ಪ್ರಶ್ನಿಸಿದ ಹಿಂದೂ ವಿದ್ಯಾರ್ಥಿಗೆ ಮನಬಂದಂತೆ ಥಳಿತ
ತುಮಕೂರು – ತುಮಕೂರಿನ ಹುಲಿಯೂರು ಸರಕಾರಿ ಪ್ರೌಢಶಾಲೆಯ ಬಾಲಕಿಯರು ಶೌಚಾಲಯಕ್ಕೆ ಹೋದಾಗ ಮುಸ್ಲಿಂ ಸಮುದಾಯದ ಕೆಲ ಯುವಕರು ಶೌಚಾಲಯದ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಹಾಗೆಯೇ, ಕಲ್ಲು ತೂರಾಟದ ಬಗ್ಗೆ ಪ್ರಶ್ನಿಸಿದ ಶಾಲೆಯ ವಿದ್ಯಾರ್ಥಿಯೊಬ್ಬನಿಗೆ ಮುಸ್ಲಿಂ ಗೂಂಡಾಗಳ ಗುಂಪು ಮನಬಂದಂತೆ ಥಳಿಸಿದೆ.
1. ಚಿಕ್ಕನಾಯಕನಹಳ್ಳಿ ತಾಲೂಕಿನ ಹುಲಿಯೂರು ಸರಕಾರಿ ಶಾಲೆಯ 10ನೇ ತರಗತಿಯ ವಿದ್ಯಾರ್ಥಿ ಯಶವಂತ ಮಾರ್ಚ್ 14ರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಮೂತ್ರ ವಿಸರ್ಜನೆಗೆ ಶೌಚಾಲಯಕ್ಕೆ ಹೋಗಿದ್ದ. ಆ ಸಮಯದಲ್ಲಿ ಬಾಲಕಿಯರ ಶೌಚಾಲಯದ ಮೇಲೆ ಮುಸ್ಲಿಂ ಯುವಕರು ಕಲ್ಲು ತೂರಾಟ ನಡೆಸುತ್ತಿರುವುದು ಅವನಿಗೆ ಕಂಡುಬಂದಿದೆ. ಯಶವಂತ ಅವರನ್ನು ಪ್ರಶ್ನಿಸಿದ. ಇದರಿಂದ ಕೋಪಗೊಂಡ 6-7 ಮುಸ್ಲಿಂ ಗೂಂಡಾಗಳು ಶಾಲಾ ಆವರಣಕ್ಕೆ ನುಗ್ಗಿ ಯಶವಂತನನ್ನು ಥಳಿಸಿದ್ದಾರೆ.
2. ಘಟನೆಯ ಮಾಹಿತಿ ತಿಳಿದ ಶಾಲೆಯ ಮುಖ್ಯೋಪಾಧ್ಯಾಯರು ತಕ್ಷಣ ಸ್ಥಳಕ್ಕೆ ಧಾವಿಸಿ ಗೂಂಡಾಗಳ ಹಿಡಿತದಿಂದ ಯಶವಂತನನ್ನು ರಕ್ಷಿಸಿದ್ದಾರೆ. ನಂತರ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಬರುತ್ತಿರುವುದನ್ನು ಕಂಡು ಗೂಂಡಾಗಳು ಪರಾರಿಯಾಗಿದ್ದಾರೆ. ಗಾಯಗೊಂಡ ವಿದ್ಯಾರ್ಥಿ ಯಶವಂತನನ್ನು ಚಿಕ್ಕನಾಯಕನಹಳ್ಳಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
3. ಶಾಲಾ ಆಡಳಿತ ಮಂಡಳಿ ಮೆಹಬೂಬ ಶರೀಫ, ಶಮಷುದ್ದೀನ, ಇರ್ಫಾನ, ಮುಬಾರಕ, ಮುದಾಸಿರ, ಯಾಸೀನ, ತಾಜೀಮ ಈ ಗೂಂಡಾಗಳ ವಿರುದ್ಧ ಹುಲಿಯೂರು ಪೊಲೀಸ್ ಠಾಣೆಗೆ ದೂರು ದಾಖಲಿಸಿದೆ. ಈ ಬಗ್ಗೆ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.