ಪಾಕಿಸ್ತಾನದ ಗಡಿಯಲ್ಲಿ ಧ್ವಜವನ್ನು ಇಳಿಸುವ ಸಮಾರಂಭವನ್ನು ಪಾಕಿಸ್ತಾನದ ನಾಗರಿಕರಲ್ಲಿ ಇಳಿಕೆಯಾದರೆ ಭಾರತೀಯರ ದಟ್ಟನೆ ನಿರಂತರ !

ಹಣದುಬ್ಬರದಿಂದಾಗಿ ಪಾಕಿಸ್ತಾನದ ನಾಗರಿಕರು ಪ್ರವಾಸೋದ್ಯಮದತ್ತ ಬೆನ್ನು ತಿರುಗಿಸಿದ್ದಾರೆ

ಅಮೃತಸರ (ಪಂಜಾಬ್) – ಭಾರತ-ಪಾಕಿಸ್ತಾನ ಗಡಿಯುದ್ದಕ್ಕೂ ಕೆಲವು ಸ್ಥಳಗಳು ಅಧಿಕೃತವಾಗಿ ಹೋಗಿಬರುವ ಪ್ರವೇಶದ್ವಾರಗಳಿವೆ. ಅದರಲ್ಲಿ ಕಲವು ಕಡೆ ಸಂಜೆ ಉಭಯ ದೇಶಗಳ ಧ್ವಜ ಇಳಿಸುವ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಎರಡೂ ದೇಶಗಳ ನಾಗರಿಕರು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಾಗಿರುತ್ತಾರೆ; ಆದರೆ ಕಳೆದ ಕೆಲವು ದಿನಗಳಿಂದ, ಈ ಸ್ಥಳದಲ್ಲಿ ಭಾರತದ ಕಡೆಯಿಂದ ಹೆಚ್ಚಿನ ಸಂಖ್ಯೆಯ ನಾಗರಿಕರು ಇದ್ದರೇ; ಪಾಕಿಸ್ತಾನದ ಭಾಗದಲ್ಲಿ ನಾಗರಿಕರ ಸಂಖ್ಯೆ ಕಡಿಮೆಯಾಗುತ್ತಿರುವುದು ಕಂಡುಬಂದಿದೆ.

ಈ ಕಾರ್ಯಕ್ರಮಗಳು ಪಂಜಾಬ್‌ನ ಅಟಾರಿ, ಹುಸೈನಿವಾಲಾ ಮತ್ತು ಸಾದಕಿ ಈ ಗಡಿಗಳಲ್ಲಿ ನಡೆಯುತ್ತವೆ. ಇಲ್ಲಿ ಭಾರತೀಯರು ಘೋಷಣೆಗಳನ್ನು ಕೂಗುತ್ತಾ ಸೈನಿಕರನ್ನು ಪ್ರೋತ್ಸಾಹಿಸುತ್ತಾರೆ. ಈಗ ಪಾಕಿಸ್ತಾನದ ಕಡೆ ನಾಗರಿಕರು ಇಲ್ಲದೇ ಇರುವುದರಿಂದ ಪಾಕ್ ಸೇನೆಯ ನೈತಿಕ ಸ್ಥೈರ್ಯ ಕುಸಿಯುತ್ತಿರುವುದು ಕಂಡು ಬರುತ್ತಿದೆ. ಹುಸೈನಿವಾಲಾದಲ್ಲಿ ಪಾಕಿಸ್ತಾನಿಗಳ ಸಂಖ್ಯೆ ಬೆರಳಣಿಕೆಯಷ್ಟು ಕಾಣಸಿಗುತ್ತದೆ. ಇದು ಪಾಕಿಸ್ತಾನ ಆರ್ಥಿಕ ದಿವಾಳಿಯ ಅಂಚಿನಲ್ಲಿರುವುದು ಕಾರಣವಾಗಿದೆ ಎಂದು ಹೇಳಲಾಗುತ್ತದೆ. ಹಣದುಬ್ಬರದಿಂದಾಗಿ ಪಾಕಿಸ್ತಾನಿ ನಾಗರಿಕರು ಪ್ರವಾಸೋದ್ಯಮವನ್ನು ನಿಲ್ಲಿಸಿದ್ದಾರೆ.

ಸಂಪಾದಕರ ನಿಲುವು

ಆರ್ಥಿಕ ದಿವಾಳಿಯಾಗಿದ್ದರಿಂದ ಪಾಕಿಸ್ತಾನದ ಈ ಸ್ಥಿತಿಯು ಅದರ ಅಂತ್ಯವು ಹತ್ತಿರದಲ್ಲಿದೆ ಎಂಬುದು ತೋರೊಸುತ್ತಿದೆ !