ಎಡದಿಂದ ನ್ಯಾಯವಾದಿ ಶ್ರೀ. ಮದನ ಮೋಹನ ಯಾದವ, ಶ್ರೀ. ಸುಭಾಷ ವೇಲಿಂಗಕರ, ನ್ಯಾಯವಾದಿ ವಿಷ್ಣು ಶಂಕರ ಜೈನ, ಶ್ರೀ. ರಮೇಶ ಶಿಂದೆ ಮತ್ತು ಶ್ರೀ. ಜಯೇಶ ಥಳಿ
ಗೋವಾದಲ್ಲಿ ಧ್ವಂಸಗೊಂಡ ದೇವಾಲಯಗಳ ವಿರುದ್ಧ ನ್ಯಾಯಾಂಗ ಹೋರಾಟಕ್ಕೆ ಪುರಾವೆ ನೀಡುವಂತೆ ಕರೆ !
ರಾಷ್ಟ್ರಮಟ್ಟದಲ್ಲಿ ರಾಮಮಂದಿರ, ಕಾಶಿ, ಮಥುರಾ, ಕುತುಬಮಿನಾರ್, ತಾಜಮಹಲ ಮತ್ತು ಭೋಜಶಾಲಾ ಮಾತ್ರವಲ್ಲದೆ ಸಾವಿರಾರು ದೇವಾಲಯಗಳನ್ನು ಮೊಘಲರು ಮತ್ತು ಪೋರ್ಚುಗೀಸರು ಮುಂತಾದ ದಾಳಿಕೋರರು ಕೆಡವಿದ್ದಾರೆ. ಭಾರತ ಸ್ವತಂತ್ರವಾಯಿತು; ಆದರೆ ಹಿಂದೂಗಳ ಪುರಾತನ ಧಾರ್ಮಿಕಸ್ಥಳಗಳು ವಿದೇಶಿ ಗುಲಾಮಗಿರಿಯಲ್ಲಿ ಉಳಿಯಿತು. ಇದರಿಂದಾಗಿ ದಾಳಿಕೋರರಿಂದ ಧ್ವಂಸಗೊಂಡ ದೇವಾಲಯಗಳ ಪುನರ್ ನಿರ್ಮಾಣಕ್ಕಾಗಿ ಎಲ್ಲಾ ದೇವಾಲಯದ ಸಂಘಟನೆಗಳು, ಭಕ್ತರು, ಅರ್ಚಕರು ಮತ್ತು ಹಿಂದುತ್ವನಿಷ್ಠ ಸಂಘಟನೆಗಳ ಪರವಾಗಿ ರಾಷ್ಟ್ರವ್ಯಾಪಿ ಅಭಿಯಾನವನ್ನು ಪ್ರಾರಂಭಿಸುವ ಸಂಕಲ್ಪ ಮಾಡಲಾಯಿತು. ಇದರಲ್ಲಿ ಗೋವಾದಲ್ಲಿ ಧ್ವಂಸಗೊಂಡ ದೇವಾಲಯಗಳ ಬಗ್ಗೆ ಪುರಾವೆಗಳು ಸಿಕ್ಕಿದ್ದಲ್ಲಿ ಆ ಕುರಿತು ನ್ಯಾಯಾಂಗ ಹೋರಾಟ ಮಾಡಲಾಗುವುದು, ಎಂದು ಗೋವಾದಲ್ಲಿ ನಡೆಯುತ್ತಿರುವ ೧೦ನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನದ ಎರಡನೇ ದಿನದಂದು ನ್ಯಾಯವಾದಿಗಳು ನಿರ್ಧಾರ ಕೈಗೊಂಡರು. ಈ ಹೋರಾಟಕ್ಕೆ ಗೋಮಾಂತಕದ ಜನತೆಯು ತಮ್ಮಲ್ಲಿ ಲಭ್ಯವಿರುವ ಪುರಾವೆಗಳನ್ನು ಹಿಂದೂ ಜನಜಾಗೃತಿ ಸಮಿತಿಗೆ ಒದಗಿಸುವಂತೆ ಶ್ರೀ ರಾಮನಾಥ ದೇವಾಲಯದ ವಿದ್ಯಾಧಿರಾಜ ಸಂಭಾಂಗಣ (ಪೋಂಡಾ , ಗೋವಾ) ದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಲಾಯಿತು.
ಈ ಸಮಯದಲ್ಲಿ ವ್ಯಾಸಪೀಠದ ಮೇಲೆ ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ವಿಷ್ಣು ಶಂಕರ ಜೈನ್, ವಾರಣಾಸಿಯಲ್ಲಿನ ನ್ಯಾಯವಾದಿ ಮದನ ಮೋಹನ ಯಾದವ್, ಗೋವಾದ `ಭಾರತ ಮಾತಾ ಕೀ ಜೈ’ ಸಂಘಟನೆಯ ಸಂಘಚಾಲಕರಾದ ಶ್ರೀ. ಸುಭಾಷ ವೆಲಿಂಗ್ಕರ್, `ಗೋವಾ ಮಂದಿರ ಮಹಾಸಂಘ’ದ ಕಾರ್ಯದರ್ಶಿ ಶ್ರೀ. ಜಯೇಶ ಥಳಿ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆ ಉಪಸ್ಥಿತರಿದ್ದರು.
ಈ ಸಮಯದಲ್ಲಿ ನ್ಯಾಯವಾದಿ ವಿಷ್ಣು ಜೈನ್ ಮಾತನಾಡುತ್ತಾ, ದೇವಸ್ಥಾನಗಳ ಪುನರ್ ನಿರ್ಮಾಣದ ಈ ಅಭಿಯಾನದಲ್ಲಿ ಈ ಕೆಳಗಿನ ಸೂತ್ರಗಳು ನಮ್ಮ ಸಂಶೋಧನೆಯ ಕೇಂದ್ರಬಿಂದುವಾಗಿರುತ್ತವೆ. ಇದರಲ್ಲಿ ವಿವಾದಿತ ಸ್ಥಳದ ಪೌರಾಣಿಕ ಮಹತ್ವ, ನಾಶ ಮಾಡಿರುವ ಐತಿಹಾಸಿಕ ಪುರಾವೆಗಳು, ಖಟ್ಲೆಯ ಇತಿಹಾಸ, ಸಾಕ್ಷಿ ಮತ್ತು ಕಾನೂನುರೀತ್ಯ ಆಧಾರ ಇತ್ಯಾದಿಗಳ ಅಧ್ಯಯನ ಮಾಡಲಾಗುವುದು. ಸಂಶೋಧನೆಯ ಕೊನೆಯಲ್ಲಿ ದೇವಾಲಯಗಳನ್ನು ಕೆಡವಲಾಗಿದೆ ಎಂದು ಸಾಬೀತಾದರೆ, ನಾವು ಅವುಗಳ ಜೀರ್ಣೋದ್ಧಾರಕ್ಕಾಗಿ ನ್ಯಾಯಾಂಗ ಹೋರಾಟವನ್ನು ಪ್ರಾರಂಭಿಸುತ್ತೇವೆ. ಪ್ರಸ್ತುತ ಅನೇಕ ವಿವಾದಿತ ಸ್ಥಳಗಳು ಪುರಾತತ್ವ ಸಮೀಕ್ಷೆ ಇಲಾಖೆಯ ನಿಯಂತ್ರಣದಲ್ಲಿವೆ, ಇದು ಖಾತೆಗಳ ಕಾಯಿದೆ, ೧೯೫೮ ರ ಸೆಕ್ಷನ್ ೧೬ ರ ವಿರುದ್ಧ ಕಾರ್ಯನಿರ್ವಹಿಸುತ್ತಿದೆ. ಓರ್ವ ನಿಜವಾದ ಹಿಂದೂವಾಗಿ, ನಾವು ಅಂತಹ ದೇವಾಲಯಗಳನ್ನು ಪುನರ್ನಿರ್ಮಿಸುವ ಮೂಲಕ ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಪುನರ್‌ಸ್ಥಾಪಿಸಲು ಪ್ರತಿಜ್ಞೆ ಮಾಡುತ್ತಿದ್ದೇವೆ ಎಂದು ಹೇಳಿದರು.
ಈ ವೇಳೆ `ಭಾರತ ಮಾತಾ ಕೀ ಜೈ’ ಸಂಘಟನೆಯ ಗೋವಾ ರಾಜ್ಯ ಸಂಘಚಾಲಕ ಶ್ರೀ. ಸುಭಾಷ ವೇಲಿಂಗ್ಕರ ಇವರು ಮಾತನಾಡುತ್ತಾ, ಪೋರ್ಚುಗೀಸರ ಆಳ್ವಿಕೆಯಲ್ಲಿ ೧ ಸಾವಿರ ಕ್ಕೂ ಹೆಚ್ಚು ದೇವಾಲಯಗಳನ್ನು ಧ್ವಂಸ ಮಾಡಲಾಯಿತು. ಇವುಗಳಲ್ಲಿ ಎರಡು ದೇವಾಲಯಗಳು ಚರ್ಚ್ನ ದಾಳಿಯಿಂದ ಉಳಿದುಕೊಂಡಿವೆ, ಅದರಲ್ಲಿ ಒಂದು ವರೇಣ್ಯಪುರಿ (ವೆರ್ಣಾ) ಮತ್ತು ಇನ್ನೊಂದು ಶ್ರೀ ವಿಜಯದುರ್ಗಾ ದೇವಿಯ ದೇವಾಲಯವಾಗಿದೆ. ಈ ದೇವಸ್ಥಾನಗಳನ್ನು ರಾಜ್ಯ ಪುರಾತತ್ವ ಇಲಾಖೆ ಸಂರಕ್ಷಿತ ಪ್ರದೇಶ ಎಂದು ಘೋಷಿಸಿದ್ದರೂ ಚರ್ಚ್ಗಳು ದೇವಾಲಯದ ಭೂಮಿಯನ್ನು ಕಬಳಿಸುವ ಷಡ್ಯಂತ್ರ ನಡೆಸುತ್ತಿದೆ. ಈ ದಾಳಿಯ ವಿರುದ್ಧ ಹಿಂದೂ ಭಕ್ತರು ಒಗ್ಗೂಡಿ ಹೋರಾಡಬೇಕಾಗಿದೆ ಎಂದು ಹೇಳಿದರು !
ಈ ಅಧಿವೇಶನದ ನೇರ ಪ್ರಸಾರವನ್ನು ಹಿಂದೂ ಜನಜಾಗೃತಿ ಸಮಿತಿಯ ವೆಬ್‌ಸೈಟ್ ‘HinduJagruti.org’ ನಲ್ಲಿ ಮತ್ತು ‘HinduJagruti’ ಈ `ಯೂಟ್ಯೂಬ್’ ಚಾನೆಲ್‌ನಲ್ಲಿ ಮಾಡಲಾಗುತ್ತದೆ.