ಕಾನಪುರ್ (ಉತ್ತರ ಪ್ರದೇಶ)ದ ದೇವಾಲಯಗಳ ಭೂಮಿಯನ್ನು ಆಕ್ರಮಿಸಿ ಅಲ್ಲಿ ಬಿರಿಯಾನಿ ಅಂಗಡಿಗಳನ್ನು ತೆರೆದಿರುವುದು ಬೆಳಕಿಗೆ ಬಂದಿದೆ !

ಹಿಂದೂಗಳಿಗೆ ಧರ್ಮ ಶಿಕ್ಷಣವಿಲ್ಲದ ಕಾರಣ, ಅವರಿಗೆ ತಮ್ಮ ಶ್ರದ್ಧಾ ಸ್ಥಾನಗಳ ಬಗ್ಗೆ ಮೌಲ್ಯವೇ ತಿಳಿದಿಲ್ಲ ! ಅದಕ್ಕಾಗಿಯೇ ಈ ರೀತಿ ನಡೆಯುತ್ತಿದೆ !

‘ಅಂತಹವರನ್ನು ಸಂಕಟದ ಸಮಯದಲ್ಲಿ ದೇವರಾದರೂ ಏಕೆ ರಕ್ಷಿಸಬೇಕು ?’ ಎಂಬ ಪ್ರಶ್ನೆ ಯಾರ ಮನಸ್ಸಿಗೆ ಬಂದರೆ ಅದರಲ್ಲಿ ತಪ್ಪೇನಿದೆ ? ಇತರ ಪಂಥಗಳ ಶ್ರದ್ಧಾಸ್ಥಾನಗಳ ಸಂದರ್ಭದಲ್ಲಿ ಈ ರೀತಿ ಎಂದಾದರೂ ಸಂಭವಿಸುತ್ತವೆಯೇ ?

ಕಾನಪುರ್ (ಉತ್ತರ ಪ್ರದೇಶ) – ಇಲ್ಲಿಯ ಚಮನಗಂಜನಲ್ಲಿರುವ ಕೆಲವು ಹಳೆಯ ದೇವಾಲಯಗಳನ್ನು ನೆಲಸಮ ಮಾಡಿ ಆ ಜಮೀನುಗಳನ್ನು ಅತಿಕ್ರಮಿಸಿ ಅಲ್ಲಿ ಬಿರಿಯಾನಿಯ ಅಂಗಡಿಗಳನ್ನು ತೆರೆದಿರುವ ಸಂತಾಪಜನಕ ಘಟನೆಯು ಬೆಳಕಿಗೆ ಬಂದಿದೆ.

ಕಾನಪುರದ ಮಹಾಪೌರ ಪ್ರಮೀಳಾ ಪಾಂಡೆಯವರಲ್ಲಿ ಹಳೆಯ ದೇವಾಲಯಗಳನ್ನು ನೆಲಸಮ ಮಾಡಿ ಆ ಜಮೀನನ್ನು ಅತಿಕ್ರಮಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ದೂರು ನೀಡಲಾಯಿತು. ಅದಕ್ಕೆ ಪಾಂಡೆಯವರು ಪ್ರತ್ಯಕ್ಷ ಪರಿಶೀಲನೆಯನ್ನು ಮಾಡುವ ಸಮಯದಲ್ಲಿ, ಜನರು ಶಿಥಿಲಗೊಂಡ ದೇವಾಲಯಗಳನ್ನು ವಶಪಡಿಸಿಕೊಂಡಿರುವ ಹಾಗೂ ಅನೇಕ ಹಳೆಯ ದೇವಾಲಯಗಳನ್ನು ನೆಲಸಮ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಒಂದು ದೇವಾಲಯಕ್ಕೆ ಬೀಗ ಹಾಕಲಾಗಿತ್ತು. ಬೀಗ ತೆರೆಯಲು ಸ್ಥಳೀಯರ ಸಹಕಾರ ಸಿಗದ ಕಾರಣ ಮೇಯರ್ ಪಾಂಡೆ ಅಂತಿಮವಾಗಿ ಸ್ವತಃ ಬೀಗವನ್ನು ಮುರಿದರು, ಆಗ ದೇವಸ್ಥಾನದಲ್ಲಿ ಕಸ ತುಂಬಿರುವ ಸಂತಾಪಜನಕ ಘಟನೆಯು ಬೆಳಕಿಗೆ ಬಂದಿತು. ಮಹಾಪೌರ ಅವರೊಂದಿಗೆ ಇದ್ದ ಸಹಾಯಕ ಪೊಲೀಸ್ ಆಯುಕ್ತ ಸೀತಾ ಮೌ ಅವರಿಗೆ ಅತಿಕ್ರಮಣವನ್ನು ತೆಗೆದು ದೇವಸ್ಥಾನವನ್ನು ಸ್ವಚ್ಛಗೊಳಿಸುವಂತೆ ಆದೇಶ ನೀಡಿದರು. ಜೊತೆಗೆ ಮಹಾಪೌರರು ಈ ಬಗ್ಗೆ ವಿಚಾರಿಸಿ ಬಿರಿಯಾನಿ ಅಂಗಡಿಯ ಎಲ್ಲಾ ಅತಿಕ್ರಮಣಗಳನ್ನು ತೆಗೆದುಹಾಕುವಂತೆ ಆದೇಶಿಸಿದರು. ಈ ಪ್ರದೇಶದ ಎಲ್ಲಾ ದೇವಾಲಯಗಳನ್ನು ಪರಿಶೀಲಿಸುವಂತೆ ಆದೇಶಿಸಿದರು. ಈ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.