ಬೆಂಗಳೂರು – ರಾಜ್ಯದ ತೀರ್ಥಕ್ಷೇತ್ರಗಳ ನದಿ ತೀರಗಳಲ್ಲಿ ಸೋಪು ಅಥವಾ ಶಾಂಪೂ ಮಾರಾಟವನ್ನು ಸರಕಾರ ನಿಷೇಧಿಸಿದೆ. ಈ ಸಂಬಂಧ ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ್ದು, ಭಕ್ತರು ನದಿಗೆ ಯಾವುದೇ ವಸ್ತುಗಳನ್ನು ಹಾಕದಂತೆ ನಿರ್ದೇಶನ ನೀಡಿದ್ದಾರೆ.
ಖಂಡ್ರೆ ಅವರು ಮಾತನ್ನು ಮುಂದುವರಿಸಿ, ಪರಿಸರ ಸ್ನೇಹಿ ಉಪಾಯವೆಂದು ತೀರ್ಥಕ್ಷೇತ್ರಗಳಲ್ಲಿ ನದಿಗಳ ಮತ್ತು ಕೆರೆಗಳ ಬಳಿ 500 ಮೀಟರ್ ವ್ಯಾಪ್ತಿಯಲ್ಲಿ ಸೋಪು ಮತ್ತು ಶಾಂಪೂ ಮಾರಾಟವನ್ನು ನಿಷೇಧಿಸಲು ಆದೇಶ ನೀಡಿದ್ದೇನೆ. ನದಿಯಲ್ಲಿ ಸ್ನಾನ ಮಾಡುವ ಭಕ್ತರು ನದಿಗೆ ಶಾಂಪೂ ಪಾಕೆಟ್‌ಗಳನ್ನು ಎಸೆಯುತ್ತಾರೆ, ಹಾಗೆಯೇ ಸೋಪಿನಿಂದ ನೀರು ಕಲುಷಿತಗೊಳ್ಳುತ್ತದೆ. ಇದರಿಂದ ಜನರ ಮತ್ತು ಜಲಚರ ಪ್ರಾಣಿಗಳ ಆರೋಗ್ಯಕ್ಕೆ ಗಂಭೀರ ಅಪಾಯವಿದೆ. ಜಾತ್ರೆಯ ಸ್ಥಳಗಳಲ್ಲಿ ಬಟ್ಟೆಗಳನ್ನು ಎಸೆಯುವ ಪ್ರವೃತ್ತಿ ಕಂಡುಬಂದಿದ್ದು, ಇದನ್ನು ತಡೆಯಲು ಕಠಿಣ ನಿಯಮಗಳನ್ನು ಜಾರಿಗೆ ತರಲಾಗುವುದು ಎಂದು ಖಂಡ್ರೆ ಹೇಳಿದರು.