`ಆಲ್ ಇಂಡಿಯಾ ಲೀಗಲ ಎಡ್ ಫೋರಮ’ ಹಾಗೂ `ಅಖಿಲ ಭಾರತೀಯ ಬಾರ ಅಸೋಸಿಯೇಶನ’ನ ಮಹಾಸಚಿವರಾದ ನ್ಯಾಯವಾದಿ ಜಯದೀಪ ಮುಖರ್ಜಿಯವರ ವತಿಯಿಂದ ಜೂನ ೧೪ರಂದು ಹಿಂದೂ ಜನಜಾಗೃತಿ ಸಮಿತಿಯ ಧರ್ಮಪ್ರಚಾರಕರಾದ ಪೂ. ನೀಲೇಶ ಸಿಂಗಬಾಳ, ಪೂರ್ವೋತ್ತರ ಭಾರತ ಸಮನ್ವಯಕರಾದ ಶ್ರೀ. ಶಂಭೂ ಗವಾರೆ, ಮಹಾರಾಷ್ಟ್ರ ಹಾಗೂ ಛತ್ತೀಸಗಡ ರಾಜ್ಯದ ಸಂಘಟಕರಾದ ಶ್ರೀ. ಸುನೀಲ ಘನವಟ, ಸನಾತನ ಸಂಸ್ಥೆಯ ವಕ್ತಾರರಾದ ಕು. ಕೃತಿಕಾ ಖತ್ರಿ ಹಾಗೂ ಹಿಂದೂ ವಿಧಿಜ್ಞ ಪರಿಷತ್ತಿನ ಸಂಘಟಕರಾದ ನ್ಯಾಯವಾದಿ ನೀಲೇಶ ಸಾಂಗೋಲಕರ ಇವರೆಲ್ಲರ ಸತ್ಕಾರ ಮಾಡಲಾಯಿತು.
ವೈಶಿಷ್ಠ್ಯ ಪೂರ್ಣ
೧. ಪೂ. (ನ್ಯಾಯವಾದಿ) ಹರಿ ಶಂಕರ ಜೈನರಿಗೆ ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ಕುರಿತಾಗಿರುವ ಭಾವ !
ಜೂನ ೧೪ರಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿಗಳಾದ ಪೂ. (ನ್ಯಾಯವಾದಿ) ಹರಿ ಶಂಕರ ಜೈನರವರು ತಮ್ಮ ಭಾಷಣವನ್ನು ಆರಂಭಿಸುವ ಮೊದಲು ಪರಾತ್ಪರ ಗುರು ಡಾ. ಆಠವಲೆಯವರಿಗೆ ವಂದಿಸಿ `ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ಪ್ರೇರಣೆಯಿಂದಲೇ ನಾವು ಒಂದು ಸೇರಿದ್ದೇವೆ. ಜಗತ್ತಿನ ಇತಿಹಾಸ ಹಾಗೂ ಭೂಗೋಳವನ್ನು ಬದಲಾಯಿಸುವ ಪರಾತ್ಪರ ಗುರು ಡಾ. ಆಠವಲೆಯವರಿಗೆ ನಮಸ್ಕಾರ’, ಎಂದು ಭಾವಪೂರ್ಣವಾಗಿ ನಮಸ್ಕರಿಸಿದರು.
೨. ಮಧ್ಯಪ್ರದೇಶದಲ್ಲಿನ `ಅಯೋಧ್ಯಾ ಫೌಂಡೇಶನ’ನ ಅಧ್ಯಕ್ಷೆಯಾದ ಮೀನಾಕ್ಷಿ ಶರಣರವರು ಶ್ರೀ ಕೇದಾರನಾಥ ಹಾಗೂ ಶ್ರೀ ಬದ್ರೀನಾಥ ಈ ದೇವತೆಗಳ ಚರಣಗಳಲ್ಲಿ ಅರ್ಪಿಸಲಾದ ಚೈತನ್ಯಮಯ ಪುಷ್ಪಗಳನ್ನು ಪ್ರಸಾದರೂಪದಲ್ಲಿ ಅಧಿವೇಶನದ ಆಯೋಜಕರಿಗೆ ಒಪ್ಪಿಸಿದರು.
೩. ಅಮೇರಿಕಾದಲ್ಲಿನ ಕ್ಯಾಲಿಫೋರ್ನಿಯಾದ ಉದ್ಯಮಿ ಹಾಗೂ `ಸೆಂಟೊಲಾಜಿ’ ಯೂ ಟ್ಯೂಬ ವಾಹಿನಿಯ ಸಂಪಾದಕರಾದ ಶ್ರೀ. ಆದಿತ್ಯ ಸತ್ಸಂಗಿಯವರು ೮ ದಿನಗಳಿಗಾಗಿ ಭಾರತಕ್ಕೆ ಬಂದಿದ್ದಾರೆ. ಅವರು ಜಿಜ್ಞಾಸೆಯಿಂದಾಗಿ ಸಮಯ ಮಾಡಿಕೊಂಡು ಅಖಿಲ ಭಾರತೀಯ ಹಿಂದೂ ರಾಷ್ಟç ಅಧಿವೇಶನದಲ್ಲಿ ಉಪಸ್ಥಿತರಿದ್ದರು.