ಹಿಂದುತ್ವನಿಷ್ಠರಿಂದ ಹಿಂದೂ ಜನಜಾಗೃತಿ ಸಮಿತಿ ಹಾಗೂ ಸನಾತನ ಸಂಸ್ಥೆಯ ಕಾರ್ಯಕ್ಕೆ ಗೌರವ !

ನ್ಯಾಯವಾದಿ ಜಯದೀಪ ಮುಖರ್ಜಿಯವರ ವತಿಯಿಂದ ಜೂನ ೧೪ರಂದು ಹಿಂದೂ ಜನಜಾಗೃತಿ ಸಮಿತಿಯ ಧರ್ಮಪ್ರಚಾರಕರನ್ನು , ಸನಾತನ ಸಂಸ್ಥೆಯ ವಕ್ತಾರನ್ನು ಹಾಗೂ ಹಿಂದೂ ವಿಧಿಜ್ಞ ಪರಿಷತ್ತಿನ ಸಂಘಟಕರನ್ನು ಇವರೆಲ್ಲರ ಸತ್ಕಾರ ಮಾಡಲಾಯಿತು.

ಮೊದಲ `ಹಿಂದೂ ರಾಷ್ಟ್ರ ಸಂಸತ್ತಿ’ನಲ್ಲಿ ಆದರ್ಶ ದೇವಸ್ಥಾನ ವ್ಯವಸ್ಥಾಪನೆ ಪಠ್ಯಕ್ರಮವನ್ನು ಕಲಿಸಲು ಸೂಚನೆ !

ಈ ದೇವಾಲಯಗಳ ಮೂಲಕ ಗೋಶಾಲೆ, ಅನ್ನಛತ್ರ, ಧರ್ಮಶಾಲೆ, ಶಿಕ್ಷಣಕೇಂದ್ರಗಳನ್ನು ನಡೆಸುವ ಮೂಲಕ ಸಮಾಜಕ್ಕೆ ಅಮೂಲ್ಯವಾದ ಸಹಾಯವನ್ನು ನೀಡಲಾಗುತ್ತಿತ್ತು. ಇದರಿಂದಾಗಿ ಹಿಂದೂ ಸಮಾಜವು ದೇವಸ್ಥಾನಗಳೊಂದಿಗೆ ಜೋಡಿಸಲ್ಪಟ್ಟಿತ್ತು. ಈಗ ಮಾತ್ರ ದೇವಸ್ಥಾನಗಳು ಎಷ್ಟು ವ್ಯಾಪಾರೀಕರಣಗೊಂಡಿವೆ ಎಂದರೆ ಅವು (ಶಾಪಿಂಗ್) `ಮಾಲ್’ಗಳಾಗಿ ಮಾರ್ಪಟ್ಟಿವೆ ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ತೀರ್ಥಕ್ಷೇತ್ರಗಳನ್ನು ಪ್ರವಾಸಿ ತಾಣಗಳಾಗಿ ಪರಿವರ್ತಿಸಲಾಗುತ್ತಿದೆ.

Video – ಕಾಶಿ ಮತ್ತು ಮಥುರಾ ಇಲ್ಲಿಯ ದೇವಸ್ಥಾನಗಳನ್ನು ವಶಕ್ಕೆ ಪಡೆದ ನಂತರ ಹಿಂದೂಗಳು ಮುಂದಿನ ಕಾರ್ಯದ ಯೋಚನೆ ಮಾಡಬೇಕು ! – ನ್ಯಾಯವಾದಿ ಮದನ ಮೋಹನ ಯಾದವ, ವಾರಾಣಸಿ, ಉತ್ತರಪ್ರದೇಶ

ಜ್ಯೂಗಳು ಸಂಪೂರ್ಣ ಜಗತ್ತಿನಲ್ಲಿ ಹರಡಿಹೋಗಿದ್ದರು; ಹೀಗಿರುವಾಗ ಅವರು ಇಸ್ರಾಯೆಲ್ ಎಂಬ ತಮ್ಮ ಸ್ವತಂತ್ರ ರಾಷ್ಟ್ರವನ್ನು ನಿರ್ಮಿಸಿದರು. ಹಾಗಾಗಿ ಹಿಂದೂ ರಾಷ್ಟ್ರವನ್ನು ಸ್ಥಾಪಿಸುವುದು ಏನು ಅಸಾಧ್ಯವಿಲ್ಲ.

ಗೋವಾದಲ್ಲಿ ಚರ್ಚ್ಗಳು ವಶಪಡಿಸಿಕೊಂಡ ದೇವಾಲಯಗಳ ಪುನರಸ್ಥಾಪನೆಗೆ ಹಿಂದೂಗಳು ಒಟ್ಟಾಗಿ ಹೋರಾಡಬೇಕಾಗುತ್ತದೆ ! – ಪ್ರೊ. ಸುಭಾಷ ವೆಲಿಂಗಕರ, ರಾಜ್ಯ ಸಂಘಚಾಲಕ, ಭಾರತ ಮಾತಾ ಕಿ ಜೈ ಸಂಘ, ಗೋವಾ

೧೦ನೇ ಅಖಿಲ ಭಾರತ ಹಿಂದೂ ರಾಷ್ಟ ಅಧಿವೇಶನದ ಎರಡನೇ ದಿನ `ದೇವಾಲಯಗಳ ಮೇಲೆ ಇಸ್ಲಾಮೀ ಮತ್ತು ಕ್ರೈಸ್ತ ಅತಿಕ್ರಮಣ’ ಎಂಬ ವಿಷಯದ ಕುರಿತು ಪ್ರೊ. ಸುಭಾಷ ವೆಲಿಂಗಕರ ಮಾತನಾಡುತ್ತಿದ್ದರು.

ಕಾನೂನಿನಲ್ಲಿರುವ ನ್ಯೂನ್ಯತೆಗಳ ಕಾರಣದಿಂದ ನ್ಯಾಯಾಲಯದ ತೀರ್ಪುಗಳಿಂದ ಸತ್ಯ ಹೊರಬರುವುದಿಲ್ಲ !- ನ್ಯಾಯವಾದಿ ಮಕರಂದ ಆಡಕರ, ಅಧ್ಯಕ್ಷ, ಮಹಾರಾಷ್ಟ್ರ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆ, ನವದೆಹಲಿ

ನಗರ ಜಿಲ್ಲೆಯಲ್ಲಿ ೨೪ ಗುಂಟೆ ಸರಕಾರಿ ಜಮೀನು ಇತ್ತು. ಮಹಾಪಾಲಿಕೆಯು ‘ಸ್ವಾತಂತ್ರ್ಯವೀರ ಸಾವರಕರ ಉದ್ಯಾನ’ ಈ ಹೆಸರಿನಿಂದ ಆ ಜಮೀನನ್ನು ಕಾಯ್ದಿರಿಸಿತ್ತು.  ಅಲ್ಲಿ ಕೆಲವು ಮೌಲ್ವಿಗಳು ಪೀರ(ಗೋರಿ)  ನಿರ್ಮಿಸಿದ್ದರು. ಅಲ್ಲಿ ಕಸಾಯಿಖಾನೆಯನ್ನು ಪ್ರಾರಂಭಿಸಿದ್ದರು, ಅಲ್ಲದೇ ಕೂದಲು ಕತ್ತರಿಸುವ ಅಂಗಡಿಯನ್ನು ಪ್ರಾರಂಭಿಸಿದ್ದರು.

ಧರ್ಮ ರಕ್ಷಣೆಗಾಗಿ ಕಾನೂನಾತ್ಮಕವಾಗಿ ಹೋರಾಟದ ದಿಶೆ’ ಈ ವಿಷಯದಲ್ಲಿ ನ್ಯಾಯವಾದಿಗಳಿಂದ ಉಪಸ್ಥಿತರಿಗೆ ಮಾರ್ಗದರ್ಶನ !

ಮಹಾರಾಷ್ಟ್ರದ ಕುಲಸ್ವಾಮಿನಿಯೆಂದು ಆರಾಧಿಸಲ್ಪಡುವ ಶ್ರೀ ತುಳಜಾಭವಾನಿ ಮಂದಿರದಲ್ಲಿ ಕೋಟ್ಯಾವಧಿ ರೂಪಾಯಿಗಳ ಭ್ರಷ್ಟಾಚಾರ ಮಾಡುವ ಗುತ್ತಿಗೆದಾರರು ಮತ್ತು ಸರಕಾರಿ ಅಧಿಕಾರಿಗಳ ಮೇಲೆ ‘ ಸಿ.ಆಯ್.ಡಿ’ ಯ ಮನವಿಯ ಮೇರೆಗೆ ಶೀಘ್ರವಾಗಿ ದೂರು ದಾಖಲಿಸಿ ಅವರ ಮೇಲೆ ಕಠಿಣ ಕ್ರಮ ಜರುಗಿಸಬೇಕು

ದೇವಸ್ಥಾನಗಳ ಮೇಲೆ ಆಕ್ರಮಣ ನಡೆಸಿ ಆಕ್ರಮಣಕಾರರು ಹಿಂದೂಗಳನ್ನು ದುರ್ಬಲ ಗೊಳಿಸಿದ್ದಾರೆ ! – ನ್ಯಾಯವಾದಿ ವಿಷ್ಣು ಶಂಕರ ಜೈನ, ಸರ್ವೋಚ್ಚ ನ್ಯಾಯಾಲಯ

ದೇವಸ್ಥಾನಗಳು ಹಿಂದೂಗಳಿಗಾಗಿ ಗೌರವದ ಮತ್ತು ಆದರದ ಸ್ಥಳವಾಗಿವೆ. ಆದ್ದರಿಂದ ದೇವಸ್ಥಾನಗಳನ್ನು ಮತ್ತೆ ಹಿಂದೂಗಳ ವಶಕ್ಕೆ ನೀಡಿ ಹಿಂದೂಗಳ ವೈಭವ ಅವರಿಗೆ ಮತ್ತೆ ಹಿಂತಿರುಗಿಸುವ ಅವಶ್ಯಕತೆ ಇದೆ.

ಹಿಂದುತ್ವವಾದಿಗಳನ್ನು ಸುಳ್ಳು ಆರೋಪಗಳಲ್ಲಿ ವಿನಾಕಾರಣ ಸಿಲುಕಿಸುವವರನ್ನು ಖಂಡಿಸಿದ ದಶಮ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ!

ಹಿಂದೂ ಧರ್ಮದ ವಿರುದ್ಧ ಬರೆಯುವ ಪ್ರಸಾರಮಾಧ್ಯಮಗಳು ನ್ಯಾಯಾಲಯದಲ್ಲಿ ಉತ್ತರಿಸಬೇಕಾಗುತ್ತದೆ !

ಧ್ವಂಸಗೊಂಡ ದೇವಾಲಯಗಳ ಪುನರ್ ನಿರ್ಮಾಣಕ್ಕಾಗಿ ದೇಶವ್ಯಾಪಿ ಅಭಿಯಾನ !

ಗೋವಾದಲ್ಲಿ ಧ್ವಂಸಗೊಂಡ ದೇವಾಲಯಗಳ ಬಗ್ಗೆ ಪುರಾವೆಗಳು ಸಿಕ್ಕಿದ್ದಲ್ಲಿ ಆ ಕುರಿತು ನ್ಯಾಯಾಂಗ ಹೋರಾಟ ಮಾಡಲಾಗುವುದು, ಎಂದು ಗೋವಾದಲ್ಲಿ ನಡೆಯುತ್ತಿರುವ ೧೦ನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನದ ಎರಡನೇ ದಿನದಂದು ನ್ಯಾಯವಾದಿಗಳು ನಿರ್ಧಾರ ಕೈಗೊಂಡರು.

ಗೋವಾದ ದೇವಸ್ಥಾನದ ವಿಶ್ವಸ್ಥರಿಂದ ‘ಜ್ಞಾನವಾಪಿ’ಯ ವಿಮೋಚನೆಗಾಗಿ ಹೋರಾಡುತ್ತಿರುವ ನ್ಯಾಯವಾದಿ ಹರಿಶಂಕರ ಜೈನ್ ಮತ್ತು ವಿಷ್ಣು ಶಂಕರ ಜೈನ್ ಅವರ ಸನ್ಮಾನ !

ಶ್ರೀ ಕಾಶಿ ವಿಶ್ವನಾಥ ದೇವಸ್ಥಾನಕ್ಕಾಗಿ ಯಶಸ್ವಿಯಾಗಿ ನ್ಯಾಯಾಂಗ ಹೋರಾಟ ಮಾಡುತ್ತಿರುವ ಸರ್ವೋಚ್ಚ ನ್ಯಾಯಾಲಯದ ಪೂ. (ನ್ಯಾಯವಾದಿ) ಹರಿಶಂಕರ ಜೈನ್ ಮತ್ತು ‘ಹಿಂದೂ ಫ್ರಂಟ್ ಫಾರ್ ಜಸ್ಟೀಸ್’ನ ರಾಷ್ಟ್ರೀಯ ವಕ್ತಾರರಾದ ನ್ಯಾಯವಾದಿ ವಿಷ್ಣುಶಂಕರ ಜೈನ್ ಅವರನ್ನು ಗೋವಾದ ವಿವಿಧ ದೇವಸ್ಥಾನಗಳ ವತಿಯಿಂದ ಸಾರ್ವಜನಿಕವಾಗಿ ಸನ್ಮಾನಿಸಲಾಯಿತು.