ದೇವಸ್ಥಾನಗಳನ್ನು `ಮಾಲ್’ಗಳನ್ನಾಗಿ ಮತ್ತು ತೀರ್ಥಕ್ಷೇತ್ರಗಳನ್ನು ಪ್ರವಾಸಿ ತಾಣಗಳನ್ನಾಗಿ ಮಾಡಬೇಡಿ, ಎಂದು ಆಗ್ರಹ !
ಪ್ರಾಚೀನ ಕಾಲದಲ್ಲಿ ಅಂಗಕೋರ ವಾಟ, ಹಂಪಿ ಇತ್ಯಾದಿಗಳಲ್ಲಿ ಭವ್ಯವಾದ ದೇವಸ್ಥಾನಗಳನ್ನು ನಿರ್ಮಿಸಿದ ರಾಜರು ಮತ್ತು ಮಹಾರಾಜರು ಅದನ್ನು ಉತ್ತಮವಾಗಿ ನಿರ್ವಹಣೆ ಮಾಡುತ್ತಿದ್ದರು. ಈ ದೇವಾಲಯಗಳ ಮೂಲಕ ಗೋಶಾಲೆ, ಅನ್ನಛತ್ರ, ಧರ್ಮಶಾಲೆ, ಶಿಕ್ಷಣಕೇಂದ್ರಗಳನ್ನು ನಡೆಸುವ ಮೂಲಕ ಸಮಾಜಕ್ಕೆ ಅಮೂಲ್ಯವಾದ ಸಹಾಯವನ್ನು ನೀಡಲಾಗುತ್ತಿತ್ತು. ಇದರಿಂದಾಗಿ ಹಿಂದೂ ಸಮಾಜವು ದೇವಸ್ಥಾನಗಳೊಂದಿಗೆ ಜೋಡಿಸಲ್ಪಟ್ಟಿತ್ತು. ಈಗ ಮಾತ್ರ ದೇವಸ್ಥಾನಗಳು ಎಷ್ಟು ವ್ಯಾಪಾರೀಕರಣಗೊಂಡಿವೆ ಎಂದರೆ ಅವು (ಶಾಪಿಂಗ್) `ಮಾಲ್’ಗಳಾಗಿ ಮಾರ್ಪಟ್ಟಿವೆ ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ತೀರ್ಥಕ್ಷೇತ್ರಗಳನ್ನು ಪ್ರವಾಸಿ ತಾಣಗಳಾಗಿ ಪರಿವರ್ತಿಸಲಾಗುತ್ತಿದೆ. ಅದನ್ನು ನಿಲ್ಲಿಸುವುದು ಅಗತ್ಯವಿದೆ. ಆದ್ದರಿಂದ ದೇವಸ್ಥಾನಗಳ ವಿಶ್ವಸ್ಥರು, ಅರ್ಚಕರು ದೇವಸ್ಥಾನಗಳ ಆದರ್ಶ ವ್ಯವಸ್ಥಾಪನೆ ಮಾಡಬೇಕು. ಇದನ್ನು ಸಾಧಿಸಲು, `ದೇವಸ್ಥಾನಗಳ ಆದರ್ಶ ವ್ಯವಸ್ಥಾಪನೆ'(ದಿ ಟೆಂಪಲ್ ಮ್ಯಾನೇಜ್ಮೆಂಟ್) ಎಂಬ ಪಠ್ಯಕ್ರಮವನ್ನು ಪ್ರಾರಂಭಿಸುವ ಒಂದು ಮಹತ್ವವಾದ ಸೂಚನೆಯನ್ನು ಮೊದಲ ಹಿಂದೂ ರಾಷ್ಟ್ರ ಸಂಸತ್ತಿನಲ್ಲಿ ನೀಡಲಾಯಿತು. ಹತ್ತನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನದ ಎರಡನೇ ದಿನ `ದೇವಸ್ಥಾನಗಳ ಸುವ್ಯವಸ್ಥೆ’ ಕುರಿತು ಹಿಂದೂ ರಾಷ್ಟ್ರ ಸಂಸತ್ತಿನಲ್ಲಿ ವಿವಿಧ ದೇವಸ್ಥಾನಗಳ ವಿಶ್ವಸ್ಥರು, ಭಕ್ತರು, ನ್ಯಾಯವಾದಿಗಳು ಮತ್ತು ಹಿಂದುತ್ವನಿಷ್ಠರು ಅಭ್ಯಾಸಪೂರ್ಣ ವಿಚಾರವನ್ನು ವ್ಯಕ್ತಪಡಿಸಿದರು. ಈ ಸಂಸತ್ತಿನ ಸಭಾಪತಿ ಎಂದು ಓಡಿಶಾದ ಶ್ರೀ. ಅನೀಲ ಧೀರ್, ಉಪಸಭಾಪತಿ ಎಂದು ಹಿಂದೂ ಜನಜಾಗೃತಿ ಸಮಿತಿಯ ಧರ್ಮಪ್ರಚಾರಕರಾದ ಪೂ. ನೀಲೇಶ ಸಿಂಗಬಾಳ ಮತ್ತು ಕಾರ್ಯದರ್ಶಿಯಾಗಿ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಆನಂದ ಜಖೋಟಿಯಾ ಅವರು ಕಲಾಪವನ್ನು ನೋಡಿದರು.
ಎರಡೂವರೆ ಗಂಟೆಗಳ ಕಾಲ ನಡೆದ ಸುದೀರ್ಘ ಚರ್ಚೆಯ ನಂತರ ಮೊದಲ ಹಿಂದೂ ರಾಷ್ಟ್ರ ಸಂಸತ್ತಿನಲ್ಲಿ `ಹಿಂದೂ ದೇವಸ್ಥಾನಗಳನ್ನು ಸರಕಾರದ ಹಿಡಿತದಿಂದ ಮುಕ್ತಗೊಳಿಸಿ ಅದನ್ನು ಭಕ್ತರಿಗೆ ಹಸ್ತಾಂತರಿಸಬೇಕು’, `ದೇವಸ್ಥಾನದಲ್ಲಿನ ಕೆಲಸಕಾರ್ಯಗಳಿಗೆ ಕೇವಲ ಹಿಂದೂಗಳನ್ನೇ ನೇಮಿಸಬೇಕು’, `ದೇವಸ್ಥಾನದ ಪರಿಸರದಲ್ಲಿ ಮದ್ಯ, ಮಾಂಸ ಇವುಗಳನ್ನು ನಿಷೇಧಿಸಬೇಕು’, ಅದೇ ರೀತಿ `ಇತರ ಧರ್ಮದ ಪ್ರಸಾರವನ್ನು ನಿಷೇಧಿಸಬೇಕು’, ಇಂತಹ ಪ್ರಸ್ತಾವನೆಗೆ ಅನುಮೋದನೆ ನೀಡಲಾಯಿತು. `ಜಯತು ಜಯತು ಹಿಂದೂರಾಷ್ಟ್ರಮ್’ನ ಗರ್ಜನೆಯಲ್ಲಿ ನೆರೆದಿದ್ದ ಧರ್ಮನಿಷ್ಠರು ಇದನ್ನು ಅನುಮೋದಿಸಿದರು.
ಆರಂಭದಲ್ಲಿ ವಿಷಯ ಮಂಡಿಸುವಾಗ ಉಪಸಭಾಪತಿ ಪೂ. ಸಿಂಗಬಾಳ ಇವರು ಮಾತನಾಡುತ್ತಾ, “ಇಂದು ಸರಕಾರಿಕರಣಗೊಂಡಿರುವ ಪ್ರತಿಯೊಂದು ದೇವಸ್ಥಾನದ ದೇವನಿಧಿಯ ದುರುಪಯೋಗವಾಗುತ್ತಿರುವುದು ಕಂಡು ಬರುತ್ತಿದೆ. ಅದರ ಸರಿಯಾದ ಬಳಕೆಗಾಗಿ ದೇವಸ್ಥಾನಗಳ ಸುವ್ಯವಸ್ಥಾಪನೆಯಾಗುವುದು ಬಹಳ ಮುಖ್ಯವಾಗಿದೆ”, ಎಂದರು. ಅಮರಾವತಿಯಲ್ಲಿನ `ರಾಮಪ್ರಿಯ ಫೌಂಡೇಶನ್’ನ ಅಧ್ಯಕ್ಷೆ ರಾಮಪ್ರಿಯಾಶ್ರೀ(ಮಾಯಿ) ಅವಘಡ ಇವರು ಮಾತನಾಡುತ್ತಾ, “ಭಾರತ ದೇಶದ ಇತಿಹಾಸ ಯುವಕರ ತನಕ ತಲುಪಿಸುವುದು ಅಗತ್ಯವಾಗಿದೆ. ಅದಕ್ಕಾಗಿ ಮಕ್ಕಳು ಮತ್ತು ಯುವಕರನ್ನು ದೇವಸ್ಥಾನಗಳೊಂದಿಗೆ ಜೋಡಿಸುವುದು ಅಗತ್ಯವಾಗಿದೆ” ಎಂದು ಹೇಳಿದರು. ಸನಾತನ ಸಂಸ್ಥೆಯ ಧರ್ಮಪ್ರಚಾರಕ ಸದ್ಗುರು ನಂದಕುಮಾರ ಜಾಧವ ಇವರು ತಮ್ಮ ಅಭಿಪ್ರಾಯವನ್ನು ಮಂಡಿಸುತ್ತಾ, `ಹೇಗೆ ಗೋವಾದಲ್ಲಿ ಆದರ್ಶ ವಸ್ತ್ರಸಂಹಿತೆಯನ್ನು ಜಾರಿಗೊಳಿಸಿದೆ, ಅದೇ ರೀತಿ ದೇಶಾದ್ಯಂತದ ದೇವಸ್ಥಾನಗಳಲ್ಲಿಯೂ ಜಾರಿಗೊಳಿಸುವುದು ಅಗತ್ಯವಿದೆ’, ಎಂದರು. ಈ ಸಮಯದಲ್ಲಿ ಅಮಳನೇರ (ಜಳಗಾವ) ಮಂಗಳಗ್ರಹ ಸೇವಾ ಸಂಸ್ಥೆಯ ಜನಸಂಪರ್ಕ ಅಧಿಕಾರಿ ಶ್ರೀ. ಶರದ ಕುಲಕರ್ಣಿ, ಚಾಂದೂರಬಜಾರನಲ್ಲಿ (ಅಮರಾವತಿ) `ಗಜಾನನ ಮಹಾರಾಜ ಸೇವಾ ಸಮಿತಿ’ಯ ಹ.ಭ.ಪ.ದ ಮದನ ತಿರಮಾರೆ, ನಾಂದೇಡನ ಶ್ರೀ. ಸಂತ ಪಾಚಲೆಗಾವಕರ ಮುಕ್ತೇಶ್ವರ ದೇವಸ್ಥಾನ’ದ ಅಧ್ಯಕ್ಷ ಶ್ರೀ. ಸುಧಾಕರ ಟಾಕ ಅವರು ದೇವಸ್ಥಾನಗಳ ವ್ಯವಸ್ಥಾಪನೆಯನ್ನು ಹೇಗೆ ನಿರ್ವಹಿಸುತ್ತಾರೆ ಎಂಬುದನ್ನು ವಿವರಿಸಿದರು. ಈ ಅಧಿವೇಶನವನ್ನು ಹಿಂದೂ ಜನಜಾಗೃತಿ ಸಮಿತಿಯ ವೆಬ್‌ಸೈಟ್ ‘HinduJagruti.org’ ನಲ್ಲಿ ಮತ್ತು `HinduJagruti’ ಈ `ಯೂಟ್ಯೂಬ್’ ಚಾನೆಲ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತಿದೆ.