ಗೋವಾದ ದೇವಸ್ಥಾನದ ವಿಶ್ವಸ್ಥರಿಂದ ‘ಜ್ಞಾನವಾಪಿ’ಯ ವಿಮೋಚನೆಗಾಗಿ ಹೋರಾಡುತ್ತಿರುವ ನ್ಯಾಯವಾದಿ ಹರಿಶಂಕರ ಜೈನ್ ಮತ್ತು ವಿಷ್ಣು ಶಂಕರ ಜೈನ್ ಅವರ ಸನ್ಮಾನ !

‘ದಶಮ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ದ ಮೊದಲ ದಿನ !

‘ಜ್ಞಾನವಾಪಿ ವಿಮೋಚನೆಗಾಗಿ ಹೋರಾಟ ನಡೆಸುತ್ತಿರುವ ನ್ಯಾಯವಾದಿ ಹರಿಶಂಕರ ಜೈನ್ ಅವರಿಗೆ ಶ್ರೀ ಮಂಗೇಶ ದೇವರ ಪ್ರತಿಮೆ ನೀಡಿ ಸತ್ಕಾರ ಮಾಡುತ್ತಿರುವ ಶ್ರೀಮಂಗೇಶ ದೇವಸ್ಥಾನದ ಅಧ್ಯಕ್ಷ ಡಾ. ಅಜಯ ಕಂಟಕ್ (ಎಡಗಡೆ), ಜೊತೆಯಲ್ಲಿ ನ್ಯಾಯವಾದಿ ವಿಷ್ಣು ಶಂಕರ ಜೈನ್ ಮತ್ತು ಇತರ ಗಣ್ಯರು

ಶ್ರೀ ಕಾಶಿ ವಿಶ್ವನಾಥ ದೇವಸ್ಥಾನಕ್ಕಾಗಿ ಯಶಸ್ವಿಯಾಗಿ ನ್ಯಾಯಾಂಗ ಹೋರಾಟ ಮಾಡುತ್ತಿರುವ ಸರ್ವೋಚ್ಚ ನ್ಯಾಯಾಲಯದ ಪೂ. (ನ್ಯಾಯವಾದಿ) ಹರಿಶಂಕರ ಜೈನ್ ಮತ್ತು ‘ಹಿಂದೂ ಫ್ರಂಟ್ ಫಾರ್ ಜಸ್ಟೀಸ್’ನ ರಾಷ್ಟ್ರೀಯ ವಕ್ತಾರರಾದ ನ್ಯಾಯವಾದಿ ವಿಷ್ಣುಶಂಕರ ಜೈನ್ ಅವರನ್ನು ಗೋವಾದ ವಿವಿಧ ದೇವಸ್ಥಾನಗಳ ವತಿಯಿಂದ ಸಾರ್ವಜನಿಕವಾಗಿ ಸನ್ಮಾನಿಸಲಾಯಿತು. ಫೋಂಡಾದ ‘ಶ್ರೀ ರಾಮನಾಥ ದೇವಸ್ಥಾನ’ದಲ್ಲಿ ನಡೆಯುತ್ತಿರುವ ದಶಮ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ದಲ್ಲಿ ಭಾವಪೂರ್ಣ ವಾತಾವರಣದಲ್ಲಿ ಈ ಸನ್ಮಾನ ಸಮಾರಂಭ ನೆರವೇರಿತು. ಈ ವೇಳೆ ಗೋವಾದ ದೇವಸ್ಥಾನದ ವಿಶ್ವಸ್ಥರು ಜೈನ ತಂದೆ-ಮಗನಿಗೆ ಪುಷ್ಪಹಾರ ಹಾಕಿ ಅದೇ ರೀತಿ ಶಾಲು, ಶ್ರೀಫಲ ಮತ್ತು ದೇವತೆಗಳ ಪ್ರತಿಮೆಯನ್ನು ನೀಡಿ ಸಾರ್ವಜನಿಕವಾಗಿ ಸನ್ಮಾನ ಮಾಡಿದರು.

‘ಜ್ಞಾನವಾಪಿ ವಿಮೋಚನೆಗಾಗಿ ಹೋರಾಟ ನಡೆಸುತ್ತಿರುವ ನ್ಯಾಯವಾದಿ ಹರಿಶಂಕರ ಜೈನ್ ಮತ್ತು ನ್ಯಾಯವಾದಿ ವಿಷ್ಣು ಶಂಕರ ಜೈನ್ ಇವರನ್ನು ಸತ್ಕರಿಸಿದ ನಂತರ ಉಪಸ್ಥಿತರಿರುವ ವಿವಿಧ ದೇವಸ್ಥಾನಗಳ ವಿಶ್ವಸ್ಥರು

ಈ ಸಂದರ್ಭದಲ್ಲಿ ‘ಶ್ರೀ ಮಂಗೇಶ ದೇವಸ್ಥಾನ’ದ ಅಧ್ಯಕ್ಷ ಡಾ. ಅಜಯ ಕಂಟಕ ಮತ್ತು ಕಾರ್ಯದರ್ಶಿ ಶ್ರೀ. ಅರುಣ ನಾಡಕರ್ಣಿ, ಕೊರಗಾವ್-ಪೆಡ್ನೆಯಲ್ಲಿರುವ ಶ್ರೀ ಕಮಲೇಶ್ವರ ದೇವಸ್ಥಾನದ ಅಧ್ಯಕ್ಷ ಶ್ರೀ. ಗುರುನಾಥ ಪ್ರಭು ಮತ್ತು ಕಾರ್ಯದರ್ಶಿ ಶ್ರೀ. ಕೃಷ್ಣ ಗಾವಡೆ, ಜಾಂಬಾವಲಿಯ ‘ಶ್ರೀ ರಾಮನಾಥ ದಾಮೋದರ ದೇವಸ್ಥಾನ’ದ ಕೋಶಾಧಿಕಾರಿ ಶ್ರೀ. ಜಯೇಶ ಕಾಮತ್-ಬಾಂಬೋಳ್ಕರ್, ‘ಗೋಮಾಂತಕ ಮಂದಿರ ಮಹಾಸಂಘ’ದ ಅಧ್ಯಕ್ಷ ಶ್ರೀ. ಚಂದ್ರಕಾಂತ್ (ಭಾಯಿ) ಪಂಡಿತ್ ಮತ್ತು ಕಾರ್ಯದರ್ಶಿ ಶ್ರೀ. ಜಯೇಶ ಥಳಿ ಉಪಸ್ಥಿತರಿದ್ದರು. ಈ ವೇಳೆ ಶ್ರೀ ಮಂಗೇಶ ದೇವಸ್ಥಾನದ ಡಾ. ಅಜಯ ಕಂಟಕ್ ಇವರು ಗೋವಾ ರಾಜ್ಯ ಮತ್ತು ಉತ್ತರ ಪ್ರದೇಶ ರಾಜ್ಯಕ್ಕೂ ಇರುವ ವಿಶೇಷ ಸಂಬಂಧವನ್ನು ವಿವರಿಸುತ್ತಾ, “ಕಾಶಿಯ ಶ್ರೀ ವಿಶ್ವನಾಥ ದೇವಸ್ಥಾನದಲ್ಲಿ ಪೂಜೆಯ ಮೊದಲ ಗೌರವ ಶ್ರೀ ಮಂಗೇಶ ದೇವಸ್ಥಾನದ ಮಹಾಜನರಿಗೆ ಇದೆ. ಪ್ರತಿ ವರ್ಷ ಮಹಾಶಿವರಾತ್ರಿ ಉತ್ಸವದ ಸಮಯದಲ್ಲಿ ಕಾಶಿಯ ವಿಶ್ವನಾಥ ದೇವಸ್ಥಾನದಿಂದ ಗೋವಾದ ಶ್ರೀ ಮಂಗೇಶ ದೇವಸ್ಥಾನಕ್ಕೆ ಗಂಗಾಜಲವನ್ನು ಕಳುಹಿಸಲಾಗುತ್ತದೆ, ಈ ಜಲದಿಂದ ಮಹಾಶಿವರಾತ್ರಿಯ ನಂತರ ದೇವಸ್ಥಾನದ ಗರ್ಭಗುಡಿಯ ಶುದ್ಧಿ ಮಾಡಲಾಗುತ್ತದೆ”, ಎಂದರು.

ಹಿಂದೂಗಳು ಒಟ್ಟಾಗಿ ಶ್ರೀ ಕಾಶಿ ವಿಶ್ವನಾಥನನ್ನು ಪೂಜಿಸುವ ದಿನ ದೂರವಿಲ್ಲ ! – ನ್ಯಾಯವಾದಿ ವಿಷ್ಣುಶಂಕರ ಜೈನ್, ಸರ್ವೋಚ್ಚ ನ್ಯಾಯಾಲಯ

ಜ್ಞಾನವಾಪಿ ಮಸೀದಿಯ ಪ್ರಕರಣದಲ್ಲಿ, ಸರ್ವೋಚ್ಚ ನ್ಯಾಯಾಲಯವು ಶಿವಲಿಂಗ ಪತ್ತೆಯಾದ ಭಾಗವನ್ನು ನಿರ್ಬಂಧಿಸುವ ಅನುಮತಿ ನೀಡಿದೆ. ಅಲ್ಲಿ ಇನ್ನೂ ಅನೇಕ ಹಿಂದೂಗಳ ಗುರುತುಗಳು ಮತ್ತು ಚಿಹ್ನೆಗಳು ಕಂಡುಬಂದಿವೆ. ಕಾಶಿ ವಿಶ್ವನಾಥ ದೇಗುಲದಲ್ಲಿ ಹಿಂದೂಗಳು ಒಗ್ಗೂಡಿ ಶ್ರೀ ವಿಶ್ವನಾಥನಿಗೆ ಪೂಜೆ ಸಲ್ಲಿಸುವ ದಿನ ದೂರವಿಲ್ಲ ಎಂದು ‘ಹಿಂದೂ ಫ್ರಂಟ್ ಫಾರ್ ಜಸ್ಟೀಸ್’ನ ರಾಷ್ಟ್ರೀಯ ವಕ್ತಾರ ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ವಿಷ್ಣುಶಂಕರ್ ಜೈನ್ ದೃಢವಾಗಿ ಹೇಳಿದರು. ಅವರು ಅಧಿವೇಶನದಲ್ಲಿ ‘ಪ್ಲೇಸಸ್ ಆಫ್ ವರ್ಶಿಪ್ ಆಕ್ಟ’ನ ಭೀಕರತೆ ಮತ್ತು ಕಾಶಿ-ಮಥುರಾ ಮುಕ್ತಿ ಆಂದೋಲನ’ದ ಕುರಿತು ಮಾತನಾಡಿದರು. ಈ ವೇಳೆ ವ್ಯಾಸಪೀಠದ ಮೇಲೆ ಸರ್ವೋಚ್ಚ ನ್ಯಾಯಾಲಯದ ಪೂ. (ನ್ಯಾಯವಾದಿ) ಹರಿಶಂಕರ ಜೈನ್, ಹಿಂದೂ ವಿಧಿಜ್ಞ ಪರಿಷತ್ತಿನ ರಾಷ್ಟ್ರೀಯ ಉಪಾಧ್ಯಕ್ಷ ನ್ಯಾಯವಾದಿ ಅಮೃತೇಶ ಎನ್.ಪಿ. ಮತ್ತು ‘ಸಿ.ಬಿ.ಐ.’ನ ಮಾಜಿ ಹಂಗಾಮಿ ನಿರ್ದೇಶಕ ಶ್ರೀ. ಎಂ. ನಾಗೇಶ್ವರರಾವ್ ಉಪಸ್ಥಿತರಿದ್ದರು.