ವ್ಯಕ್ತಪಡಿಸಿದೆ

ಕೀವ (ಯುಕ್ರೇನ) – ಯುಕ್ರೇನನಲ್ಲಿ ಆಮ್ಲಜನಕದ (ಆಕ್ಸಿಜನ್‌ನ) ಭಾರಿ ಕೊರತೆ ನಿರ್ಮಾಣವಾಗಿದೆ. ಇದರಿಂದ ಮೊದಲೇ ಸಂಕಟದಲ್ಲಿರುವ ಯುಕ್ರೇನ ಇನ್ನೂ ಸಂಕಟದಲ್ಲಿ ಸಿಲುಕಿದೆ. ಆದುದರಿಂದ ಜಾಗತಿಕ ಆರೋಗ್ಯ ಸಂಘಟನೆಯು ಚಿಂತೆ ವ್ಯಕ್ತಪಡಿಸಿದ್ದು ‘ಯುಕ್ರೇನಿನಲ್ಲಿರುವ ಆಸ್ಪತ್ರೆಗಳಿಗೆ ತಕ್ಷಣ ಆಮ್ಲಜನಕವನ್ನು ನೀಡದಿದ್ದರೆ ದೊಡ್ಡ ಅನರ್ಥ ಸಂಭವಿಸಬಹುದು’, ಎಂಬ ಭಯವನ್ನು ವ್ಯಕ್ತಪಡಿಸಿದೆ. ಯುಕ್ರೇನಿನಲ್ಲಿ ೬೦೦ ಆಸ್ಪತ್ರೆಗಳಿವೆ. ಈ ಆಸ್ಪತ್ರೆಗಳಲ್ಲಿರುವ ಆಮ್ಲಜನಕವು ಮುಗಿದಿದ್ದರಿಂದ, ಹಾಗೆಯೇ ಯುದ್ಧಜನ್ಯ ಪರಿಸ್ಥಿತಿಗಳಿಂದಾಗಿ ಆಮ್ಲಜನಕವನ್ನು ಉತ್ಪಾದಿಸುವ ಕಾರ್ಖಾನೆಗಳ ವರೆಗೆ ಟ್ರಕ್‌ ತಲುಪುವುದು ಸಾಧ್ಯವಿಲ್ಲದಿರುವುದರಿಂದ ಪರಿಸ್ಥಿತಿಯು ಹದಗೆಟ್ಟಿದೆ. ಯುಕ್ರೇನಿನಲ್ಲಿ ಕೊರೋನಾ ರೋಗಿಗಳ ಸಂಖ್ಯೆಯು ೧ ಸಾವಿರದ ೭೦೦ ಇದೆ. ಇಲ್ಲಿ ಕೊರೋನಾ ರೋಗಿಗಳೊಂದಿಗೆ ನವಜಾತ ಶಿಶುಗಳು, ಗರ್ಭಿಣಿಯರು ಹಾಗೂ ವೃದ್ಧರಿಗೂ ಆಗಾಗ ಆಮ್ಲಜನಕದ ಆವಶ್ಯಕತೆಯುಂಟಾಗಬಹುದು, ಎಂದು ಹೇಳಲಾಗುತ್ತಿದೆ.

* ವಿದ್ಯುತ್‌ ಕಡಿತದ ಭಾರಿ ಸಮಸ್ಯೆ !
ರಷ್ಯಾದ ಯುಕ್ರೇನಿನ ಮೇಲಿನ ಆಕ್ರಮಣದಿಂದಾಗಿ ಸಂಪೂರ್ಣ ಯುಕ್ರೇನಿನಲ್ಲಿ ವಿದ್ಯುತ್‌ ಕಡಿತದ ಸಂಕಟ ಹೆಚ್ಚಾಗಿದೆ.