ಭ್ರಷ್ಟಾಚಾರ ನಿಗ್ರಹ ದಳದ ಭ್ರಷ್ಟಾಚಾರದ ಕಾರಣ ನನಗೆ ವರ್ಗಾವಣೆಯ ಬೆದರಿಕೆ!
ಕರ್ನಾಟಕ ಉಚ್ಚನ್ಯಾಯಲಯದ ನ್ಯಾಯಮೂರ್ತಿ ಎಚ.ಪಿ. ಸಂದೇಶ ಪ್ರಕರಣವೊಂದರ ವಿಚಾರಣೆ ವೇಳೆ ‘ಭ್ರಷ್ಟಾಚಾರ ನಿಗ್ರಹ ದಳದ ಕಾರ್ಯದ ಬಗ್ಗೆ ಟೀಕೆ ಮಾಡಿದಕ್ಕೆ ದಳದ ಹೆಚ್ಚುವರಿ ಪೊಲೀಸ ಮಹಾ ನಿರ್ದೇಶಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ
ಕರ್ನಾಟಕ ಉಚ್ಚನ್ಯಾಯಲಯದ ನ್ಯಾಯಮೂರ್ತಿ ಎಚ.ಪಿ. ಸಂದೇಶ ಪ್ರಕರಣವೊಂದರ ವಿಚಾರಣೆ ವೇಳೆ ‘ಭ್ರಷ್ಟಾಚಾರ ನಿಗ್ರಹ ದಳದ ಕಾರ್ಯದ ಬಗ್ಗೆ ಟೀಕೆ ಮಾಡಿದಕ್ಕೆ ದಳದ ಹೆಚ್ಚುವರಿ ಪೊಲೀಸ ಮಹಾ ನಿರ್ದೇಶಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ
ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಹೆಚ್ಚುವರಿ ಪೊಲೀಸ ಮಹಾನಿರ್ದೇಶಕ ಹುದ್ದೆಯಲ್ಲಿರುವ ವ್ಯಕ್ತಿಯ ಬಂಧನವಾಗಿರುವ ಘಟನೆ ನಡೆದಿದೆ. ಪೊಲೀಸ ಉಪನಿರೀಕ್ಷಕ ನೇಮಕಾತಿಗೆ ಸಂಬಂಧಿಸಿದ ಹಗರಣದಲ್ಲಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಮೃತಪೌಲ ಇವರನ್ನು ಬಂಧಿಸಲಾಗಿದೆ.
ಹಿಜಾಬ್ ನಿಷೇಧ ಪ್ರಕರಣದಲ್ಲಿ ಹತ್ಯೆಗೀಡಾದ ಭಜರಂಗದಳ ಕಾರ್ಯಕರ್ತ ಹರ್ಷನ ಹತ್ಯೆಯ ಆರೋಪಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಿಶೇಷ ಸೌಲಭ್ಯ ಪಡೆಯುತ್ತಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಇಲ್ಲಿ ಮದರಾಸಾದಲ್ಲಿ ಕಲಿಯುವ ಓರ್ವ ೧೩ ವಯಸ್ಸಿನ ಮುಸಲ್ಮಾನ ವಿದ್ಯಾರ್ಥಿ ‘ಅನ್ಯಕೋಮಿನ ಜನರು ನನಗೆ ಹೊಡೆದು ನನ್ನ ಅಂಗಿ ಹರಿದು ಹಾಕಿದರು’ ಎಂದು ಆರೋಪಿಸಿದ.
ಯಾವುದೇ ಆರೋಪಿಯನ್ನು ಬಂಧಿಸುವಾಗ ಅವನಿಗೆ ಕೈಕೋಳ ಹಾಕುವಂತಿಲ್ಲ ಎಂದು ಕರ್ನಾಟಕ ಉಚ್ಚ ನ್ಯಾಯಾಲಯ ತೀರ್ಪು ನೀಡಿದೆ. ಈ ಸಮಯದಲ್ಲಿ ನ್ಯಾಯಾಲಯವು ಆರೋಪಿಯ ಕೈಕೋಳ ಹಾಕಿ ಸಾರ್ವಜನಿಕ ಸ್ಥಳದಲ್ಲಿ ತಿರುಗಿಸಿದ ಪ್ರಕರಣದಲ್ಲಿ ಆರೋಪಿಗೆ ೨ ಲಕ್ಷ ರೂಪಾಯಿಗಳ ಪರಿಹಾರ ನೀಡುವಂತೆ ಆದೇಶಿಸಿದೆ.
ಕನ್ಹೈಯ್ಯಾಲಾಲ ಇವರ ಹತ್ಯೆ ಮಾಡಿದವರ ಹತ್ಯೆ ಮಾಡಬೇಕು ಅಥವಾ ಅವರಿಗೆ ಯೋಗ್ಯವಾದ ಶಿಕ್ಷೆ ನೀಡಿ ಪಾಠ ಕಲಿಸಬೇಕು, ಎಂಬ ಹೇಳಿಕೆ ಮಾಜಿ ಸಚಿವ ಮತ್ತು ಭಾಜಪಾ ನೇತಾರ ಕೆಎಸ್ ಈಶ್ವರಪ್ಪನವರು ನೀಡಿದ್ದಾರೆ.
ಭಾಜಪದ ರಾಜ್ಯ ಸರಕಾರ ‘ಕಾಶಿ ಯಾತ್ರೆ’ ಎಂಬ ಯೋಜನೆಗೆ ಸ್ವೀಕೃತಿ ನೀಡಿದೆ. ಇದರಡಿಯಲ್ಲಿ ಕಾಶಿಯ ಕಾಶಿ ವಿಶ್ವನಾಥ ದೇವಸ್ಥಾನ ನೋಡಲು ಇಚ್ಚಿಸುವ ೩೦ ಸಾವಿರ ಭಕ್ತರಿಗೆ ತಲಾ ೫ ಸಾವಿರ ರೂಪಾಯಿ ಅನುದಾನ ನೀಡಲಾಗುವುದು. ಅದಕ್ಕಾಗಿ ರಾಜ್ಯದ ಧಾರ್ಮಿಕ ದತ್ತಿ ಇಲಾಖೆ ೭ ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿದೆ.
‘ವೀಸಾದ ಅವಧಿ ಮುಗಿದರೂ ಅನಧಿಕೃತವಾಗಿ ಮತ್ತು ಅಧಿಕೃತ ದಾಖಲೆಗಳು ಇಲ್ಲದಿರುವಾಗಲೂ ಕರ್ನಾಟಕದಲ್ಲಿ ವಾಸಿಸುವ ವಿದೇಶಿ ನಾಗರಿಕರನ್ನು ಹುಡುಕುವುದು ಸಮೀಕ್ಷೆಯ ಉದ್ದೇಶವಾಗಿದೆಯೆಂದು ಜ್ಞಾನೇಂದ್ರ ಇವರು ಹೇಳಿದರು.
ಹಿಂದೂ ದೇವತೆಗಳ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ಕಾಂಗ್ರೆಸ್ಸಿನ ಮಾಹಿತಿ ತಂತ್ರಜ್ಞಾನ ವಿಭಾಗದ ಸಚಿವೆ ವಿ. ಶೈಲಜಾ ಇವರ ಮನೆಯ ಮೇಲೆ ಅಪರಿಚಿತರಿಂದ ಕಲ್ಲುತೂರಾಟ ನಡೆಸಲಾಗಿದೆ. ಇದರಲ್ಲಿ ಮನೆ ಕಿಟಕಿಯ ಗಾಜುಗಳು ಹೊಡೆದು ಹೋಗಿದ್ದು, ಗೋಡೆಗಳ ಮೇಲೆ ಮಸಿ ಎರಚಲಾಗಿದೆ.
ಕರ್ನಾಟಕ ಉಚ್ಚ ನ್ಯಾಯಾಲಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುರಿತು ಮಹತ್ವದ ತೀರ್ಪು ನೀಡಿದೆ. ‘ಸಾರ್ವಜನಿಕ ಸ್ಥಳಗಳಲ್ಲಿ ನಿಂದನೆ ನಡೆದರೆ ಮಾತ್ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ (ಅಟ್ರೋಸಿಟಿ) ತಡೆ ಕಾಯ್ದೆಯಡಿ ಅಪರಾಧ ದಾಖಲಿಸಬಹುದು’ ಎಂದು ನ್ಯಾಯಾಲಯ ಹೇಳಿದೆ.