ಭರತಪುರ (ರಾಜಸ್ಥಾನ) ದಲ್ಲಿ ಬಿಜೆಪಿ ಮಹಿಳಾ ಸಂಸದೆಯ ಮೇಲೆ ಗೂಂಡಾಗಳಿಂದ ಹಲ್ಲೆ

ಈ ಘಟನೆ ವರದಿಯಾದ ೪೫ ನಿಮಿಷಗಳ ನಂತರ, ಸ್ಥಳಕ್ಕೆ ತಲುಪಿದ ಪೊಲೀಸರು, ಹಾಗೂ ದೂರವಾಣಿ ಎತ್ತದ ಜಿಲ್ಲಾಧಿಕಾರಿ !

  • ರಾಜಸ್ಥಾನದಲ್ಲಿ ಕಾಂಗ್ರೆಸ್ ಸರಕಾರ ಇರುವುದರಿಂದ ಪ್ರತಿಪಕ್ಷದ ಜನಪ್ರತಿನಿಧಿಗಳ ಮೇಲೆ ಹಲ್ಲೆ ನಡೆದರೆ ಪೊಲೀಸರು, ಆಡಳಿತವರ್ಗದವರು ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ, ಎಂದರೆ ಅದರಲ್ಲಿ ಆಶ್ಚರ್ಯವೇನಿಲ್ಲ !
  • ತಮ್ಮನ್ನು ಪ್ರಜಾಪ್ರಭುತ್ವದ ಗುತ್ತಿಗೆದಾರನೆಂದು ಪರಿಗಣಿಸುವ ಕಾಂಗ್ರೆಸ್ ಎಷ್ಟು ಪ್ರಜಾಪ್ರಭುತ್ವದ್ರೋಹಿಯಾಗಿದೆ ಎಂಬುದನ್ನು ಇದು ತೋರಿಸುತ್ತದೆ !

ಜೈಪುರ (ರಾಜಸ್ಥಾನ) – ರಾಜ್ಯದ ಭಾರತಪುರದ ಬಿಜೆಪಿ ಸಂಸದೆ ರಂಜಿತಾ ಕೋಲಿ ಅವರ ಮೇಲೆ ಗೂಂಡಾಗಳು ಹಲ್ಲೆ ನಡೆಸಿದ್ದಾರೆ. ಇದರಲ್ಲಿ ಅವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಘಟನೆ ಮೇ ೨೭ ರ ರಾತ್ರಿ ಧರಸೋನಿ ಗ್ರಾಮದಲ್ಲಿ ನಡೆದಿದೆ. ಪೊಲೀಸರಿಗೆ ಮಾಹಿತಿ ನೀಡಿದ ೪೫ ನಿಮಿಷಗಳ ನಂತರ ಪೊಲೀಸರು ಸ್ಥಳಕ್ಕೆ ಬಂದರು ಎಂದು ಆರೋಪಿಸಲಾಗಿದೆ. ಅದೇರೀತಿ ಜಿಲ್ಲಾಧಿಕಾರಿಗೆ ನಿರಂತರವಾಗಿ ದೂರವಾಣಿ ಕರೆ ಮಾಡಿದ ನಂತರವೂ ಅವರು ಕರೆಯನ್ನು ಸ್ವೀಕರಿಸಲಿಲ್ಲ ಎಂದು ಕೋಲಿಯ ಬೆಂಬಲಿಗರು ಹೇಳಿದ್ದಾರೆ.