ಶೇ. ೬೦ ರಷ್ಟು ಕೊರೊನಾ ಪೀಡಿತರ ಮೃತ್ಯುವಿಗೆ ಅಂಟಿಬಯೋಟಿಕ್ಸ್ ನ ಅತಿಯಾದ ಬಳಕೆಯಿಂದ ಉತ್ಪನ್ನವಾದ ದೊಡ್ಡ ರೋಗಾಣುಗಳೇ ಕಾರಣ !
ಕೊರೊನಾದ ಕಾಲಾವಧಿಯಲ್ಲಿ ರೋಗಿಗಳಿಗೆ ಹೇರಳವಾಗಿ ಅಂಟಿಬಯೋಟಿಕ್ಸ್ (ಪ್ರತಿಜೈವಿಕಗಳನ್ನು) ನೀಡಲಾಗುತ್ತಿದೆ. ಆದ್ದರಿಂದ ಅವರ ದೇಹದಲ್ಲಿ ಉತ್ಪತ್ತಿಯಾದ ‘ಸೂಪರ್‍ಬಗ್‍ಗಳು’ ರೋಗಿಗಳ ಮೃತ್ಯುವಿಗೆ ಕಾರಣವಾಗುತ್ತಿವೆ. ಪರಿಣಾಮವಾಗಿ, ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಸೋಂಕು ವೇಗವಾಗಿ ಹೆಚ್ಚಾಗುತ್ತದೆ. ದೇಶದ ಶೇ. ೬೦ ಕೊರೋನಾ ರೋಗಿಗಳು ಸಾಯಲು ಇದು ಕಾರಣವಾಗಿದೆ.