ಶೇ. ೬೦ ರಷ್ಟು ಕೊರೊನಾ ಪೀಡಿತರ ಮೃತ್ಯುವಿಗೆ ಅಂಟಿಬಯೋಟಿಕ್ಸ್ ನ ಅತಿಯಾದ ಬಳಕೆಯಿಂದ ಉತ್ಪನ್ನವಾದ ದೊಡ್ಡ ರೋಗಾಣುಗಳೇ ಕಾರಣ !

‘ಇನ್ಫೆಕ್ಷನ್ ಅಂಡ್ ಡ್ರಗ್ ರೆಸಿಸ್ಟನ್ಸ್ ‘ ಜರ್ನಲ್‍ನಲ್ಲಿ ಪ್ರಕಟವಾದ ಸಂಶೋಧನಾ ವರದಿಯ ಹೇಳಿಕೆ

ಹೊಸ ದೆಹಲಿ – ದೇಶದಲ್ಲಿ ಈವರೆಗೆ ೩ ಲಕ್ಷಕ್ಕೂ ಹೆಚ್ಚು ಜನರು ಕೊರೋನಾದಿಂದ ಸಾವನ್ನಪ್ಪಿದ್ದಾರೆ. ‘ಇನ್ಫೆಕ್ಷನ್ ಅಂಡ ಡ್ರಗ ರೇಸಿಸ್ಟಂಸ’ ಜರ್ನಲ್‍ನಲ್ಲಿ ಪ್ರಕಟವಾದ ಸಂಶೋಧನೆಯಲ್ಲಿ ಸಾವಿಗೆ ಕಾರಣವನ್ನು ತಿಳಿಸಲಾಗಿದೆ. ಕೊರೊನಾದ ಕಾಲಾವಧಿಯಲ್ಲಿ ರೋಗಿಗಳಿಗೆ ಹೇರಳವಾಗಿ ಅಂಟಿಬಯೋಟಿಕ್ಸ್ (ಪ್ರತಿಜೈವಿಕಗಳನ್ನು) ನೀಡಲಾಗುತ್ತಿದೆ. ಆದ್ದರಿಂದ ಅವರ ದೇಹದಲ್ಲಿ ಉತ್ಪತ್ತಿಯಾದ ‘ಸೂಪರ್‍ಬಗ್‍ಗಳು’ ರೋಗಿಗಳ ಮೃತ್ಯುವಿಗೆ ಕಾರಣವಾಗುತ್ತಿವೆ. ಪರಿಣಾಮವಾಗಿ, ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಸೋಂಕು ವೇಗವಾಗಿ ಹೆಚ್ಚಾಗುತ್ತದೆ. ದೇಶದ ಶೇ. ೬೦ ಕೊರೋನಾ ರೋಗಿಗಳು ಸಾಯಲು ಇದು ಕಾರಣವಾಗಿದೆ. ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳಿಂದ ಉಂಟಾಗುವ ‘ಸೂಪರ್‍ಬಗ್’ಗಳು ಸಾವಿಗೆ ಕಾರಣವಾಗಿವೆ. ಈ ಸೂಪರ್‍ಬಗ್‍ಗೆ ಬಲಿಯಾಗದವರಲ್ಲಿ ಕೇವಲ ಶೇ. ೧೧ ರೋಗಿಗಳು ಮಾತ್ರ ಸಾವನ್ನಪ್ಪಿದ್ದಾರೆ. ಅವರಲ್ಲಿ ಹೆಚ್ಚಿನವರು ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರು ಎಂದು ಸಂಶೋಧನಾ ವರದಿ ತಿಳಿಸಿದೆ.

೧. ‘ಇನ್ಫೆಕ್ಷನ್ ಅಂಡ್ ಡ್ರಗ್ ರೆಸಿಸ್ಟನ್ಸ್’ ತನ್ನ ಸಂಶೋಧನೆಯಲ್ಲಿ, ಸೂಕ್ಷ್ಮಜೀವಿಗಳನ್ನು (ಬ್ಯಾಕ್ಟೀರಿಯಾ) ನಿಸ್ತೇಜಗೊಳಿಸಲು ಪ್ರತಿಜೈವಿಕಗಳನ್ನು ಬಳಸಲಾಗುತ್ತದೆ ಆದರೆ ಪ್ರತಿಜೈವಿಕಗಳನ್ನು ಅತಿಯಾಗಿ ಬಳಸಿದಾಗ ಸೂಕ್ಷ್ಮಜೀವಿಗಳು ಅವುಗಳ ವಿರುದ್ಧ ಪ್ರತಿರೋಧಕ ಕ್ಷಮತೆಯನ್ನು ಹೆಚ್ಚಿಸುತ್ತವೆ. ಆದ್ದರಿಂದ, ರೋಗಿಗಳಿಗೆ ಅಂಟಿಬಯೋಟಿಕ್ಸ್ ನಿಂದ ಏನೂ ಪರಿಣಾಮ ಆಗುವುದಿಲ್ಲ.

. ಕೊರೊನಾದ ಮೊದಲ ಅಲೆಯಲ್ಲಿ ಆಸ್ಪತ್ರೆಗೆ ದಾಖಲಾದ ರೋಗಿಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಸೋಂಕನ್ನು ಹೊಂದಿರುವುದು ಕಂಡುಬಂದಿತ್ತು. ಔಷಧಿಗಳನ್ನು ನಿಸ್ತೇಜಗೊಳಿಸುವ ಸೂಕ್ಷ್ಮಜೀವಿಗಳು ಈ ಸೋಂಕನ್ನು ಹರಡುತ್ತಿದ್ದವು. ಈ ವಿಷಯದಲ್ಲಿ ಮಾಹಿತಿಯನ್ನು ಸಂಗ್ರಹಿಸಲು, ಸಂಶೋಧಕರು ದೇಶಾದ್ಯಂತ ೧೦ ಆಸ್ಪತ್ರೆಗಳಲ್ಲಿ ದಾಖಲಾದ ೧೭೫೬೩ ರೋಗಿಗಳ ಅಧ್ಯಯನ ಮಾಡಿದರು. ಸಂಶೋಧನೆಯ ಪ್ರಕಾರ, ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳಿಂದ ಸೋಂಕಿತ ಕೊರೋನಾ ರೋಗಿಗಳ ಸಂಖ್ಯೆ ಶೇ. ೨೮ ಆಗಿತ್ತು. ಸೂಕ್ಷ್ಮಾಣುಜೀವಿಗಳು ಪ್ರತಿಜೈವಿಕಗಳನ್ನು ನಿಸ್ತೇಜಗೊಳಿಸಿದುದರಿಂದ ಕೊರೊನಾ ರೋಗಿಗಳಿಗೆ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಸೋಂಕು ತಗಲಿತ್ತು.