ವಿಚಾರಣೆ ನಡೆಸಿ ಹಿಂದಕ್ಕೆ ಕಳುಹಿಸಿದ್ದಾರೆ !
ಅಮೃತಸರ (ಪಂಜಾಬ್) – ‘ವಾರಿಸ್ ಪಂಜಾಬ್ ದೇ’ (ಪಂಜಾಬ್‌ನ ಉತ್ತರಾಧಿಕಾರಿಗಳು) ಈ ಖಲಿಸ್ತಾನಿ ಸಂಘಟನೆಯ ಮುಖ್ಯಸ್ಥ ಹಾಗೂ ಸಧ್ಯ ಪರಾರಿಯಾಗಿರುವ ಅಮೃತಪಾಲ್ ಅವರ ಪತ್ನಿ ಕಿರಣದೀಪ್ ಳನ್ನು ಏಪ್ರಿಲ್ ೨೦ ರಂದು ಅಮೃತಸರ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ತಡೆಹಿಡಿದರು. ಆಕೆಯನ್ನು ವಿಚಾರಣೆಗೊಳಪಡಿಸಿದ ನಂತರ ಆಕೆಯನ್ನು ಮತ್ತೆ ಪಂಜಾಬ್‌ನ ಜಲ್ಲುಪುರ ಗ್ರಾಮಕ್ಕೆ ಕಳುಹಿಸಲಾಯಿತು. ಕಿರಣ್‌ದೀಪ್ ಏರ್ ಇಂಡಿಯಾ ವಿಮಾನದಿಂದ ಲಂಡನ್‌ಗೆ ಹೋಗುವಳಿದ್ದಳು. ಕಿರಣದೀಪ್ ಇವಳು ಅನಿವಾಸಿ ಭಾರತೀಯಳಗಿದ್ದಾಳೆ. ಆಕೆ ಭಾರತದಲ್ಲಿ ೧೮೦ ದಿನಗಳ ಕಾಲ ಇರಬಲ್ಲಳು ಎನ್ನಲಾಗುತ್ತಿದೆ.
लंदन भागने की फिराक में थी भगोड़े अमृतपाल की पत्नी किरणदीप, एयरपोर्ट पर पुलिस ने रोका #KirandeepKaur #Amritpal_Singh (@manjeet_sehgal)https://t.co/UEsSYPOmU5
— AajTak (@aajtak) April 20, 2023
ಮೂಲಗಳ ಮಾಹಿತಿಯ ಪ್ರಕಾರ, ಕಿರಣ್‌ದೀಪ್ ಇವಳು ಅಧಿಕಾರಿಗಳಿಗೆ, ತನ್ನ ತಂದೆ-ತಾಯಿಯರನ್ನು ಭೇಟಿಯಾಗಲು ಹೋಗುತ್ತಿದ್ದೇನೆಂದು ಹೇಳಿದ್ದಳು. ಭಾರತದಲ್ಲಿ ಆಕೆಯ ವಿರುದ್ಧ ಯಾವುದೇ ದೂರುಗಳಿಲ್ಲ.