ರಾಜ್ಯ ಸರಕಾರದ ಅನುದಾನದಿಂದ ಕೋಟ್ಯಂತರ ರೂಪಾಯಿಗಳ ಲೂಟಿ !
* ಇಂತಹ ಹಗರಣಗಳು ದೇಶದ ಬೇರೆಡೆ ನಡೆಯುತ್ತಿದ್ದರೆ, ಕೇಂದ್ರ ಮತ್ತು ರಾಜ್ಯ ಸರಕಾರಗಳು ಇದರ ಬಗ್ಗೆ ತನಿಖೆಯನ್ನು ನಡೆಸಬೇಕು ! ಅನುದಾನ ನೀಡುವ ಮೊದಲು ಮದರಸಾಗಳ ಸರಿಯಾದ ಮಾಹಿತಿ ಮತ್ತು ಅದರ ಪರಿಶೀಲನೆಯು ಆಡಳಿತದಿಂದಾಗದಿರಲು ಏನು ಕಾರಣ ? ಅಥವಾ ಆಡಳಿತ ಅಧಿಕಾರಿಗಳೂ ಈ ಹಗರಣದಲ್ಲಿ ಭಾಗಿಯಾಗಿದ್ದಾರೆಯೇ ? ಇವುಗಳನ್ನು ಸಹ ಅನ್ವೇಷಿಸಬೇಕು ! * ಅನುದಾನ ಪಡೆಯಲು ಸುಳ್ಳು ಮಾಹಿತಿ ನೀಡುವವರಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು ! * ಜಾತ್ಯತೀತವಾದಿಗಳು ಇಂತಹ ಘಟನೆಗಳ ಬಗ್ಗೆ ಬಾಯಿ ತೆರೆಯುತ್ತಾರೆಯೇ ? |
ಆಜಮ್‍ಗಡ್ (ಉತ್ತರಪ್ರದೇಶ) – ಆಜಮ್‍ಗಡ್ ಜಿಲ್ಲೆಯ ೬೮೩ ಮದರಸಾಗಳಲ್ಲಿ ಸುಮಾರು ೩೦೦ ಮದರಸಾಗಳಲ್ಲಿ ಹಗರಣಗಳು ಆಗುತ್ತಿರುವುದು ಬೆಳಕಿಗೆ ಬಂದಿದೆ. ಇಲ್ಲಿ ಶಿಕ್ಷಕರು ಮತ್ತು ಸಿಬ್ಬಂದಿಗಳ ನೇಮಕಾತಿ ಬಗ್ಗೆ ಸುಳ್ಳು ಮಾಹಿತಿ ನೀಡಲಾಗಿದೆ ಎಂಬ ಆರೋಪವಿದೆ. ಈ ಪೈಕಿ ೧೦೦ ಮದರಸಾಗಳು ಸರಕಾರದಿಂದ ಅನುದಾನ ಪಡೆಯುತ್ತಿವೆ. ಸರಕಾರವು ನಡೆಸಿದ ವಿಚಾರಣೆಯಲ್ಲಿ ಇದು ಬೆಳಕಿಗೆ ಬಂದಿದೆ. ಇದರಲ್ಲಿಯೂ ಕೆಲವು ಮದರಸಾಗಳು ಕಾಗದದ ಮೇಲೆ ಮಾತ್ರ ಇವೆ ಮತ್ತು ನಿಜವಾಗಿ ಅಸ್ತಿತ್ವದಲ್ಲಿಲ್ಲ. ಈ ರೀತಿಯಾಗಿ ಸರಕಾರದಿಂದ ಕೋಟ್ಯಂತರ ರೂಪಾಯಿಗಳನ್ನು ಲೂಟಿ ಮಾಡಲಾಗುತ್ತಿತ್ತು.
೨೦೧೭ ರಲ್ಲಿ ಸರಕಾರದಿಂದ ರಾಜ್ಯದ ಎಲ್ಲಾ ಮದರಸಾಗಳ ಮಾಹಿತಿಯನ್ನು ಆನ್‍ಲೈನ್‍ನಲ್ಲಿ ಜಮೆ ಮಾಡಲು ಪ್ರಾರಂಬಿಸಲಾಗಿತ್ತು. ಅದರಲ್ಲಿ ಈ ಜಿಲ್ಲೆಯಲ್ಲಿ ಮೇಲಿನ ಎಲ್ಲಾ ಮದರಸಾಗಳ ಮಾಹಿತಿಯನ್ನು ತುಂಬಲಾಗಿತ್ತು. ಅದರ ವಿಚಾರಣೆ ವೇಳೆ ಈ ಹಗರಣ ಬಯಲಾಗಿದೆ. ಈಗ ಸರಕಾರವು ಹಗರಣದ ಬಗ್ಗೆ ವಿಶೇಷ ತನಿಖಾ ತಂಡದ ಮೂಲಕ ತನಿಖೆ ನಡೆಸಲಿದೆ.