‘ಯುವ ಬ್ರಿಗೇಡ್’ ಸಂಘಟನೆಯ ಅಧ್ಯಕ್ಷ ಚಕ್ರವರ್ತಿ ಸೂಲಿಬೆಲೆ ಅವರ ಕರೆ
ಬೆಂಗಳೂರು – ಮದುವೆಗೆ ಹಿಂದೂ ಹುಡುಗಿಯರು ಸಿಗದ ಹಿಂದೂ ಹುಡುಗರು ಇತರ ಧರ್ಮದ ಹುಡುಗಿಯರೊಂದಿಗೆ ಪ್ರೇಮ ವಿವಾಹವಾಗಬೇಕು. ನಾವು ನಮ್ಮ ಧರ್ಮದ ಹುಡುಗಿಯರನ್ನೇ ಎಷ್ಟು ದಿನ ನೋಡುತ್ತೀರಿ? ಇತರ ಧರ್ಮದ ಹುಡುಗಿಯರನ್ನು ಪ್ರೇಮ ವಿವಾಹವಾಗಿ ಎಂದು ‘ಯುವ ಬ್ರಿಗೇಡ್’ ಸಂಘಟನೆಯ ಅಧ್ಯಕ್ಷ ಚಕ್ರವರ್ತಿ ಸೂಲಿಬೆಲೆ ಸಲಹೆ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಕುಟ್ಟಾರು ಗ್ರಾಮದಲ್ಲಿ ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಸೂಲಿಬೆಲೆ ಅವರು ಮಾತು ಮುಂದುವರೆಸಿ,
1. ಮತಾಂತರ, ಲವ್ ಜಿಹಾದ್ ಮುಂತಾದ ವಿಷಯಗಳನ್ನು ಮರೆತುಬಿಡಿ. ಹಿಂದೂ ಧರ್ಮದಿಂದ ಮತಾಂತರಗೊಂಡವರನ್ನು ಮರಳಿ ‘ಘರ್ ವಾಪಸಿ’ (ಮರಳಿ ಹಿಂದೂ ಧರ್ಮಕ್ಕೆ ಕರೆತರುವುದು) ಮಾಡುವುದು ಹೇಗೆ? ಎಂಬುದರ ಬಗ್ಗೆ ನಮ್ಮ ಯುವಕರಿಗೆ ತರಬೇತಿ ನೀಡಿ.
2. ನಾವು ಲವ್ ಜಿಹಾದ್ ಬಗ್ಗೆ ಎಷ್ಟು ದಿನ ಮಾತನಾಡುತ್ತಾ ಇರುತ್ತೇವೆ? ಸ್ವಲ್ಪ ಬದಲಾವಣೆ ತರೋಣ.
3. ವಕ್ಫ್ ಮಂಡಳಿಯ ವಿರುದ್ಧ ದೇಶಾದ್ಯಂತ ಹೋರಾಟ ನಡೆಯುತ್ತಿರುವಾಗ ರಾಜ್ಯ ಸರಕಾರ ವಕ್ಫ್ ಮಂಡಳಿಯ ಆಸ್ತಿಯ ನವೀಕರಣಕ್ಕೆ 150 ಕೋಟಿ ರೂಪಾಯಿ ನೀಡುವ ಆಲೋಚನೆ ಮಾಡುತ್ತಿದೆ. ಸರಕಾರ ಪ್ರಚೋದನೆ ನೀಡಿ ಒಡಕು ಮೂಡಿಸಲು ಪ್ರಯತ್ನಿಸುತ್ತಿದೆ.