Video – ಕಾಶಿ ಮತ್ತು ಮಥುರಾ ಇಲ್ಲಿಯ ದೇವಸ್ಥಾನಗಳನ್ನು ವಶಕ್ಕೆ ಪಡೆದ ನಂತರ ಹಿಂದೂಗಳು ಮುಂದಿನ ಕಾರ್ಯದ ಯೋಚನೆ ಮಾಡಬೇಕು ! – ನ್ಯಾಯವಾದಿ ಮದನ ಮೋಹನ ಯಾದವ, ವಾರಾಣಸಿ, ಉತ್ತರಪ್ರದೇಶ

ನ್ಯಾಯವಾದಿ ಮದನ ಮೋಹನ ಯಾದವ

ಜ್ಯೂಗಳು ಸಂಪೂರ್ಣ ಜಗತ್ತಿನಲ್ಲಿ ಹರಡಿಹೋಗಿದ್ದರು; ಹೀಗಿರುವಾಗ ಅವರು ಇಸ್ರಾಯೆಲ್ ಎಂಬ ತಮ್ಮ ಸ್ವತಂತ್ರ ರಾಷ್ಟ್ರವನ್ನು ನಿರ್ಮಿಸಿದರು. ಹಾಗಾಗಿ ಹಿಂದೂ ರಾಷ್ಟ್ರವನ್ನು ಸ್ಥಾಪಿಸುವುದು ಏನು ಅಸಾಧ್ಯವಿಲ್ಲ. ಭಾಜಪದ ನಾಯಕಿ ನೂಪುರ ಶರ್ಮ ಅವರ ಹೇಳಿಕೆಯ ನಂತರ ೫೭ ಇಸ್ಲಾಮಿಕ್ ರಾಷ್ಟ್ರಗಳು ಆಕ್ರಂದನ ನಡೆಸಿದವು; ಆದರೆ ಇನ್ನೊಂದು ಪಕ್ಷದಲ್ಲಿ ಕಪೋಲಕಲ್ಪಿತ ಜ್ಞಾನವಾಪಿ ಮಸೀದಿಯ ಗೋಡೆಗಳು ಜ್ಞಾನವಾಪಿ ದೇವಸ್ಥಾನವಿರುವುದು ಕೂಗಿ ಕೂಗಿ ಹೇಳುತ್ತಿವೆ. ಜ್ಞಾನವಾಪಿ ಹೋರಾಟದಲ್ಲಿ ನಮಗೆ ಸಾಮಾಜಿಕ ಮಾಧ್ಯಮದ ಸಹಾಯ ದೊರೆತಿದೆ. ಸಾಮಾಜಿಕ ಮಾಧ್ಯಮದಲ್ಲಿಯೂ ಜಿಹಾದಿ ಮತ್ತು ಸಾಮ್ಯವಾದಿ ವಿಚಾರದ ಜನಗಳು ಇದ್ದಾರೆ. ಹಿಂದುತ್ವದ ಕಾರ್ಯಕ್ಕಾಗಿ ನಮಗೆ ಸಹಾಯಮಾಡುವ ಮಾಧ್ಯಮದವರನ್ನು ನಮ್ಮೊಂದಿಗೆ ಜೋಡಿಸಿಕೊಂಡಿರಬೇಕು. ಕಾಶಿಯಲ್ಲಿ ವಿಶ್ವನಾಥ ಮಂದಿರವನ್ನು ಏಳುಸಾರಿ ನಾಶ ಗೊಳಿಸಲಾಗಿತ್ತು. ಕಾಶಿ ಇದು ಹಿಂದುಗಳ ಧಾರ್ಮಿಕ ವಿಧಿಯ ಕ್ಷೇತ್ರವಾಗಿದೆ. ಇತಿಹಾಸ ಕಾಲದಲ್ಲಿ ಇಲ್ಲಿ ಹಿಂದೂಗಳ ೧೦ ಧಾರ್ಮಿಕ ಸ್ಥಳಗಳನ್ನು ನಾಶಗೊಳಿಸಲಾಯಿತು. ಇಲ್ಲಿ ಬಿಂದು ಮಾಧವನ ಪ್ರಸಿದ್ಧ ದೇವಸ್ಥಾನ ಇದೆ. ಪ್ರಸಿದ್ಧ ಸಂತಕವಿ ರಾಮಾನಂದಚಾರ್ಯ ರು ಇಲ್ಲಿ ತಪಸ್ಸು ಮಾಡಿದ್ದಾರೆ. ಈ ಸ್ಥಳದಲ್ಲಿ ಮಸೀದಿ ನಿರ್ಮಾಣವಾಗಿದ್ದು ನೋಡಿ ತುಂಬಾ ದುಃಖವಾಗುತ್ತದೆ. ಕಾಶಿ ಮತ್ತು ಮಥುರಾದ ದೇವಸ್ಥಾನಗಳನ್ನು ವಶಕ್ಕೆ ಪಡೆದ ನಂತರ ಮುಂದಿನ ಕಾರ್ಯದ ಬಗ್ಗೆ ಹಿಂದೂಗಳು ಯೋಚನೆ ಮಾಡಬೇಕು.

(ಸೌಜನ್ಯ : Hindu Janajagruti Samiti)