V Somanna Slams CM Siddaramaiah : ತುಮಕೂರು ರೈಲು ನಿಲ್ದಾಣಕ್ಕೆ ‘ಸಿದ್ದಗಂಗಾ ಶ್ರೀ’ ಇವರ ಹೆಸರು ನೀಡುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇವರಿಂದ ಮೀನಾಮೇಷ!

ಕೇಂದ್ರ ಜಲಶಕ್ತಿ ಮತ್ತು ರೈಲು ರಾಜ್ಯ ಸಚಿವ ವಿ. ಸೋಮಣ್ಣ ಇವರಿಂದ ಆರೋಪ

ತುಮಕೂರು – ತುಮಕೂರು ರೈಲು ನಿಲ್ದಾಣಕ್ಕೆ ಸಿದ್ದಗಂಗಾ ಮಠದ ಡಾ. ಶ್ರೀ ಶಿವಕುಮಾರ ಸ್ವಾಮಿ (ಸಿದ್ದಗಂಗಾ ಶ್ರೀ) ಇವರ ಹೆಸರು ನೀಡುವುದಕ್ಕಾಗಿ ಕೇಂದ್ರ ಸರಕಾರ ಒಪ್ಪಿಗೆ ನೀಡಿ ೫ ತಿಂಗಳ ಕಳೆದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಆ ಪತ್ರಕ್ಕೆ ಸಹಿ ಹಾಕಲು ಮೀನಾಮೇಷ ಎಣಿಸುತ್ತಿದ್ದಾರೆ, ಎಂದು ಕೇಂದ್ರ ಜಲಶಕ್ತಿ ಮತ್ತು ರೈಲು ರಾಜ್ಯ ಸಚಿವ ವಿ. ಸೋಮಣ್ಣ ಇವರು ಆರೋಪಿಸಿದ್ದಾರೆ.

ಕೇಂದ್ರ ರಾಜ್ಯ ಸಚಿವ ವಿ. ಸೋಮಣ್ಣ ಇವರು ಮಾತು ಮುಂದುವರೆಸಿ,

೧. ಲಕ್ಷಾಂತರ ಬಡ ಮಕ್ಕಳಿಗೆ ಅನ್ನ, ವಸ್ತ್ರ ಮತ್ತು ಆಸರೆ ನೀಡಿ ಅವರ ಜೀವನಕ್ಕೆ ದಾರಿ ತೋರಿರುವ ‘ಸಿದ್ದಗಂಗಾ ಶ್ರೀ’ ಇವರ ಹೆಸರು ತುಮಕೂರು ರೈಲು ನಿಲ್ದಾಣಕ್ಕೆ ನೀಡುವ ಬಗ್ಗೆ ಕೇಂದ್ರದಿಂದ ಬಂದಿರುವ ಪತ್ರಕ್ಕೆ ಸಹಿ ಹಾಕಲು ರಾಜ್ಯ ಸರಕಾರ ಮೀನಮೇಷ ಎಣಿಸುತ್ತಿದೆ ಇದು ಯೋಗ್ಯವಲ್ಲ.

೨. ನಾನು ಸ್ವತಃ ಹೋಗಿ ಮುಖ್ಯಮಂತ್ರಿ ಮತ್ತು ಸರಕಾರದ ಮುಖ್ಯ ಸಚಿವರ ಜೊತೆಗೆ ಚರ್ಚಿಸಿದ್ದೇನೆ. ಆದರೂ ಕೂಡ ಕೇಂದ್ರ ಸರಕಾರದ ಪತ್ರಕ್ಕೆ ಸಹಿ ಹಾಕಲು ಅವರು ಸಿದ್ಧರಿಲ್ಲ. ರಾಜ್ಯ ಮತ್ತು ಕೇಂದ್ರ ಸರಕಾರ ಇವುಗಳು ಒಂದೇ ನಾಣ್ಯದ ಎರಡು ಬದಿಗಳಂತೆ ಕೆಲಸ ಮಾಡಬೇಕು. ಮುಖ್ಯಮಂತ್ರಿಗಳು ತಕ್ಷಣ ಕೇಂದ್ರದ ಪತ್ರಕ್ಕೆ ಸಹಿ ಹಾಕಿ ತುಮಕೂರು ರೈಲು ನಿಲ್ದಾಣಕ್ಕೆ ಸಿದ್ದಗಂಗಾ ಶ್ರೀಗಳ ಹೆಸರು ನೀಡುವಲ್ಲಿ ಸಹಕಾರ ನೀಡಬೇಕು, ಇಲ್ಲವಾದರೆ ಮುಖ್ಯಮಂತ್ರಿ ಮತ್ತು ಸಂಬಂಧಿತ ಅಧಿಕಾರಿಗಳ ಮೇಲೆ ತ್ವರಿತ ಕ್ರಮ ಕೈಗೊಳ್ಳಬೇಕು.

೩. ನಗರದ ರೈಲು ನಿಲ್ದಾಣದ ನವೀಕರಣಕ್ಕೆ ೯೦ ಕೋಟಿ ರೂಪಾಯಿ ನೀಡಲು ಒಪ್ಪಲಾಗಿದೆ. ಜನರು ನಮಗೆ ಮತ ನೀಡಿ ಆರಿಸಿದ್ದಾರೆ. ಜನರು ನೀಡಿರುವ ಮತಕ್ಕೆ ಬಾಧ್ಯರಾಗಿ ಕೆಲಸ ಮಾಡಬೇಕು, ಇದು ಯಾವುದೇ ರಾಜಕಾರಣಿಗಳು ಮರೆಯಬಾರದು.