ಕಾನೂನಿನಲ್ಲಿರುವ ನ್ಯೂನ್ಯತೆಗಳ ಕಾರಣದಿಂದ ನ್ಯಾಯಾಲಯದ ತೀರ್ಪುಗಳಿಂದ ಸತ್ಯ ಹೊರಬರುವುದಿಲ್ಲ !- ನ್ಯಾಯವಾದಿ ಮಕರಂದ ಆಡಕರ, ಅಧ್ಯಕ್ಷ, ಮಹಾರಾಷ್ಟ್ರ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆ, ನವದೆಹಲಿ

ನ್ಯಾಯವಾದಿ ಶ್ರೀ. ಮಕರಂದ ಆಡಕರ

ರಾಮನಾಥಿ, ೧೩ ಜೂನ(ವಾರ್ತೆ) – ದೂರುದಾರರಿಗೆ ಅವರ ದಾವೆಯ ಸತ್ಯಾಸತ್ಯೆಯ ಅರಿವು ಇರುತ್ತದೆ; ಆದರೆ ಅವರು ನ್ಯಾಯವಾದಿಗಳಿಗೆ ನೀಡುವ ಮಾಹಿತಿಯ ಮೇಲೆ ನ್ಯಾಯವಾದಿಗಳು ಆ ದಾವೆಯನ್ನು ಕಾನೂನಿನ ಚೌಕಟ್ಟಿನೊಳಗೆ ಬರುವಂತೆ ಮಾಡುತ್ತಾರೆ. ಇದರಿಂದ ನ್ಯಾಯಾಲಯವು ತೀರ್ಪು ನೀಡುತ್ತದೆ. ಆದರೆ ಅದರಿಂದ ‘ ಸತ್ಯ ಹೊರಗೆ ಬಂದೇ ಬರುತ್ತದೆ’, ಎಂದೇನಿಲ್ಲ. ಜಿಲ್ಲಾ ನ್ಯಾಯಾಲಯ, ಉಚ್ಚ ನ್ಯಾಯಾಲಯ, ಸರ್ವೋಚ್ಚ ನ್ಯಾಯಾಲಯ ಮುಂತಾದ ವಿವಿಧ ಸ್ಥಳಗಳಲ್ಲಿ ಅನೇಕ ಬಾರಿ ನ್ಯಾಯಾಲಯದ ತೀರ್ಪು ಪ್ರತ್ಯೇಕವಾಗಿರುತ್ತವೆ. ಒಂದು ದಾವೆಯಲ್ಲಿಯಂತೂ ನ್ಯಾಯಾಧೀಶರು ‘ಅಪರಾಧ ಯಾರು ಮಾಡಿದ್ದಾರೆಂದು ತಿಳಿದಿದೆ; ಆದರೆ ನನ್ನ ಕೈಗಳನ್ನು ಕಾನೂನು ಕಟ್ಟಿ ಹಾಕಿದೆ ’, ಎಂದು ಹೇಳಿದ್ದರು. ಇದರಿಂದ ಆರೋಪಿಯು ನಿರ್ದೋಷಿಯೆಂದು ಬಿಡುಗಡೆಯಾದನು. ‘ನಾರ್ಕೊ’ (ಕೆಲವು ಔಷಧಿಗಳನ್ನು ನೀಡಿದಾಗ ಆರೋಪಿಯ ಅರಿವು ಅಳಿದಾಗ ಮಾನಸೋಪಚಾರ ತಜ್ಞರ ಉಪಸ್ಥಿತಿಯಲ್ಲಿ ಅವನನ್ನು ಪ್ರಶ್ನಿಸಿ ಉತ್ತರಗಳನ್ನು ತಿಳಿದುಕೊಳ್ಳುವುದು), ‘ಬ್ರೇನ್ ಮ್ಯಾಪಿಂಗ್’ ( ವ್ಯಕ್ತಿಗೆ ವಿಶಿಷ್ಟ ಧ್ವನಿಯನ್ನು ಕೇಳಿಸಿ ಅದರ ಮೇಲೆ  ಅವನ ಮೆದುಳಿನಲ್ಲಿ ಯಾವ ಪ್ರತಿಕ್ರಿಯೆ ನಿರ್ಮಾಣವಾಗುತ್ತದೆಯೋ, ಅದರ ಅಧ್ಯಯನ ಮಾಡುವುದು) ಮತ್ತು ‘ ಲಾಯ್ ಡಿಟೆಕ್ಟರ್’ (ವ್ಯಕ್ತಿ ಸುಳ್ಳು ಮಾತನಾಡುತ್ತಿರುವಾಗ ಅವನು ಶ್ವಾಸ ತೆಗೆದುಕೊಳ್ಳುವ ವೇಗ, ರಕ್ತದೊತ್ತಡ ಮುಂತಾದವು ಬದಲಾಗುತ್ತವೆ. ಇದರ ಅಧ್ಯಯನ ಮಾಡಿ ವಿಶೇಷ ಯಂತ್ರದ ಸಹಾಯದಿಂದ ವ್ಯಕ್ತಿಗೆ ಪ್ರಶ್ನೆಗಳನ್ನು ಕೇಳುವುದು ಮತ್ತು ಆ ಸಮಯದಲ್ಲಿ ಯಂತ್ರದ ಆಧಾರದಲ್ಲಿ ಅವರ ಬದಲಾಗುವ ಶಾರೀರಿಕ ಸ್ಥಿತಿಯ ಅಧ್ಯಯನ ಮಾಡುವುದು) ಇಂತಹ ತಪಾಸಣೆಗಳನ್ನು ನಡೆಸಲು ಆರೋಪಿಯ ಸಮ್ಮತಿ ಆವಶ್ಯಕವಿರುತ್ತದೆ; ಆದರೆ ಸಂವಿಧಾನದ ‘ಕಲಂ ೨೦’ ಅನುಸಾರ ಆರೋಪಿ ತನ್ನ ವಿರುದ್ಧ ಉತ್ತರ ನೀಡಲಾರ ಎಂದಿದೆ. ಹೀಗಿರುವಾಗ ಈ ತಪಾಸಣೆಗಳಿಂದ ಹೊರಬರುವ ಆರೋಪಿಯ ತನ್ನ ವಿರುದ್ಧದ ಉತ್ತರಗಳಿಗೆ ಕಾನೂನಿನ ಯಾವ ಆಧಾರವಿದೆ? ಈ ರೀತಿ ಕಾನೂನಿನಲ್ಲಿ ನ್ಯೂನ್ಯತೆಗಳು ಕಂಡು ಬರುತ್ತವೆ. ಕಾನೂನಿನಲ್ಲಿರುವ  ಇಂತಹ ಅನೇಕ ನ್ಯೂನ್ಯತೆಗಳಿಂದ ನ್ಯಾಯಾಲಯದ ತೀರ್ಪುಗಳಿಂದ ಸತ್ಯ ಹೊರಬರುವುದಿಲ್ಲ. ಕಾನೂನಿನಲ್ಲಿರುವ ನ್ಯೂನ್ಯತೆಗಳಿಂದ ನ್ಯಾಯಾಲಯದಲ್ಲಿ ಅನೇಕ ವರ್ಷಗಳ ವರೆಗೆ ದಾವೆಗಳು ನಡೆಯುತ್ತವೆ ಎಂದು  ನವದೆಹಲಿಯ ‘ಮಹಾರಾಷ್ಟ್ರ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯ’ ಅಧ್ಯಕ್ಷರಾದ ನ್ಯಾಯವಾದಿ ಮಕರಂದ ಆಡಕರ ಇವರು ಬೇಸರ ವ್ಯಕ್ತಪಡಿಸಿದರು.  ಅವರು ೧೦ನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರಅಧಿವೇಶನದ ಮೊದಲನೆಯ ದಿನ(೧೨ ಜುಲೈ ೨೦೨೨ ರಂದು) ‘ಭಾರತೀಯ ಕಾನೂನಿನಲ್ಲಿರುವ ನ್ಯೂನ್ಯತೆಗಳು ಮತ್ತು ಅದರ ಮೇಲೆ ಬ್ರಿಟಿಷರ ಪ್ರಭಾವ’ ಈ ವಿಷಯದ ಮೇಲೆ ಮಾತನಾಡುತ್ತಿದ್ದರು. ನಗರ(ಮಹಾರಾಷ್ಟ್ರ)ದ  ‘ಹಿಂದೂ ಜಾಗರಣ ಮಂಚ’ ಸಂಸ್ಥೆಯ ಭೂಮಿ ಸಂರಕ್ಷಣೆಯ ಜಿಲ್ಲಾ ಸಂಯೋಜಕರಾದ ಶ್ರೀ ಅಮೋಲ ಶಿಂದೆ, ನ್ಯಾಯವಾದಿ ಪ್ರಸೂನ ಮೈತ್ರ, ಸಂಸ್ಥಾಪಕ, ಆತ್ಮದೀಪ, ಕೋಲಕತ್ತಾ(ಬಂಗಾಳ) ಮತ್ತು ದೆಹಲಿಯ ‘ಭಾರತಮಾತಾ ಪರಿವಾರ’ದ ಕಾರ್ಯದರ್ಶಿಗಳು ಮತ್ತು ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಉಮೇಶ ಶರ್ಮಾ ಇವರೂ ತಮ್ಮ ವಿಚಾರಗಳನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಇನ್ನಿತರ ಗೌರವಾನ್ವಿತರು ವ್ಯಕ್ತ ಪಡಿಸಿದ ವಿಚಾರ !

೧. ಮತಾಂಧರಿಂದಾಗುವ ಭೂಮಿ ಅತಿಕ್ರಮಣದ ವಿರುದ್ಧ ಹಿಂದೂಗಳು ನ್ಯಾಯೋಚಿತ ಮಾರ್ಗದಿಂದ ಮತ್ತು ದಿಟ್ಟತನದಿಂದ ವಿರೋಧಿಸಬೇಕಾಗಿದೆ!- ಅಮೋಲ ಶಿಂದೆ, ಜಿಲ್ಲಾ ಸಂಯೋಜಕರು,(ಭೂಮಿ ಸಂರಕ್ಷಣೆ), ಹಿಂದೂ ಜಾಗರಣ ಮಂಚ, ನಗರ

ಶ್ರೀ. ಅಮೋಲ ಶಿಂದೆ

೧. ಇಲ್ಲಿಯವರೆಗೆ ನಾನು ಭೂಮಿ(ಲ್ಯಾಂಡ) ಜಿಹಾದನ ೧೮ ವಿಷಯಗಳನ್ನು ಕೈಗೆತ್ತಿಕೊಂಡಿದ್ದೇನೆ. ನಗರ ಜಿಲ್ಲೆಯಲ್ಲಿ ೨೪ ಗುಂಟೆ ಸರಕಾರಿ ಜಮೀನು ಇತ್ತು. ಮಹಾಪಾಲಿಕೆಯು ‘ಸ್ವಾತಂತ್ರ್ಯವೀರ ಸಾವರಕರ ಉದ್ಯಾನ’ ಈ ಹೆಸರಿನಿಂದ ಆ ಜಮೀನನ್ನು ಕಾಯ್ದಿರಿಸಿತ್ತು.  ಅಲ್ಲಿ ಕೆಲವು ಮೌಲ್ವಿಗಳು ಪೀರ(ಗೋರಿ)  ನಿರ್ಮಿಸಿದ್ದರು. ಅಲ್ಲಿ ಕಸಾಯಿಖಾನೆಯನ್ನು ಪ್ರಾರಂಭಿಸಿದ್ದರು, ಅಲ್ಲದೇ ಕೂದಲು ಕತ್ತರಿಸುವ ಅಂಗಡಿಯನ್ನು ಪ್ರಾರಂಭಿಸಿದ್ದರು. ಅಲ್ಲಿ ೮-೧೦ ಕುಟುಂಬದವರು ವಾಸ ಮಾಡುತ್ತಿದ್ದರು. ಮಧ್ಯಂತರದಲ್ಲಿ ಕೆಲವು ಬಾಂಗ್ಲಾದೇಶಿಗರು ಮತ್ತು ಸ್ಥಳೀಯ ಮುಸಲ್ಮಾನರೂ ಇದ್ದರು. ನಾನು ಆ ಜಮೀನಿನ ಕಾಗದಪತ್ರಗಳನ್ನು ತೆಗೆದುಕೊಂಡು ಸಹೋದ್ಯೋಗಿಗಳ ಸಹಾಯದಿಂದ ಉಚ್ಚ ನ್ಯಾಯಾಲಯದಲ್ಲಿ ದೂರು ದಾಖಲಿಸಿದೆನು.  ತದನಂತರ ಕೆಲವು ಮುಸಲ್ಮಾನರು ನಮ್ಮ ಮೇಲೆ ಸುಳ್ಳು ದೂರುಗಳನ್ನು ದಾಖಲಿಸಿದರು. ನನ್ನ ಸಹೋದ್ಯೋಗಿಯನ್ನು  ಕೊಲ್ಲಲು ಪ್ರಯತ್ನಿಸಲಾಯಿತು. ಈ ದಾವೆಯಲ್ಲಿ ವಕ್ಫ ಮಂಡಳಿಯು ನಮಗೆ ನೊಟೀಸು ಕಳುಹಿಸಿತ್ತು. ‘ಇದು ನಮ್ಮ ಜಮೀನು ಆಗಿದೆ’, ಎಂದು ಅವರು ಹೇಳುತ್ತಿದ್ದರು. ನಾನು ಸಂಭಾಜಿನಗರದ ಖಂಡಪೀಠಕ್ಕೆ ದೂರು ದಾಖಲಿಸಿ ನನ್ನ ಬಳಿ ಎಷ್ಟು ದಾಖಲೆಗಳು ಇದ್ದವೋ, ಅವೆಲ್ಲವನ್ನೂ ಸಂಭಾಜಿನಗರ ಖಂಡಪೀಠಕ್ಕೆ ಹಾಜರು ಪಡಿಸಿದೆನು. ಇದರಿಂದ ಖಂಡಪೀಠವು ವಕ್ಫ ಮಂಡಳಿಯ ಮನವಿಯನ್ನು ತಿರಸ್ಕರಿಸಿ ನಮ್ಮ ಪರವಾಗಿ ತೀರ್ಪು ನೀಡಿತು. ಸಂಭಾಜಿನಗರ ಉಚ್ಚ ನ್ಯಾಯಾಲಯವೇ ಬುಲ್ಡೋಜರ ಮೂಲಕ ಈ ಎಲ್ಲ ಸ್ಥಳವನ್ನು ತೆರವುಗೊಳಿಸಿ ಕೊಟ್ಟಿತು. ‘ಗೋರಿ ಇರುವ ಸ್ಥಳದಲ್ಲಿ ಮಚ್ಛಿಂದ್ರನಾಥ ಮಹಾರಾಜರ ಸಮಾಧಿಯಿದೆ’, ಎಂದು ತೋರಿಸಿಕೊಟ್ಟರು.

೨. ಮತ್ತೊಂದು ಪ್ರಕರಣದಲ್ಲಿ ಮತಾಂಧರು ಒಂದು ಜಮೀನು ಅತಿಕ್ರಮಣ ಮಾಡಿ ಗೋರಿ ನಿರ್ಮಾಣ ಮಾಡಿದ್ದರು. ನಾವು ಹೋಗುವ ಮೊದಲು ಅಲ್ಲಿ ಕುರಿಗಳನ್ನು ಕಡಿಯಲಾಗುತ್ತಿತ್ತು. ನಾವೂ ಅದರ ಮೇಲಿನ ಹಸಿರು ಬಣ್ಣದ ಚದ್ದರ ತೆಗೆದು ಅಲ್ಲಿ ಕೇಸರಿ ಬಣ್ಣದ ವಸ್ತ್ರವನ್ನು ಹಾಕಿದೆವು. ತದನಂತರ ಮತಾಂಧರು ಅಲ್ಲಿಗೆ ಬರಲಿಲ್ಲ ಮತ್ತು ತದನಂತರ ಆ ಸ್ಥಳದಲ್ಲಿ ಕುರಿಯನ್ನು ಕೂಡ ಕಡಿದಿಲ್ಲ.

೩. ನಗರ ಜಿಲ್ಲೆಯ ಒಂದು ತಾಲೂಕಿನ ಹಳ್ಳಿಯೊಂದರಲ್ಲಿ ‘ಶ್ರೀ ಕಾನಿಫನಾಥ ದೇವಸ್ಥಾನಕ್ಕೆ ಜಾಗವನ್ನು ಅರ್ಪಣೆ ಮಾಡಿದೆ’, ಎಂಬ ಫಲಕ ಬರೆಯಲಾಗಿತ್ತು; ಆದರೆ ಗ್ರಾಮಕ್ಕೆ ಭೇಟಿ ನೀಡಿದ ನಂತರ ಅಲ್ಲಿ ಕಾನಿಫನಾಥ ದೇವಸ್ಥಾನ ಇರಲಿಲ್ಲ. ನಮ್ಮ ಬಳಿ ಹಳೆಯ ದಾಖಲೆಗಳಿದ್ದವು. ಪುಣೆಗೆ ಹೋಗಿ ೭/೧೨ ರ ಮೂಲ ದಾಖಲೆಗಳು ಮತ್ತು ಪ್ರತಿಗಳನ್ನು ಪಡೆದುಕೊಂಡೆ. ಅದರ ಆಧಾರದ ಮೇಲೆ ಹುಡುಕಾಡಿದಾಗ, ಪುರಾತನವಾದ ಕಾನಿಫನಾಥ ದೇವಾಲಯವಿದ್ದ ಸ್ಥಳದಲ್ಲಿ ದೊಡ್ಡ ಗೋರಿಯನ್ನು ನಿರ್ಮಿಸಿದ್ದು ಗಮನಕ್ಕೆ ಬಂದಿತು. ಅಲ್ಲಿ ಪ್ರತಿ ವರ್ಷ ರೈತರು ಕುರಿಗಳನ್ನು ಹತ್ಯೆ ಮಾಡುತ್ತಾರೆ. ಪ್ರತಿ ವರ್ಷ ಮತಾಂಧರ ಯಾತ್ರೆ ನಡೆಯುತ್ತಿತ್ತು. ಈ ಕುರಿತು ಆಡಳಿತದ ಬಳಿ ವಿಷಯ ಪ್ರಸ್ತಾಪಿಸಿದ ಆಡಳಿತ ಮಂಡಳಿಯು, ‘ಕಾನೂನು ಸುವ್ಯವಸ್ಥೆ ವಿಚಾರವಾಗಿರುವುದರಿಂದ ತೆಗೆದುಕೊಳ್ಳುವಂತಿಲ್ಲ’ ಎಂದರು. ಸಾಕ್ಷ್ಯಾಧಾರಗಳಿದ್ದರೂ ಆಡಳಿತ ಕ್ರಮ ಕೈಗೊಂಡಿಲ್ಲ. ಆ ನಂತರ ಒಬ್ಬ ಪೊಲೀಸ್ ಪೇದೆ ನಮಗೆ ಸಹಾಯ ಮಾಡಿದರು. ಅವರು, “ನಿಮ್ಮ ಬಳಿ ಇಂದು ರಾತ್ರಿ ಇದೆ, ನಿಮ್ಮ ಬಳಿ ದಾಖಲೆಗಳಿವೆ, ಅವುಗಳನ್ನು ಬಳಸಿ.” ಅದರ ನಂತರ ನಾವು ಗೋರಿಯನ್ನು ಕೇಸರಿ ಮಾಡಿದೆವು. ನಂತರ ಅಲ್ಲಿ ೫ ಸಾವಿರ ಹಿಂದೂಗಳು ತೀರ್ಥಯಾತ್ರೆಗೆ ಬಂದರು.

೪. ಮುಸಲ್ಮಾನ ಬಾಹುಳ್ಯವಿರುವ ಪ್ರದೇಶವೊಂದರಲ್ಲಿ ಹಿಂದೂಗಳ ೨೭ ಮನೆಗಳು ಮತ್ತು ಮುಸ್ಲಿಮರ ೨೦೦ ಮನೆಗಳಿದ್ದವು. ಅಲ್ಲಿನ ಪರಿಸ್ಥಿತಿಯೇ ಬೇರೆಯಾಗಿತ್ತು. ಹಳ್ಳಿಯ ನದಿಯ ಬಳಿ ಹಿಂದೂಗಳ ಸ್ಥಳವಿತ್ತು. ಅಲ್ಲಿಯ ೧ ಎಕರೆ ಭೂಮಿಯನ್ನು ಮುಸಲ್ಮಾನರಿಗೆ ಮಾರಾಟ ಮಾಡಿದ ನಂತರ ಮುಸಲ್ಮಾನರು ೫ ಎಕರೆ ಭೂಮಿಯನ್ನು ಅತಿಕ್ರಮಿಸಿ ಅಲ್ಲಿ ಕಟ್ಟಡ ನಿರ್ಮಿಸಲು ಪ್ರಾರಂಭಿಸಿದರು. ಆ ಸ್ಥಳದಲ್ಲಿ ಮಸೀದಿಯೊಂದನ್ನು ನಿರ್ಮಿಸಲಾಯಿತು. ಪುರಸಭೆಯು ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಪುಣೆಯ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸಲಾಯಿತು. ನನ್ನ ನ್ಯಾಯವಾದಿ ಹಿಂದುತ್ವನಿಷ್ಠ ಸಂಘಟನೆಗೆ ಸೇರಿದವರಿದ್ದರು. ಅವರಿಗೆ ಎಲ್ಲ ನೈಜ ದಾಖಲೆಗಳನ್ನು ನೀಡಿದ್ದೆ. ನಂತರ ನನ್ನ ಪ್ರಕರಣವನ್ನು ವಜಾಗೊಳಿಸಲಾಯಿತು; ಆದರೆ, ನ್ಯಾಯವಾದಿಗಳು ನನ್ನ ದಾಖಲೆಗಳನ್ನು ಹಿಂದಿರುಗಿಸಲಿಲ್ಲ. ಆ ನ್ಯಾಯವಾದಿಗಳು ಮೋಸ ಮಾಡಿದರು. ಆದರೂ ನಾನು ಮತ್ತೆ ಎಲ್ಲ ದಾಖಲೆಗಳನ್ನು ಸಂಗ್ರಹಿಸಿ ಪ್ರಕರಣ ದಾಖಲಿಸಿದ್ದೇನೆ.

ಮತಾಂಧರು ಅವರ ಕೆಲಸವನ್ನು ಮಾಡಿದರೆ, ನಾವು ನಮ್ಮ ಕೆಲಸವನ್ನು ಮಾಡಬೇಕು. ಮತಾಂಧರ ಕೃತ್ಯಗಳನ್ನು ಹಿಂದೂಗಳು ನಿರ್ಭಯವಾಗಿ ವಿರೋಧಿಸಬೇಕು ಮತ್ತು ನಮ್ಮಂತಹ ೧೦೦ ಕಾರ್ಯಕರ್ತರನ್ನು ರೂಪಿಸಬೇಕು ಎಂದು ಹೇಳಿದರು !

೨. ಹಿಂದೂ ಸಮಾಜವು ಸರಕಾರ ಮತ್ತು ನಾಯಕರನ್ನು ಅವಲಂಬಿಸದೆ ತಮ್ಮ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು ! – ನ್ಯಾಯವಾದಿ ಪ್ರಸೂನ ಮೈತ್ರಾ, ಸಂಸ್ಥಾಪಕ, ‘ಆತ್ಮದೀಪ’, ಕೋಲಕಾತಾ, ಬಂಗಾಳ

ನ್ಯಾಯವಾದಿ ಶ್ರೀ. ಪ್ರಸೂನ ಮೈತ್ರಾ

‘ಬಂಗಾಳದಲ್ಲಿ ಹಿಂದೂಗಳ ರಕ್ಷಣೆಗೆ ಕಾನೂನು ಹಾಗೂ ಸಂಘಟನಾತ್ಮಕ ಹಂತದಲ್ಲಿ ಮಾಡಿದ ಪ್ರಯತ್ನಗಳು’ ಈ ವಿಷಯದ ಕುರಿತು ಮಾತನಾಡುತ್ತಾ ಪ್ರಸೂನ ಮೈತ್ರಾ ಇವರು, “ಬಂಗಾಳದಲ್ಲಿ ನೇಪಾಳ, ಭೂತಾನ್ ಮತ್ತು ಬಾಂಗ್ಲಾದೇಶದ ಗಡಿಗಳಿವೆ. ಆದ್ದರಿಂದ ಮತಾಂಧರು ಇದರ ಮೂಲಕ ನುಸುಳುತ್ತಿದ್ದಾರೆ. ಬಾಂಗ್ಲಾದೇಶದಿಂದ ಬಂಗಾಳದಲ್ಲಿ ಪ್ರತಿದಿನ ನುಸುಳುವಿಕೆ ನಡೆಯುತ್ತಿದೆ. ಅವರಲ್ಲಿ ಹಿಂದೂಗಳ ಜೊತೆಗೆ ಹೆಚ್ಚಿನವರು ಮುಸಲ್ಮಾನರಾಗಿದ್ದಾರೆ. ೨೦೧೨ರಲ್ಲಿ ಬಂಗಾಳದ ೩ ಜಿಲ್ಲೆಗಳು ಮುಸ್ಲಿಂ ಪ್ರಾಬಲ್ಯ ಹೊಂದಿದ್ದು, ೭ ಜಿಲ್ಲೆಗಳಲ್ಲಿ ಮುಸಲ್ಮಾನರ ಸಂಖ್ಯೆ ಹೆಚ್ಚಾಗಿದೆ. ಮುಂದೆ ಅವರು ಪ್ರತ್ಯೇಕ ರಾಜ್ಯಕ್ಕೆ ಬೇಡಿಕೆ ಇಟ್ಟಾಗ ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು. ೯೦ರ ದಶಕದಲ್ಲಿ ಕಾಶ್ಮೀರದಲ್ಲಿ ಹಿಂದೂಗಳ ದೊಡ್ಡ ನರಮೇಧ ನಡೆದಿತ್ತು. ಅದೇ ರೀತಿ ಬಂಗಾಳದಲ್ಲಿ ಆಗುತ್ತಿದೆ. ಬಂಗಾಳದ ಮುರ್ಷಿದಾಬಾದ್ ಮತ್ತು ಹಾವಡಾದಂತಹ ನಗರಗಳಲ್ಲಿ ಮತಾಂಧರು ಪೊಲೀಸರು ಮತ್ತು ಸೈನ್ಯವೂ ಕ್ರಮ ಕೈಗೊಳ್ಳಲು ಸಾಧ್ಯವಾಗದಂತಹ ವಾತಾವರಣವನ್ನು ಸೃಷ್ಟಿಸಿದ್ದಾರೆ. ಹಿಂದೂಗಳು ಸರಕಾರದ ಮೇಲೆ ಅವಲಂಬಿತರಾಗಿದ್ದಾರೆ. ‘ದೊಡ್ಡ ನಾಯಕರು ಏನಾದರೂ ಮಾಡುತ್ತಾರೆ’, ಎಂದು ಅವರು ಆಸೆ ಇಟ್ಟಿದ್ದಾರೆ. ಮತ್ತು ತಮ್ಮ ಸಾಮಾಜಿಕ ಜವಾಬ್ದಾರಿಗಳನ್ನು ಕಡಿಮೆ ಮಾಡುತ್ತಿದ್ದಾರೆ. ಹಿಂದೂ ಸಮಾಜ ಕ್ರಮೇಣ ಬಲಿಷ್ಠವಾಗಬೇಕು. ‘ಅವರು ಕೇವಲ ಪೂಜೆ ಮಾಡುತ್ತಾರೆ, ಅವರು ಧಾರ್ಮಿಕರು’ ಎಂದಲ್ಲ ಬದಲಾಗಿ ಸದೃಢ ಸಮಾಜವಾಗಬೇಕೆಂದು ನಾವು ಬಯಸುತ್ತೇವೆ. ಹಿಂದೂಗಳು ಸಾಮಾಜಿಕ ಹೊಣೆಗಾರಿಕೆಯನ್ನೂ ಪರಿಗಣಿಸುವುದು ಅಗತ್ಯವಾಗಿದೆ” ಎಂದು ಹೇಳಿದರು.