ಹಿಂದುತ್ವವಾದಿಗಳನ್ನು ಸುಳ್ಳು ಆರೋಪಗಳಲ್ಲಿ ವಿನಾಕಾರಣ ಸಿಲುಕಿಸುವವರನ್ನು ಖಂಡಿಸಿದ ದಶಮ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ!

ದಶಮ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ! : ೨ನೆ ದಿನ

ನ್ಯಾಯವಾದಿ ನಾಗೇಶ ಜೋಶಿ

ಹಿಂದೂ ಧರ್ಮದ ವಿರುದ್ಧ ಬರೆಯುವ ಪ್ರಸಾರಮಾಧ್ಯಮಗಳು ನ್ಯಾಯಾಲಯದಲ್ಲಿ ಉತ್ತರಿಸಬೇಕಾಗುತ್ತದೆ ! – ನ್ಯಾಯವಾದಿ ನಾಗೇಶ ಜೋಶಿ, ಕಾರ್ಯದರ್ಶಿ, ಹಿಂದೂ ವಿಧಿಜ್ಞ ಪರಿಷತ್ತು, ಗೋವಾ

ರಾಮನಾಥಿ, ೧೩ ಜೂನ್ (ವಾರ್ತೆ) – ಘನತೆ ಮತ್ತು ಹಣ ಗಳಿಸಬೇಕಾದಲ್ಲಿ, ಹಿಂದೂ ಧರ್ಮ ಮತ್ತು ಧರ್ಮಾಭಿಮಾನಿಗಳನ್ನು ಟೀಕಿಸಿರಿ’ ಎಂಬ ಕುತಂತ್ರವು ಇತ್ತೀಚೆಗೆ ಬಹುದೊಡ್ಡ ಪ್ರಮಾಣದಲ್ಲಿ ಬೆಳೆದಿದೆ. `ಮಾಧ್ಯಮಗಳ ಮೂಲಕ ಆಗುವ ಮಾನಹಾನಿಗೆ ಪ್ರತಿಕ್ರಿಯೆ ನೀಡಬಾರದು, ಎಂಬ ನಿಲುವು ಕೆಲವು ಸಂಘಟನೆಗಳದ್ದಾಗಿದೆ. ಆದುದರಿಂದ ಇಂತಹ ಪ್ರಸಾರಮಾಧ್ಯಮಗಳು ಹೆಚ್ಚು ಜನಪ್ರಿಯವಾಗಿವೆ; ಆದರೆ ಸನಾತನ ಸಂಸ್ಥೆಯು ಆರಂಭದಿಂದಲೇ ಇಂತಹ ಪ್ರಸಾರಮಾಧ್ಯಮಗಳ ವಿರುದ್ಧ ಕಾನೂನುರೀತ್ಯಾ ಹೋರಾಡುವ ನಿಲುವನ್ನು ತೆಗೆದುಕೊಂಡಿದೆ. ಹಿಂದೂ ಧರ್ಮದ ವಿರುದ್ಧ ಬರೆಯುವ ಪ್ರಸಾರಮಾಧ್ಯಮಗಳು ನ್ಯಾಯಾಲಯದಲ್ಲಿ ಉತ್ತರ ನೀಡಬೇಕಾಗುತ್ತದೆ, ಎಂದು ಹಿಂದೂ ವಿಧಿಜ್ಞ ಪರಿಷತ್ತಿನ ಕಾರ್ಯದರ್ಶಿ ನ್ಯಾಯವಾದಿ ನಾಗೇಶ ಜೋಶಿಯವರು ಖಂಡತುಂಡವಾಗಿ ಪ್ರತಿಪಾದಿಸಿದರು. ಗೋವಾದ ಶ್ರೀ ರಾಮನಾಥ ದೇವಸ್ಥಾನದ ಶ್ರೀ ವಿದ್ಯಾಧಿರಾಜ ಸಭಾಗೃಹದಲ್ಲಿ ನಡೆಯುತ್ತಿರುವ ದಶಮ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನದಲ್ಲಿ `ಸನಾತನದ ಮೇಲಿನ ಆರೋಪಗಳ ಖಂಡನೆ’ ಈ ವಿಷಯದಲ್ಲಿ ಅವರು ಮಾತನಾಡುತ್ತಿದ್ದರು. ಈ ಸಮಯದಲ್ಲಿ ಹಿಂದೂ ವಿಧಿಜ್ಞ ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷ ನ್ಯಾಯವಾದಿ ವೀರೇಂದ್ರ ಇಚಲಕರಂಜೀಕರ ಇವರು ಸಹ ಸನಾತನದ ಮೇಲಾಗುವ ಆರೋಪಗಳನ್ನು ಖಂಡಿಸಿದರು. `ಹಿಂದುತ್ವವಾದಿಗಳ ಮೇಲಾಗುವ ನಿರರ್ಥಕ ಆರೋಪಗಳಿಗೆ ಇನ್ನು ಮುಂದೆ ಕಾನೂನು ಮಾರ್ಗದಿಂದ ಆದರೆ ಕಠೋರವಾಗಿ ಪ್ರತ್ಯುತ್ತರ ನೀಡಲಾಗುವುದು’, ಎಂಬ ನಿರ್ಧಾರವನ್ನು ಈ ಸಮಯದಲ್ಲಿ ಉಪಸ್ಥಿತರು ತೆಗೆದುಕೊಂಡರು. ಸ್ವಯಂಪ್ರೇರಣೆಯಿಂದ ವಿವಿಧ ಜಯಘೋಷಗಳನ್ನು ನೀಡುತ್ತಾ ಹಿಂದುತ್ವನಿಷ್ಠರನ್ನು ಸಮರ್ಥಿಸಿದರು.
ನ್ಯಾಯವಾದಿ ನಾಗೇಶ ಜೋಶಿಯವರು ಮಾತುಗಳನ್ನು ಮುಂದುವರಿಸುತ್ತಾ, `ಹಿಂದೂ ಧರ್ಮ, ದೇವತೆಗಳ ವಿಡಂಬನೆ ಮಾಡುವ ಮತ್ತು ಸನಾತನ ಸಂಸ್ಥೆಯ ಮೇಲೆ ಸುಳ್ಳು ಆರೋಪವನ್ನು ಹೇರಿದ ೫೦ ಕ್ಕಿಂತ ಹೆಚ್ಚು ಪ್ರಸಾರಮಾಧ್ಯಮಗಳ ವಿರುದ್ಧ ನಾವು ನ್ಯಾಯಾಲಯದಲ್ಲಿ ಮೊಖದ್ದಮೆಯನ್ನು ದಾಖಲಿಸಿದ್ದೇವೆ. ಹಿಂದೂ ಧರ್ಮ ಮತ್ತು ಸನಾತನ ಸಂಸ್ಥೆಯ ಮಾನಹಾನಿಯನ್ನು ಮಾಡುವ ದೊಡ್ಡ ಮುಖಂಡರ ವಿರುದ್ಧವೂ ನಾವು ನ್ಯಾಯಾಲಯದಲ್ಲಿ ಮೊಖದ್ದಮೆಯನ್ನು ದಾಖಲಿಸಿದ್ದೇವೆ. ಇದರಲ್ಲಿ ನಮಗೆ ಯಶವೂ ದೊರಕಿದೆ. ಕೆಲವು ಸಮಾಚಾರಪತ್ರಗಳು ಅಯೋಗ್ಯ ಬರವಣಿಗೆ ಮಾಡಿದ ವಿಷಯದಲ್ಲಿಯೂ ಕ್ಷಮೆಯನ್ನು ಕೇಳಬೇಕಾಯಿತು. ಯಾರು ಸಂವಿಧಾನದ ಹೆಸರಿನಲ್ಲಿ ಸದಾ ಕೂಗಾಡುವರೋ, ಅವರ ವಿರುದ್ಧ ಸಂವಿಧಾನವು ನೀಡಿರುವ ಮಾರ್ಗದಿಂದಲೇ ನಾವು ಹೋರಾಡುತ್ತಿದ್ದೇವೆ. ನ್ಯಾಯಾಂಗದ ಹೋರಾಟವು ಧರ್ಮಜಾಗೃತಿಯ ಒಂದು ಮಾಧ್ಯಮವಾಗಿದೆ”, ಎಂದು ಹೇಳಿದರು.

ಪೂರ್ವಗ್ರಹ ಪೀಡಿತ ತನಿಖೆಯಿಂದ ನಾಪತ್ತೆಯಾಗಿರುವ ಹಿಂದುತ್ವವಾದಿಗಳಿಗೆ ನ್ಯಾಯವನ್ನು ದೊರಕಿಸಿ ಕೊಡಬೇಕಾಗುವುದು ! – ನ್ಯಾಯವಾದಿ ವೀರೇಂದ್ರ ಇಚಲಕರಂಜೀಕರ, ರಾಷ್ಟ್ರೀಯ ಅಧ್ಯಕ್ಷರು, ಹಿಂದೂ ವಿಧಿಜ್ಞ ಪರಿಷದ್

ಹಿಂದುತ್ವವಾದಿಗಳನ್ನು ಸುಳ್ಳು ಆರೋಪಗಳ ಮೂಲಕ ಅನೇಕ ಮೊಕದ್ದಮೆಗಳಲ್ಲಿ ಸಿಲುಕಿಸಲಾಗಿದೆ. ಪ್ರತಿಯೊಂದು ಮೊಕದ್ದಮೆಯಲ್ಲ್ಯಿ ಅಯೋಗ್ಯ ಪದ್ಧತಿಯಿಂದ ತನಿಖೆ ನಡೆಯುತ್ತಿದೆ. ನೀವು ಎಲ್ಲಿ ಬೇಕಾದರೂ ಹೋಗಿ ಇತರರ ಬಳಿ, `ಗೌರಿ ಲಂಕೇಶ ಯಾರು ? ಅವರು ವಿಚಾರವಂತರಾಗಿದ್ದರು, ಎಂದಾದರೆ ಅವರು ಯಾವ ವೈಚಾರಿಕ ಸಂಘರ್ಷ ಮಾಡಿದರು ?’ ಎಂದು ಕೇಳಿದರೆ ಯಾರಿಗೂ ಅವರ ಬಗ್ಗೆ ಏನೂ ಹೇಳಲು ಬರುವುದಿಲ್ಲ; ಏಕೆಂದರೆ ಗೌರಿ ಲಂಕೇಶ ಇವರು ಸಮಾಜಕ್ಕಾಗಿ ಯಾವುದೇ ಕೌಶಲ್ಯದ ಕೆಲಸ ಮಾಡಲೇ ಇಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಗೌರಿ ಲಂಕೇಶ ಇವರು ಅಯೋಗ್ಯ ಪದ್ಧತಿಯಲ್ಲಿ ಲೇಖನವನ್ನು ಬರೆದುದಕ್ಕಾಗಿ ನ್ಯಾಯಾಲಯವು ಅವರಿಗೆ ಶಿಕ್ಷೆಯನ್ನು ವಿಧಿಸಿತ್ತು.

ನ್ಯಾಯವಾದಿ ವೀರೇಂದ್ರ ಇಚಲಕರಂಜೀಕರ

ನ್ಯಾಯವಾದಿ ಇಚಲಕರಂಜಿಕರರು ತಮ್ಮ ಮಾತನ್ನು ಮುಂದುವರೆಸುತ್ತಾ,

೧. ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಮುಸಲ್ಮಾನರನ್ನು ಖುಲಾಸೆಗೊಳಿಸುವ ಮೂಲಕ ಹಿಂದೂಗಳನ್ನು ಸಿಲುಕಿಸಲಾಯಿತು. ಈ ಪ್ರಕರಣದಲ್ಲಿ `ಕೇಸರಿ ಭಯೋತ್ಪಾದನೆ’ಯ ಅಸ್ತಿತ್ವವನ್ನು ಸಾಬೀತುಪಡಿಸುವ ಪ್ರಯತ್ನಗಳು ನಡೆದವು.

೨. `ಡಾ. ದಾಭೋಲ್ಕರ್ ಹತ್ಯೆ ಪ್ರಕರಣದ ತನಿಖೆ ಮುಗಿದಿಲ್ಲ’ ಎಂದು ಹೇಳಿ ಸನಾತನದ ಸಾಧಕ ಶ್ರೀ. ವಿಕ್ರಮ ಭಾವೆ ಅವರನ್ನು ೨ ವರ್ಷಗಳ ಕಾಲ ಸೆರೆಮನೆಯಲ್ಲಿ ಇರಿಸಲಾಗಿತ್ತು.

೩. ಹಿಂದೂ ವಿಧಿಜ್ಞ ಪರಿಷತ್ತಿನ ರಾಷ್ಟ್ರೀಯ ಕಾರ್ಯದರ್ಶಿ ಮತ್ತು ಖ್ಯಾತ ನ್ಯಾಯವಾದಿ ಸಂಜೀವ ಪುನಾಳೆಕರ ಅವರನ್ನು ಬಂಧಿಸಿ ೪೨ ದಿನಗಳ ಕಾಲ ಸೆರೆಮನೆಯಲ್ಲಿ ಇರಿಸಲಾಗಿತ್ತು.

೪. ಕಾ. ಗೋವಿಂದ ಪನ್ಸಾರೆ ಹತ್ಯೆಯ ಪ್ರಕರಣದಲ್ಲಿ ಸನಾತನದ ಸಾಧಕ ಶ್ರೀ. ಸಮೀರ ಗಾಯಕವಾಡ ಅವರನ್ನು ವಿನಾಕಾರಣ ಬಂಧಿಸಲಾಯಿತು. ಶ್ರೀ. ಸಮೀರ ಗಾಯಕವಾಡ ಇವರು ೨೨ ತಿಂಗಳು ಸೆರೆಮನೆಯಲ್ಲಿ ಇದ್ದರು. ಅವರ ಪ್ರಕರಣವನ್ನು ಹೋರಾಡಲು ಕೊಲ್ಹಾಪುರ ನ್ಯಾಯಾಲಯದಲ್ಲಿ ನ್ಯಾಯವಾದಿಗಳು ಮುಂದಾಗಲಿಲ್ಲ; ಆದರೆ ಮರುದಿನ, ಮಹಾರಾಷ್ಟ್ರದಿಂದ ೩೧ ನ್ಯಾಯವಾದಿಗಳು ಸಂಘಟಿತರಾಗಿ ಪ್ರಕರಣದ ಹೋರಾಟಕ್ಕಾಗಿ ಕೊಲ್ಹಾಪುರಕ್ಕೆ ಬಂದರು. ೨೦೧೬ರಲ್ಲಿ ಪೊಲೀಸರು, ಸಮೀರ ಗಾಯಕವಾಡ ಈ ಕೊಲೆ ಮಾಡಿಲ್ಲ, ಸನಾತನದ ಸಾಧಕರಾದ ಸಾರಂಗ ಅಕೋಲಕರ ಮತ್ತು ವಿನಯ ಪವಾರ ಈ ಕೊಲೆ ಮಾಡಿದ್ದಾರೆ ಎಂದು ಹೇಳುತ್ತಾರೆ.

೫. ಕೊಲ್ಹಾಪುರದಿಂದ ಪುಣೆಗೆ ಡಾ. ವೀರೇಂದ್ರಸಿಂಹ ತಾವಡೆ ಅವರನ್ನು ವಾಹನದಿಂದ ಕರೆತಂದ ಬಳಿಕ `ಡಾ. ತಾವಡೆ ಅವರ ಛಾಯಾಚಿತ್ರ ತೆಗೆಯಬೇಕು’ ಎಂದು ಪೊಲೀಸರು ಛಾಯಾಗ್ರಾಹಕರಿಗೆ ತಿಳಿಸಿದರು. ಇದು ನಿಯಮದ ಉಲ್ಲಂಘನೆಯಾಗಿದೆ. ವೃತ್ತಿಯಲ್ಲಿ ಗೌರವಾನ್ವಿತ ಆಧುನಿಕ ವೈದ್ಯರಾಗಿರುವ ವ್ಯಕ್ತಿಯನ್ನು ಉದ್ದೇಶಪೂರ್ವಕ ಅಪಮಾನಿಸಲಾಯಿತು. ಪೊಲೀಸರ ಇಂತಹ ವರ್ತನೆಯಿಂದ ಆಕ್ರೋಶವು ನಿರ್ಮಾಣವಾಗುತ್ತಿದೆ.
ಹೀಗೆ ಅನೇಕ ಪ್ರಕರಣಗಳಲ್ಲಿ ಸನಾತನದ ಸಾಧಕರು ಮತ್ತು ಹಿಂದುತ್ವನಿಷ್ಠರನ್ನು ಸಿಲುಕಿಸಿ ಅವರನ್ನು ವಿನಾಕಾರಣ ಶೋಷಣೆ ಮಾಡಲಾಯಿತು. ಈ ಕುರಿತು ಮಾಧ್ಯಮಗಳು ಸತ್ಯವನ್ನು ವರದಿ ಮಾಡಿಲ್ಲ. ಅವರು ಸುಳ್ಳು ಸುದ್ದಿ ಪ್ರಕಟಿಸಿದ್ದವು.

೬. ೨೦೧೮ರಲ್ಲಿ ನಡೆದ ಗೌರಿ ಲಂಕೇಶ ಹತ್ಯೆ ಪ್ರಕರಣದಲ್ಲಿ ಸಚಿನ್ ಅಂದುರೆ ಮತ್ತು ಶರದ ಕಳಸಕರ ಅವರನ್ನು ಇದರಲ್ಲಿ ಯಾವುದೇ ಸಂಬಂಧವಿಲ್ಲದಿರುವಾಗಲೂ ಬಂಧಿಸಲಾಯಿತು.

ದೇಶದಲ್ಲಿ `ಗಾಂಧಿ ಹತ್ಯೆಯ ನಂತರ ಶಾಂತಿ ನೆಲೆಸಿತ್ತು; ಆದರೆ ಡಾ. ದಾಭೊಲ್ಕರ ಹತ್ಯೆಯ ನಂತರ ದೇಶದ ವಾತಾವರಣ ಹಾಳಾಯಿತು.’ ಎಂಬ ವಾತಾವರಣವನ್ನು ನಿರ್ಮಾಣ ಮಾಡಲಾಗುತ್ತಿದೆ. ೪ ಕಮ್ಯುನಿಸ್ಟರ ಹತ್ಯೆಯಾದೊಡನೆ ದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣ ಮಾಡಲಾಗುತ್ತಿದೆ; ಆದರೆ ಆಗ ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಕಮ್ಯುನಿಸ್ಟರು ೧೪ ಸಾವಿರ ಕ್ಕೂ ಹೆಚ್ಚು ಅಮಾಯಕರನ್ನು ಕೊಂದಿದ್ದಾರೆ. ಅದರ ಬಗ್ಗೆ ಯಾರೂ ಮಾತನಾಡುವುದಿಲ್ಲ. ಹೀಗಾಗಿ ಇಂತಹ ಹಲವು ಪ್ರಕರಣಗಳಲ್ಲಿ ಮೂಲಕ್ಕೆ ಹೋಗಿ ಹೋರಾಟ ನಡೆಸಿ ನ್ಯಾಯ ಪಡೆಯಬೇಕಿದೆ ಎಂದು ಹೇಳಿದರು.