ಗೋವಾದಲ್ಲಿ ಚರ್ಚ್ಗಳು ವಶಪಡಿಸಿಕೊಂಡ ದೇವಾಲಯಗಳ ಪುನರಸ್ಥಾಪನೆಗೆ ಹಿಂದೂಗಳು ಒಟ್ಟಾಗಿ ಹೋರಾಡಬೇಕಾಗುತ್ತದೆ ! – ಪ್ರೊ. ಸುಭಾಷ ವೆಲಿಂಗಕರ, ರಾಜ್ಯ ಸಂಘಚಾಲಕ, ಭಾರತ ಮಾತಾ ಕಿ ಜೈ ಸಂಘ, ಗೋವಾ

ಅಖಿಲ ಭಾರತ ಹಿಂದೂ ರಾಷ್ಟ್ರ ಅಧಿವೇಶನದ ಎರಡನೇ ದಿನದ ಮೊದಲ ಸತ್ರ

* ದೇವಾಲಯಗಳ ಮೇಲಿನ ಇಸ್ಲಾಮಿಕ್ ಮತ್ತು ಕ್ರೈಸ್ತ ಅತಿಕ್ರಮಣದ ಆಘಾತಗಳನ್ನು ಬಹಿರಂಗ ಪಡಿಸಿದ ಗಣ್ಯರು !

ಪ್ರೊ. ಸುಭಾಷ ವೆಲಿಂಗಕರ

ರಾಮನಾಥಿ, – ಪೋರ್ಚುಗೀಸರ ಆಳ್ವಿಕೆಯಲ್ಲಿ ಗೋವಾದಲ್ಲಿ ದೊಡ್ಡ ಮತ್ತು ಚಿಕ್ಕದಾದ ೧,೦೦೦ ಕ್ಕೂ ಹೆಚ್ಚು ದೇವಾಲಯಗಳನ್ನು ನಷ್ಟಗೊಳಿಸಲಾಗಿದೆ. ಇವುಗಳಲ್ಲಿ ಕೇವಲ ಎರಡು ದೇವಾಲಯಗಳು, ವರೇಣ್ಯಪುರಿ (ವೆರ್ಣಾ) ಮತ್ತು ಶ್ರೀ ವಿಜಯದುರ್ಗಾದೇವಿ (ಶಂಖಾವಳಿ) ಚರ್ಚ್ನ ದಾಳಿಯಿಂದ ಪಾರಾದವು. ಈ ದೇವಾಲಯಗಳನ್ನು ರಾಜ್ಯ ಪುರಾತತ್ವ ಇಲಾಖೆಯ ಅಡಿಯಲ್ಲಿ ಸಂರಕ್ಷಿತವೆಂದು  ಘೋಷಿಸಲಾಗಿದೆ. ಹೀಗಿದ್ದರೂ ಚರ್ಚ್ ಮೂಲಕ ಈ ದೇವಸ್ಥಾನದ ಜಮೀನನ್ನು ಕಬಳಿಸುವ ಷಡ್ಯಂತ್ರವು ಹಲವು ವರ್ಷಗಳಿಂದ ನಡೆಯುತ್ತಿದೆ. ಗೋವಾದಲ್ಲಿ ಚರ್ಚ್ಗಳು ವಶಪಡಿಸಿಕೊಂಡಿರುವ ದೇವಾಲಯಗಳ ಪುನರಸ್ಥಾಪನೆಗಾಗಿ ಹಿಂದೂಗಳು ಒಟ್ಟಾಗಿ ಹೋರಾಡಬೇಕು ಎಂದು ಗೋವಾದಲ್ಲಿನ `ಭಾರತ ಮಾತಾ ಕಿ ಜೈ ಸಂಘ’ ದ ರಾಜ್ಯ ಸಂಘಚಾಲಕರಾದ ಪ್ರೊ. ಸುಭಾಷ ವೆಲಿಂಗಕರ ಇವರು ಕರೆ ನೀಡಿದರು. ಅವರು ೧೦ನೇ ಅಖಿಲ ಭಾರತ ಹಿಂದೂ ರಾಷ್ಟ ಅಧಿವೇಶನದ ಎರಡನೇ ದಿನ `ದೇವಾಲಯಗಳ ಮೇಲೆ ಇಸ್ಲಾಮೀ ಮತ್ತು ಕ್ರೈಸ್ತ ಅತಿಕ್ರಮಣ’ ಎಂಬ ವಿಷಯದ ಕುರಿತು ಮಾತನಾಡುತ್ತಿದ್ದರು. ಈ ಸಮಯದಲ್ಲಿ ವ್ಯಾಸಪೀಠದಲ್ಲಿ ವಾರಣಾಸಿಯ ನ್ಯಾಯವಾದಿ ಮದನ ಮೋಹನ ಯಾದವ ಇವರು, `ಹಿಂದೂ ಫ್ರಂಟ್ ಫಾರ್ ಜಸ್ಟಿಸ್’ನ ವಕ್ತಾರ ನ್ಯಾಯವಾದಿ ವಿಷ್ಣು ಶಂಕರ ಜೈನ ಮತ್ತು ಸನಾತನ ಸಂಸ್ಥೆಯ ಧರ್ಮಪ್ರಚಾರಕ ಪೂ. ಅಶೋಕ ಪಾತ್ರೀಕರ ಉಪಸ್ಥಿತರಿದ್ದರು.

ಈ ಸಮಯದಲ್ಲಿ ಪ್ರಾ. ಸುಭಾಷ ವೆಲಿಂಗಕರರು ಹೀಗೆಂದರು.

೧. ವರೇಣ್ಯಾಪುರಿ (ವೆರ್ಣಾ) ಹಾಗೂ ಶ್ರೀ ವಿಜಯಾದುರ್ಗಾದೇವಿ ದೇವಸ್ಥಾನದ ಜಮೀನನ್ನು ಕಬಳಿಸಲು ದೇವಸ್ಥಾನದ ಪರಿಸರದಲ್ಲಿನ ಮರಗಳನ್ನು ಕಡಿಯುವುದು, ಪಕ್ಕದ ಕೆರೆಯನ್ನು ಮುಚ್ಚುವುದು ಸೇರಿದಂತೆ ಹಲವು ಅಕ್ರಮಗಳು ನಡೆಯುತ್ತಿವೆ. ಈ ಬಗ್ಗೆ ಹಿಂದೂ ಭಕ್ತರು ನೀಡಿದ ದೂರುಗಳನ್ನು ನಿರ್ಲಕ್ಷಿಸಲಾಗುತ್ತಿದೆ.

೨. ವಿಜಯಾದುರ್ಗಾದೇವಿ ಸ್ಥಳವನ್ನು ಪುರಾತತ್ವ ಇಲಾಖೆಯು `ಫ್ರಂಟಿಸ್ ಪೀಸ್ ಆಫ್ ಸಾಂಕವಾಳ’ ಎಂಬ ಹೆಸರಿನಲ್ಲಿ ರಕ್ಷಿಸುತ್ತದೆ. ಸರಕಾರದ ಸ್ತರದಲ್ಲಿಯೂ ಈ ಸ್ಥಳದ ಜೋಪಾಸನೆಯನ್ನು ನಿರ್ಲಕ್ಷಿಸಲಾಗುತ್ತಿದೆ.

೩. ಪುರಾತತ್ವ ಇಲಾಖೆಯ ಅನುಮತಿ ಇಲ್ಲದೇ ಈ ಜಾಗದಲ್ಲಿ ಯಾವುದೇ ಕಾರ್ಯಗಳನ್ನು ಮಾಡುವಂತಿಲ್ಲ. ಹೀಗಿರುವಾಗಲೂ ಕ್ರೆಸ್ತರು ಇಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವ ಮೂಲಕ `ಈ ಭೂಮಿ ಚರ್ಚ್ ಗೆ ಸೇರಿದ್ದು’ ಎಂದು ತೋರಿಸಲು ಯತ್ನಿಸುತ್ತಿದ್ದಾರೆ.

೪. ಕಳೆದ ೧೦ ವರ್ಷಗಳಿಂದ ಈ ಭೂಮಿಯನ್ನು ಚರ್ಚ್ ಮೂಲಕ ಕಬಳಿಸುವ ಷಡ್ಯಂತ್ರ ನಡೆಯುತ್ತಿದ್ದು, ಹಿಂದೂಗಳ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಅವರನ್ನು ಹಿಂಸಿಸಲು ಪ್ರಯತ್ನಿಸಲಾಗುತ್ತಿದೆ.

೫. ಜೆಸಿಬಿಯ ನೆರವಿನಿಂದ ದೇವಸ್ಥಾನದ ಜಾಗದಲ್ಲಿದ್ದ ದೇವಸ್ಥಾನದ ಅವಶೇಷಗಳ ಕಲ್ಲುಗಳನ್ನು ಭೂಮಿಯಲ್ಲಿ ಹೂತು ಹಾಕಲಾಯಿತು.

೬. ಈ ಪ್ರದೇಶಕ್ಕೆ ದೇಶದ ಇತರ ಭಾಗಗಳಿಂದ ಅನೇಕ ಕ್ರೈಸ್ತರು ಪಾದಯಾತ್ರೆ ಹೊರಡಿಸಿ ಈ ಪ್ರದೇಶಕ್ಕೆ ಭೇಟಿ ನೀಡಲಾಗುತ್ತದೆ ಮತ್ತು ಈ ಪ್ರದೇಶವು ಚರ್ಚ್ಗೆ ಸೇರಿದೆ ಎಂದು ಬಿಂಬಿಸಲಾಗುತ್ತಿದೆ.