ಮಂಗಳೂರು ಇಲ್ಲಿಯ ಅಜ್ಞಾತರಿಂದ ಮುಸಲ್ಮಾನ ಯುವಕನ ಹತ್ಯೆ !

ಇಲ್ಲಿಯ ಸೂರತ್ಕಲ್‌ನಲ್ಲಿ ೪-೫ ಅಪರಿಚಿತ ದುಶ್ಕರ್ಮಿಗಳಿಂದ ಜುಲೈ ೨೮ ರಂದು ರಾತ್ರಿ ಸುಮಾರು ೮ ಗಂಟೆಗೆ ಮಹಮ್ಮದ್ ಫಾಜೀಲನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಇದರ ನಂತರ ಪೊಲೀಸರು ಇಲ್ಲಿ ನಿಷೇಧಾಜ್ಞೆ ಜಾರಿ ಮಾಡಿದರು, ಎಂದು ಮಂಗಳೂರು ಪೊಲೀಸ ಆಯುಕ್ತ ಎನ್. ಶಶಿ ಕುಮಾರ ಇವರು ಮಾಹಿತಿ ನೀಡಿದರು.

ಪ್ರವೀಣ ನೆಟ್ಟಾರು ಹತ್ಯೆ ಪ್ರಕರಣ ‘ಎನ್.ಐ.ಎ.’ಗೆ !

ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಸಚಿವರೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ ಬಳಿಕ ಪ್ರವೀಣ ನೆಟ್ಟಾರು ಹತ್ಯೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಹಸ್ತಾಂತರಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಅವರು ಜುಲೈ ೨೯ ರಂದು ಸಂಜೆ ಮಾಧ್ಯಮಗಳಿಗೆ ತಿಳಿಸಿದರು.

‘ನಾವು ಮುಸ್ಲಿಮರಾಗಿರುವುದರಿಂದ ಪೊಲೀಸರು ನಮ್ಮನ್ನು ಸಿಲುಕಿಸುತ್ತಿದ್ದಾರೆ !’(ಅಂತೆ)

ಭಾರತೀಯ ಜನತಾ ಯುವ ಮೋರ್ಚಾ ನಾಯಕ ಪ್ರವೀಣ ನೆಟ್ಟಾರು ಹತ್ಯೆ ಪ್ರಕರಣದ ತನಿಖೆ ಮುಂದುವರಿದಿದ್ದು, ಜುಲೈ ೨೮ ರಂದು ಈ ಪ್ರಕರಣದಲ್ಲಿ ಶಫೀಕ್ ಬೆಳ್ಳಾರೆ ಮತ್ತು ಜಾಕಿರ್ ಸವಣೂರು ಎಂಬಿಬ್ಬರನ್ನು ಬಂಧಿಸಲಾಗಿದೆ.

ಪ್ರವೀಣ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಜಾಕೀರ್ ಮತ್ತು ಶಫೀಕ್ ಎಂಬವರ ಬಂಧನ !

ಜುಲೈ ೨೬ ರಂದು ಭಾರತೀಯ ಜನತಾ ಯುವ ಮೋರ್ಚಾದ ದಕ್ಷಿಣ ಕನ್ನಡ ಜಿಲ್ಲೆಯ ಸಚಿವ ಪ್ರವೀಣ ನೆಟ್ಟಾರು ಇವರ ಬರ್ಬರ ಹತ್ಯೆ ಪ್ರಕರಣದಲ್ಲಿ ಜಾಕಿರ್ ಮತ್ತು ಶಫೀಕ್ ಎಂಬಿಬ್ಬರನ್ನು ಬಂಧಿಸಲಾಗಿದೆ. ಈ ಪ್ರಕರಣಕ್ಕೂ ಜಿಹಾದಿ ಭಯೋತ್ಪಾದಕ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾಗೂ ಸಂಬಂಧ ಇದೆಯೇ, ಎಂಬ ತನಿಖೆ ಪ್ರಾರಂಭವಾಗಿದೆ.

ದಕ್ಷಿಣ ಭಾರತದ ೩ ಮಠಗಳ ಮೇಲೆ ಉಗ್ರರ ದಾಳಿಯ ಸಂಚು ವಿಫಲ !

ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ದಿನವಾದ ಆಗಸ್ಟ್ ೧೫ ರಂದು ದಕ್ಷಿಣ ಭಾರತದ ೩ ಪ್ರಮುಖ ಮಠಗಳ ಮೇಲೆ ಭಯೋತ್ಪಾದಕ ದಾಳಿಯನ್ನು ಮಾಡುವ ಸಂಚನ್ನು ತಮಿಳುನಾಡು ಮತ್ತು ಕರ್ನಾಟಕ ಪೊಲೀಸರು ವಿಫಲಗೊಳಿಸಿದ್ದಾರೆ.

ಹಂತಕರನ್ನು ಗಲ್ಲಿಗೇರಿಸಿ ! – ಹತ್ಯೆಗೀಡಾದ ಭಾಜಪದ ನಾಯಕ ಪ್ರವೀಣ ನೆಟ್ಟಾರು ಅವರ ತಾಯಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರತೀಯ ಜನತಾ ಯುವ ಮೋರ್ಚಾದ ಜಿಲ್ಲಾ ಕಾರ್ಯದರ್ಶಿ ಪ್ರವೀಣ ನೆಟ್ಟಾರು ಅವರನ್ನು ಜಿಹಾದಿಗಳು ಹತ್ಯೆ ಮಾಡಿದ ನಂತರ ಎಲ್ಲೆಡೆ ಆಕ್ರೋಶದ ಅಲೆ ಎದ್ದಿದೆ. ‘ಪ್ರವೀಣ ನಮಗೆ ಒಬ್ಬನೇ ಮಗ ಆಗಿದ್ದ. ನನ್ನ ಆರೋಗ್ಯ ಸರಿ ಇರುವುದಿಲ್ಲ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ಭಾಜಪ ಮುಖಂಡನ ಬರ್ಬರ ಹತ್ಯೆ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ಭಾಜಪದ ಯುವ ಮೋರ್ಚಾದ ಜಿಲ್ಲಾ ಕಾರ್ಯದರ್ಶಿ ಪ್ರವೀಣ ನೆಟ್ಟಾರು ಅವರನ್ನು ಅಜ್ಞಾತ ದುಷ್ಕರ್ಮಿಗಳು ಕೊಡಲಿ ಮತ್ತು ಕತ್ತಿಯಿಂದ ಹಲ್ಲೆ ಮಾಡಿ ಕೊಂದಿದ್ದಾರೆ. ಈ ಹತ್ಯೆಯ ಹಿಂದೆ ಜಿಹಾದಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರ ಕೈವಾಡವಿದೆ ಎನ್ನಲಾಗಿದೆ.

ಹೀಜಾಬ್ ಧರಿಸಿ ಬರುವುದಕ್ಕಾಗಿ ಕರ್ನಾಟಕದಲ್ಲಿ ಮುಸಲ್ಮಾನರು ಖಾಸಗಿ ಮಹಾವಿದ್ಯಾಲಯಗಳನ್ನು ತೆರೆಯುವರು !

ಕರ್ನಾಟಕ ವಿಧಾನಸಭೆ ಚುನಾವಣೆಯ ಮೊದಲು ಹಿಜಾಬ ವಿವಾದ ಮತ್ತೊಮ್ಮೆ ಗರಿಗೇದರಿದೆ. ರಾಜ್ಯದ ದಕ್ಷಿಣ ಜಿಲ್ಲೆಯಲ್ಲಿ ಮುಸಲ್ಮಾನ ಸಂಘಟನೆಗಳು ರಾಜ್ಯದಲ್ಲಿ ೧೩ ಹೊಸ ಖಾಸಗಿ ಮಹಾವಿದ್ಯಾಲಯಗಳನ್ನು ತೆರೆಯಲು ಅರ್ಜಿ ಸಲ್ಲಿಸಿದೆ. ಈ ಮಹಾವಿದ್ಯಾಲಯಗಳಲ್ಲಿ ಹಿಜಾಬ ಮೇಲೆ ನಿಷೇಧ ಹೇರಲಾಗುವುದಿಲ್ಲ. ರಾಜ್ಯದಲ್ಲಿ ಎಲ್ಲಾ ಸರಕಾರಿ ಶೈಕ್ಷಣಿಕ ಸಂಸ್ಥೆಯಲ್ಲಿ ಹಿಜಾಬ್ ಮೇಲೆ ನಿಷೇಧ ಹೇರಲಾಗಿದೆ.

ಕರ್ನಾಟಕದ ಮಠಗಳು ಮತ್ತು ದೇವಸ್ಥಾನಗಳಿಗೆ ಭಾಜಪ ಸರಕಾರದಿಂದ ೧೪೨ ಕೋಟಿ ರೂಪಾಯಿಗಳ ಅನುದಾನ ಘೋಷಣೆ !

ಈ ನಿರ್ಧಾರಕ್ಕೆ ಬಸವರಾಜ ಬೊಮ್ಮಾಯಿ ಸರಕಾರಕ್ಕೆ ಅಭಿನಂದನೆಗಳು ! ಇನ್ನು ಭಾಜಪದ ಆಡಳಿತವಿರುವ ಇತರ ರಾಜ್ಯಗಳೂ ಈ ರೀತಿಯ ನಿರ್ಧಾರ ತೆಗೆದುಕೊಳ್ಳಬೇಕು !

ನೆಹರು – ಗಾಂಧಿ ಹೆಸರಿನ ಮೇಲೆ ನಾವು ‘೩ – ೪ ತಲೆಮಾರು ಕುಳಿತು ತಿನ್ನುವಷ್ಟು’ ಗಳಿಸಿದ್ದೇವೆ !

ನಾವು ನೆಹರು, ಇಂದಿರಾ ಗಾಂಧಿ ಮತ್ತು ಸೋನಿಯಾ ಗಾಂಧಿ ಇವರ ಹೆಸರಿನಲ್ಲಿ ನಮ್ಮ ಮುಂದಿನ ೩ – ೪ ತಲೆಮಾರಿಗೆ ಸಾಕಾಗುವಷ್ಟು ಆಸ್ತಿಯನ್ನು ಗಳಿಸಿದ್ದೇವೆ ! ನಾವು ಅವರಿಂದಲೇ ಅಧಿಕಾರ ಅನುಭವಿಸಿದ್ದೇವೆ. ಇಂದು ನಾವು ಬಲಿದಾನ ನೀಡದಿದ್ದರೆ ಭವಿಷ್ಯದಲ್ಲಿ ನಾವು ಊಟ ಮಾಡುವುದರಲ್ಲಿ ಹುಳ ಬೀಳುತ್ತದೆ.