ದೇವಸ್ಥಾನಗಳ ಮೇಲೆ ಆಕ್ರಮಣ ನಡೆಸಿ ಆಕ್ರಮಣಕಾರರು ಹಿಂದೂಗಳನ್ನು ದುರ್ಬಲ ಗೊಳಿಸಿದ್ದಾರೆ ! – ನ್ಯಾಯವಾದಿ ವಿಷ್ಣು ಶಂಕರ ಜೈನ, ಸರ್ವೋಚ್ಚ ನ್ಯಾಯಾಲಯ

ನ್ಯಾಯವಾದಿ ವಿಷ್ಣು ಶಂಕರ ಜೈನ

ದೇವಸ್ಥಾನಗಳು ಹಿಂದೂಗಳಿಗಾಗಿ ಗೌರವದ ಮತ್ತು ಆದರದ ಸ್ಥಳವಾಗಿವೆ. ಆದ್ದರಿಂದ ದೇವಸ್ಥಾನಗಳನ್ನು ಮತ್ತೆ ಹಿಂದೂಗಳ ವಶಕ್ಕೆ ನೀಡಿ ಹಿಂದೂಗಳ ವೈಭವ ಅವರಿಗೆ ಮತ್ತೆ ಹಿಂತಿರುಗಿಸುವ ಅವಶ್ಯಕತೆ ಇದೆ. ಹಿಂದೆ ಆಗಿಹೋಗಿರುವ ರಾಜರು ಸಹ ದೇವಸ್ಥಾನ ಕಟ್ಟುವುದು ಮತ್ತು ಅದನ್ನು ರಕ್ಷಿಸುವುದಕ್ಕೆ ಮಹತ್ವದ ಸ್ಥಾನ ನೀಡಿದ್ದರು. ಯಾವ ರೀತಿ ರಾಜಮಹಾರಾಜರ ಮೇಲೆ ಆಕ್ರಮಣವಾದರೆ ಪ್ರಜೆ ದುರ್ಬಲ ವಾಗುತ್ತದೆಯೋ, ಅದೇ ರೀತಿ ಆಕ್ರಮಣಕಾರರು ದೇವಸ್ಥಾನಗಳ ಮೇಲೆ ಆಕ್ರಮಣ ನಡೆಸಿ ಹಿಂದೂಗಳನ್ನು ದುರ್ಬಲಗೊಳಿಸಿದ್ದಾರೆ. ಭೋಜರಾಜರು ಭೋಜ ಶಾಲೆಯ ಮುಖಾಂತರ ಸಂಸ್ಕೃತ ಪಾಠಶಾಲೆಯನ್ನು ನಿರ್ಮಿಸಿದ್ದರು. ಅದೇ ಸ್ಥಳದಲ್ಲಿ ೧೦೩೪ ನೇ ಇಸ್ವಿಯಲ್ಲಿ ಭೋಜರಾಜನು ಒಂದು ದೇವಸ್ಥಾನವನ್ನು ನಿರ್ಮಿಸಿದನು. ಆದರೆ ಆ ಸ್ಥಳದ ಮೇಲೆ ಮತಾಂಧರು ಆಕ್ರಮಣ ನಡೆಸಿ ದೇವಸ್ಥಾನವನ್ನು ನಾಶಗೊಳಿಸಿದರು ಮತ್ತು ಅಲ್ಲಿ ಮಸೀದಿ ಇದೆ ಎಂದು ಘೋಷಿಸಿದರು. ಕಾಲಾಂತರದಲ್ಲಿ ಆ ಸ್ಥಳದಲ್ಲಿ ಮುಸಲ್ಮಾನರಿಗೆ ಪ್ರತಿ ಶುಕ್ರವಾರ ನಮಾಜ ಪಠಿಸಲು ಅನುಮತಿ ನೀಡಲಾಯಿತು. ಬೋಜ ಶಾಲೆಯಲ್ಲಿನ ಅನೇಕ ಐತಿಹಾಸಿಕ ವಾಸ್ತುವನ್ನು ನಾಶಗೊಳಿಸಿ ಆ ಸ್ಥಳದಲ್ಲಿ ಮತಾಂಧರು ಅತಿಕ್ರಮಣ ನಡೆಸಿರುವ ಅನೇಕ ಸಾಕ್ಷಿಗಳು ಉಪಲಬ್ಧವಿವೆ. ಮಂದಿರ ಮುಕ್ತಿ ಸಂಗ್ರಾಮದಲ್ಲಿ ಜಾತಿ, ಪದವಿ, ಪಕ್ಷ, ಸಂಘಟನೆ ಎಲ್ಲ ಮರೆತು ಹಿಂದೂ ಸಮಾಜ ಸಂಘಟಿತವಾದರೆ ಎಲ್ಲಾ ದೇವಸ್ಥಾನಗಳನ್ನು ವಶಕ್ಕೆ ಪಡೆಯಲು ಹಿಂದೂಗಳಿಗೆ ಹೆಚ್ಚು ಸಮಯ ಬೇಕಾಗುವುದಿಲ್ಲ, ಹೀಗೆಂದು ಹಿಂದೂ ಫ್ರೆಂಡ್ಸ್ ಫಾರ್ ಜಸ್ಟೀಸ್ ನ ವಕ್ತಾರರಾದ ನ್ಯಾಯವಾದಿ ವಿಷ್ಣುಶಂಕರ್ ಜೈನ್ ಇವರು ಪ್ರತಿಪಾದಿಸಿದರು. ಹತ್ತನೇ ಅಖಿಲಭಾರತೀಯ ಹಿಂದೂರಾಷ್ಟ್ರ ಅಧಿವೇಶನದ ಎರಡನೆಯ ದಿನದ ಮೊದಲನೆಯ ಸತ್ರದಲ್ಲಿ ಅಯೋಧ್ಯಾ ಕಾಶಿ ಮಥುರಾ ಇದರ ನಂತರ ಇನ್ನು ಭೋಜಶಾಲಾ ಮುಕ್ತಿ ಸಂಗ್ರಾಮ ಈ ವಿಷಯದ ಮೇಲೆ ಮಾತನಾಡುತ್ತಿದ್ದರು.

ಭೋಜ ಶಾಲೆಯ ಮಂಟಪ

ನ್ಯಾಯವಾದಿ ವಿಷ್ಣು ಶಂಕರ ಜೈನರು ವಿಷಯ ಪ್ರಸ್ತುತ ಪಡಿಸುತ್ತಾ ಭೋಜ ಶಾಲೆಯ ಸ್ಥಳದಲ್ಲಿ ನಡೆದಿರುವ ಇಸ್ಲಾಮಿಕ್ ಆಕ್ರಮಣ ವಿಷಯವಾಗಿ ಸವಿಸ್ತಾರ ಮಾಹಿತಿ ನೀಡುವಾಗ ಭೋಜಶಾಲೆಯಲ್ಲಿನ ಹಿಂದೂ ಸಂಸ್ಕೃತಿಯ ಪ್ರತೀಕ ಇರುವ ಕಲಾಕೃತಿಗಳು ಮತ್ತು ಐತಿಹಾಸಿಕ ಅವಶೇಷಗಳ ಛಾಯಾಚಿತ್ರಗಳನ್ನು ಪ್ರೊಜೆಕ್ಟರ್ ಮೇಲೆ ಪ್ರಸ್ತುತಪಡಿಸಿದರು. ಭೋಜ ಶಾಲೆಯಲ್ಲಿನ ಗೋಡೆಯ ಕಲ್ಲುಗಳ ಮೇಲೆ ಕೊರೆದಿರುವ ಸಂಸ್ಕೃತ ಶ್ಲೋಕ, ಧರ್ಮಚಕ್ರ, ಮಂದಿರದ ಕಲಾಕೃತಿ ಇರುವ ಕಮಾನುಗಳು ಮತ್ತು ಸ್ತಂಭಗಳು, ಹಾಗೂ ಮುಖ್ಯ ಮಂದಿರದ ಮಂಟಪದ ಛಾಯಾಚಿತ್ರಗಳನ್ನು ತೋರಿಸಲಾಯಿತು.