ಶ್ರೀ ತುಳಜಾಭವಾನಿ ಮಂದಿರದಲ್ಲಿ ಭ್ರಷ್ಟಾಚಾರ ಮಾಡುವವರ ವಿರುದ್ಧ ಶೀಘ್ರವೇ ದೂರು ದಾಖಲಿಸಿರಿ!- ನ್ಯಾಯವಾದಿ(ಪೂ.) ಸುರೇಶ ಕುಲಕರ್ಣಿ, ಸಂಸ್ಥಾಪಕ ಸದಸ್ಯ , ಹಿಂದೂ ವಿಧಿಜ್ಞ ಪರಿಷತ್ತು
ರಾಮನಾಥಿ, ೧೨ ಜೂನ (ವಾರ್ತೆ) – ಮಹಾರಾಷ್ಟ್ರದ ಕುಲಸ್ವಾಮಿನಿಯೆಂದು ಆರಾಧಿಸಲ್ಪಡುವ ಶ್ರೀ ತುಳಜಾಭವಾನಿ ಮಂದಿರದಲ್ಲಿ ಕೋಟ್ಯಾವಧಿ ರೂಪಾಯಿಗಳ ಭ್ರಷ್ಟಾಚಾರ ಮಾಡುವ ಗುತ್ತಿಗೆದಾರರು ಮತ್ತು ಸರಕಾರಿ ಅಧಿಕಾರಿಗಳ ಮೇಲೆ ‘ ಸಿ.ಆಯ್.ಡಿ’ ಯ ಮನವಿಯ ಮೇರೆಗೆ ಶೀಘ್ರವಾಗಿ ದೂರು ದಾಖಲಿಸಿ ಅವರ ಮೇಲೆ ಕಠಿಣ ಕ್ರಮ ಜರುಗಿಸಬೇಕು, ಎಂದು ಹಿಂದೂ ವಿಧಿಜ್ಞ ಪರಿಷತ್ತಿನ ಸಂಸ್ಥಾಪಕ ಸದಸ್ಯರು ಮತ್ತು ಮುಂಬಯಿ ಉಚ್ಚ ನ್ಯಾಯಾಲಯದ ನ್ಯಾಯವಾದಿ(ಪೂ.) ಸುರೇಶ ಕುಲಕರ್ಣಿಯವರು ಕೋರಿದರು. ೧೦ನೇಯ ಅಖಿಲ ಭಾರತೀಯ ಹಿಂದೂ ಅಧಿವೇಶನದಲ್ಲಿ ‘ಧರ್ಮ ರಕ್ಷಣೆಗಾಗಿ ಕಾನೂನಾತ್ಮಕ ಸಂಘರ್ಷದ ದಿಶೆ ಈ ಸತ್ರದಲ್ಲಿ ಉಪಸ್ಥಿತರಿದ್ದವರಿಗೆ ಮಾರ್ಗದರ್ಶನ ಮಾಡುತ್ತಿದ್ದಾಗ ಅವರು ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ವ್ಯಾಸಪೀಠದ ಮೇಲೆ ಜಳಗಾಂವ(ಮಹಾರಾಷ್ಟ್ರ)ದ ಹಿರಿಯ ನ್ಯಾಯವಾದಿ ಸುಶೀಲ ಅತ್ರೆ, ಹಿಂದೂ ವಿಧಿಜ್ಞ ಪರಿಷತ್ತಿನ ಸಂಘಟಕರಾದ ನ್ಯಾಯವಾದಿ ನೀಲೇಶ ಸಾಂಗೋಲಕರ ಇವರು ಉಪಸ್ಥಿತರಿದ್ದರು. ಈ ಪ್ರಕರಣದಲ್ಲಿ ನ್ಯಾಯವಾದಿ(ಪೂ.) ಕುಲಕರ್ಣಿಯವರು ಸ್ವತಃ ಮುಂಬಯಿ ಉಚ್ಚ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ.
ಈ ಸಂದರ್ಭದಲ್ಲಿ ನ್ಯಾಯವಾದಿ(ಪೂ.) ಸುರೇಶ ಕುಲರ್ಣಿಯವರು ಮುಂದುವರಿಸುತ್ತಾ “ಸರಕಾರದ ನಿಯಂತ್ರಣದಲ್ಲಿರುವ ಶ್ರೀ ತುಳಜಾಭವಾನಿ ಮಂದಿರದಲ್ಲಿ ವರ್ಷ ೧೯೯೧ ರಿಂದ ೨೦೦೯ ಈ ಕಾಲಾವಧಿಯಲ್ಲಿ ದಾನಪೆಟ್ಟಿಗೆಯ ಹರಾಜಿನಲ್ಲಿ ೮ ಕೋಟಿ ೪೫ ಲಕ್ಷ ರೂಪಾಯಿಗಳಿಗಿಂತ ಅಧಿಕ ಮೊತವು ಗುತ್ತಿಗೆದಾರ ಮತ್ತು ಸರಕಾರಿ ಅಧಿಕಾರಿಯ ಸಹಯೋಗದಿಂದ ಅಪಹರಣ ಆಗಿದೆ. ಈ ವಿಷಯದ ಕುರಿತು ೨೦ ಸಪ್ಟೆಂಬರ ೨೦೧೭ ರಂದು ಗೃಹಸಚಿವಾಲಯಕ್ಕೆ ಮನವಿ ಸಲ್ಲಿಸಲಾಯಿತು; ಆದರೆ ೫ ವರ್ಷಗಳಾದರೂ ಇಲ್ಲಿಯವರೆಗೆ ದೋಷಿಯ ಮೇಲೆ ಕ್ರಮ ಜರುಗಿಸಲಾಗಿಲ್ಲ. ಇಷ್ಟೇ ಅಲ್ಲ, ಈ ಕುರಿತು ವಿಧಾನಸಭೆಯಲ್ಲಿ ಅಥವಾ ಹೊರಗೆ ಸಾರ್ವಜನಿಕವಾಗಿಯೂ ಚರ್ಚೆ ಮಾಡಲಾಗಿಲ್ಲ. ಸರಕಾರವು ದೋಷಿಗಳನ್ನು ರಕ್ಷಿಸದೇ ದೋಷಿಗಳ ಮೇಲೆ ಶೀಘ್ರವಾಗಿ ದೂರು ದಾಖಲಿಸಬೇಕು”, ಎಂದರು.
ಹಿಂದೂ ಮಂದಿರಗಳ ಪ್ರಾಚೀನ ವೈಭವ ಮರಳಿ ಪಡೆಯಲು ಹಿಂದುತ್ವನಿಷ್ಠರು ಪ್ರಯತ್ನಿಸುವುದು ಆವಶ್ಯಕ!- ನ್ಯಾಯವಾದಿ ಸುಶೀಲ ಅತ್ರೆ, ಹಿರಿಯ ನ್ಯಾಯವಾದಿ, ಜಳಗಾಂವ
‘ಹಂಪಿ: ಧ್ವಂಸಗೊಂಡ ಮಂದಿರಗಳ ನಗರದ ಪುನರ್ ನಿರ್ಮಾಣ ಯೋಜನೆ’ ಈ ವಿಷಯದಲ್ಲಿ ಮಾತನಾಡುವಾಗ ಜಳಗಾಂವದ ನ್ಯಾಯವಾದಿ ಸುಶೀಲ ಅತ್ರೆಯವರು ಹೀಗೆಂದರು, “ಭಾರತಕ್ಕಾಗಿ ಹಿಂದೂ ರಾಷ್ಟ್ರದ ಸಂಕಲ್ಪನೆ ಹೊಸದಾಗಿಲ್ಲ. ಈ ಮೊದಲೂ ಅನೇಕ ಹಿಂದೂ ಸಾಮ್ರಾಜ್ಯಗಳು ಆಗಿ ಹೋಗಿವೆ. ಅದರಲ್ಲಿಯೇ ‘ವಿಜಯನಗರ’ವೂ ಒಂದು ಸಾಮ್ರಾಜ್ಯವಾಗಿತ್ತು. ಈ ವಿಜಯನಗರ ಸಾಮ್ರಾಜ್ಯವು ಸಾರ್ವಭೌಮ ಮತ್ತು ಬಲಶಾಲಿಯಾಗಿತ್ತು. ನಮ್ಮ ಋಷಿಮುನಿಗಳು ಈ ರೀತಿ ಹಿಂದೂ ಸಾಮ್ರಾಜ್ಯದ ಸಂಕಲ್ಪನೆ ಮೊದಲಿನಿಂದಲೂ ಮಾಡಿದ್ದಾರೆ. ಆದರೆ ಹಿಂದೂಗಳ ಅನಾಸಕ್ತಿಯಿಂದ ಆ ವೈಭವವನ್ನು ನಾವು ಕಾಪಾಡಿಕೊಳ್ಳಲು ಸಾಧ್ಯವಾಗಿಲ್ಲ. ಈ ದೋಷ ಹಿಂದೂಗಳದ್ದೇ ಆಗಿದೆ. ವಿಜಯನಗರ ಸಾಮ್ರಾಜ್ಯದ ಆಗಿನ ರಾಜರು ಅದರಲ್ಲಿಯೂ ವಿಶೇಷವಾಗಿ ಕೃಷ್ಣದೇವರಾಯರು ಅನೇಕ ಮಂದಿರಗಳನ್ನು ನಿರ್ಮಿಸಿದರು. ಐತಿಹಾಸಿಕ ದಾಖಲೆಯನುಸಾರ ವೈಭವಶಾಲಿಯಾಗಿರುವ ೩೦೦ಕ್ಕಿಂತ ಅಧಿಕ ಬಂದರುಗಳು ಈ ಸಾಮ್ರಾಜ್ಯದಲ್ಲಿತ್ತು. ಅದರಲ್ಲಿ ದೊರೆತ ಉತ್ಪನ್ನಗಳ ಬಹುದೊಡ್ಡ ಭಾಗವನ್ನು ಮಂದಿರಗಳನ್ನು ನಿರ್ಮಾಣ ಮಾಡಲು ವ್ಯಯಿಸಲಾಯಿತು; ಆದರೆ ಇಂದು ಈ ಮಂದಿರಗಳು ಅತ್ಯಂತ ಹೀನಾಯ ಸ್ಥಿತಿಯಲ್ಲಿವೆ. ಈ ಮಂದಿರಗಳು ಇಂದು ಕೇಂದ್ರೀಯ ಪುರಾತತ್ವ ಇಲಾಖೆಯ ವಶದಲ್ಲಿವೆ. ಆದರೆ ಈ ಇಲಾಖೆಯ ಅತಿಯಾದ ಉದಾಸೀನತೆ ಮತ್ತು ಅನಾಸಕ್ತಿಯಿಂದ ಮಂದಿರಗಳಲ್ಲಿ ಯಾವುದೇ ರೀತಿಯ ಸುಧಾರಣೆ ಕಂಡು ಬಂದಿಲ್ಲ. ಈ ಮಂದಿರಗಳ ಪುನರ್ ನಿರ್ಮಾಣ ಮಾಡಬೇಕಾಗಿದ್ದರೆ, ಪ್ರಸ್ಥಾಪಿತ ಹಿಂದೂ ವಿರೋಧಿ ಕಾನೂನಿನಲ್ಲಿ ಬದಲಾವಣೆ ಮಾಡಬೇಕಾಗಿದೆ. ಆಧುನಿಕ ಪದ್ಧತಿಯಿಂದ ಮಂದಿರಗಳನ್ನು ನಿರ್ಮಾಣ ಮಾಡದೇ ಅದರ ಮೂಲ ಸ್ವರೂಪವನ್ನು ಹಾಗೆಯೇ ಕಾಯ್ದಿಟ್ಟುಕೊಳ್ಳಲು ತಜ್ಞ ಹಿಂದುತ್ವನಿಷ್ಠರು ಭವಿಷ್ಯದಲ್ಲಿ ಯೋಗದಾನ ನೀಡಲು ಸಿದ್ಧರಾಗಿರಬೇಕು.”
ಪೊಲೀಸರು ಅನಧಿಕೃತ ಅಜಾನ್ ವಿರುದ್ಧ ಕ್ರಮ ಜರುಗಿಸಲು ಹಿಂದೆ ಮುಂದೆ ನೋಡಿದರೆ, ನ್ಯಾಯಾಲಯದಲ್ಲಿ ದೂರು ದಾಖಲಿಸಿರಿ!- ನ್ಯಾಯವಾದಿ ನೀಲೇಶ ಸಾಂಗೋಲಕರ, ಸಂಘಟಕರು, ಹಿಂದೂ ವಿಧಿಜ್ಞ ಪರಿಷತ್ತು
‘ಧಾರ್ಮಿಕ ಕಾರಣಗಳಿಂದ ಇತರರಿಗೆ ತೊಂದರೆಯಾಗುತ್ತಿದ್ದರೆ, ಅದು ಸಂವಿಧಾನದಲ್ಲಿ ನೀಡಿರುವ ಧಾರ್ಮಿಕ ಅಧಿಕಾರಗಳನ್ನು ಉಲ್ಲಂಘಿಸಿದಂತಾಗಿದೆ’, ಎಂದು ಸರ್ವೋಚ್ಚ ನ್ಯಾಯಾಲಯವು ಧಾರ್ಮಿಕ ಸ್ಥಳಗಳ ಮೇಲಿನ ಅಜಾನ್ ವಿರುದ್ಧ ನೀಡಿರುವ ತೀರ್ಪಿನಲ್ಲಿ ದಾಖಲಿಸಿದ್ದಾರೆ. ಸಂವಿಧಾನವು ಪ್ರತಿಯೊಬ್ಬರಿಗೂ ಜೀವಿಸುವ ಅಧಿಕಾರ ನೀಡಿದೆ. ನಮ್ಮ ಪರಿಸರದಲ್ಲಿರುವ ಅನಧಿಕೃತ ಅಜಾನ್ ಕಾರಣದಿಂದ ತೊಂದರೆಯಾಗುತ್ತಿದ್ದರೆ, ಅದರ ವಿರುದ್ಧ ಪೊಲಿಸರಲ್ಲಿ ದೂರು ದಾಖಲಿಸಿರಿ. ಹಿಂದೂಗಳ ಉತ್ಸವದ ಸಮಯದಲ್ಲಿ ಪೊಲಿಸರು ಹಿಂದೂಗಳಿಗೆ ತಕ್ಷಣವೇ ನೊಟೀಸು ನೀಡುತ್ತಾರೆ; ಆದರೆ ಇದೇ ಪೊಲಿಸರು ವರ್ಷವಿಡೀ ಕೂಗುವ ಅಜಾನ್ ವಿರುದ್ಧ ದೂರು ದಾಖಲಿಸಿದರೂ ಕ್ರಮ ಕೈಕೊಳ್ಳುವುದಿಲ್ಲ. ಆದುದರಿಂದ ಪೊಲಿಸರು ಇಂತಹ ಪ್ರಕರಣದಲ್ಲಿ ಕ್ರಮ ಕೈಕೊಳ್ಳದಿದ್ದರೆ, ಅವರ ವಿರುದ್ಧವೂ ನ್ಯಾಯಾಲಯದಲ್ಲಿ ದೂರು ದಾಖಲಿಸಿರಿ.