ಭಾಜಪದಿಂದ ಹರಿಯಾಣಾದ ಪದಾಧಿಕಾರಿ ಅಮಾನತ್ತು

೨೦೧೭ ರಲ್ಲಿ ಮಹಮ್ಮದ್ ಪೈಗಂಬರ್ ಇವರ ವಿರುದ್ಧ ಟ್ವೀಟ್ ಮಾಡಿರುವ ಪ್ರಕರಣದಲ್ಲಿ ಭಾಜಪದಿಂದ ಹರಿಯಾಣಾದ ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದ ಪ್ರಮುಖ ಅರುಣ ಯಾದವ ಇವರನ್ನು ಪಕ್ಷದಿಂದ ಅಮಾನತ್ತುಗೊಳಿಸಲಾಗಿದೆ. ಭಾಜಪದ ಹರಿಯಾಣ ಪ್ರದೇಶ ಅಧ್ಯಕ್ಷ ಒ.ಪಿ. ಧನಖಡ ಇವರು ಈ ಕ್ರಮ ಕೈಕೊಂಡರು.

ಸಿಗರೇಟ ಸೇದುತ್ತಿರುವ ಭಗವಾನ ಶಿವ ಮತ್ತು ಪಾರ್ವತಿ ಇವರ ವೇಶ ಧರಿಸಿರುವ ಪುರುಷರು !

`ಕಾಳಿ’ ಸಾಕ್ಷ್ಯಚಿತ್ರದ ನಿರ್ಮಾಪಕಿ ಲೀನಾ ಮಣಿಮೇಕಲೈ ಇವರು ಅವರ ಆಕ್ಷೇಪಾರ್ಹ ಭಿತ್ತಿಪತ್ರದ ಬಗ್ಗೆ ಕ್ಷಮೆ ಕೋರಲು ನಿರಾಕರಿಸಿರುವಾಗಲೇ ಒಂದು ಹೊಸ ಛಾಯಾಚಿತ್ರ ಪ್ರಸಾರ ಮಾಡಿದ್ದಾರೆ. ಇದರಲ್ಲಿ ಈಗ ಭಗವಾನ ಶಿವ ಮತ್ತು ಪಾರ್ವತಿದೇವಿಯವರ ಅಪಮಾನ ಮಾಡಲಾಗಿದೆ.

ನಾಲೆ ಬಗ್ಗೆ ದೂರು ನೀಡಿದ ನಾಗರಿಕರನ್ನು ಥಳಿಸಿದ ಆಮ ಆದ್ಮಿ ಪಕ್ಷದ ಶಾಸಕ

ಇಲ್ಲಿಯ ಆಮ ಆದ್ಮಿ ಪಕ್ಷದ ಶಾಸಕ ಅಖಿಲೇಶ ತ್ರಿಪಾಠಿಯವರ ವಿರುದ್ಧ ಇಬ್ಬರನ್ನು ಥಳಿಸಿರುವ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ಇಲ್ಲಿನ ಅಶೋಕ ವಿಹಾರ ಪ್ರದೇಶದಲ್ಲಿ ಗುಡ್ಡು ಹಲ್ವಾಯಿ ಹಾಗು ಮಹೇಶ್ ಬಾಬು ಎಂಬವರು ಪೀಡಿತರು. ಗಾಯಗೊಂಡ ಇಬ್ಬರನ್ನೂ ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿಸಿತು.

ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳ ವಿರುದ್ಧ ಮಹಾಭಿಯೋಗಕ್ಕೆ ಸಹಿ ಅಭಿಯಾನ !

‘ಉದಯಪುರ ಘಟನೆಗೆ (ಕನ್ಹೈಯ್ಯಾಲಾಲ್ ಹತ್ಯೆ) ನೂಪುರ್ ಶರ್ಮಾರವರೇ ಕಾರಣ’ ಎಂದು ಹೇಳಿರುವ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ಪಾರಡಿವಾಲಾ ಅವರ ಮೇಲೆ ಮಹಾಭಿಯೋಗ ನಡೆಸುವಂತೆ ಒತ್ತಾಯಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಸಹಿ ಅಭಿಯಾನವನ್ನು ಪ್ರಾರಂಭಿಸಲಾಗುತ್ತಿದೆ.

ಲೀನಾ ಮಣಿಮೇಕಲೈ ವಿರುದ್ಧ ದೆಹಲಿ ಪೊಲೀಸ್ ಆಯುಕ್ತರಲ್ಲಿ ದೂರು

ಶ್ರೀ ಕಾಳಿಮಾತೆಗೆ ಅವಮಾನ ಮಾಡಿದ ಚಿತ್ರ ನಿರ್ಮಾಪಕಿ ಲೀನಾ ಮಣಿಮೇಕಲೈ ವಿರುದ್ಧ ದೆಹಲಿ ಪೊಲೀಸ್ ಆಯುಕ್ತರಲ್ಲಿ ಕ್ರಿಮಿನಲ್ ದೂರು ದಾಖಲಿಸಲಾಗಿದೆ. ಹಿಂದೂಗಳ ಆರಾಧ್ಯ ದೇವತೆಯಾಗಿರುವ ಶ್ರೀ ಮಹಾಕಾಳಿ ಮಾತೆಗೆ ಅವಮಾನ ಮಾಡಿರುವ ಲೀನಾ ಮಣಿಮೇಕಲೈ ಹಾಗೂ ಆಶಾ ಪೊನ್ನಾಚನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯವಾದಿ ಅಮಿತಾ ಸಚ್‌ದೇವ್ ಇವರು ದೂರಿನಲ್ಲಿ ಆಗ್ರಹಿಸಿದ್ದಾರೆ.

ಇಲೆಕ್ಟ್ರಿಕ ವಾಹನಗಳು ಪರಿಸರಕ್ಕೆ ಪೂರಕವಾಗಿಲ್ಲ ! – ಸಂಶೋಧನೆಯ ನಿಷ್ಕರ್ಷ

ಇಲೆಕ್ಟ್ರಿಕ ವಾಹನಗಳು ಪರಿಸರಕ್ಕೆ ಪೂರಕವಾಗಿಲ್ಲವೆಂದು ಒಂದು ಸಂಶೋಧನೆಯ ಮೂಲಕ ಕಂಡು ಬಂದಿದೆ. ಇದರ ಸಾರಾಂಶದಲ್ಲಿ, ಒಂದು ಇಲೆಕ್ಟ್ರಿಕ್ ಚತುಷ್ಚಕ್ರ ವಾಹನಕ್ಕೆ ಉಪಯೋಗಿಸುವ ಕಚ್ಚಾ ಮಾಲು ಭೂಮಿಯಿಂದ ತೆಗೆಯುವಾಗ 4 ಸಾವಿರ 275 ಕಿಲೋ ಕಸ ಮತ್ತು ವಿಕಿರಣಶೀಲ ಅವಶೇಷಗಳು ನಿರ್ಮಾಣವಾಗುತ್ತದೆ.

ಕೇಂದ್ರ ಸರಕಾರ ಅಕ್ಷೇಪಾರ್ಹ ಹೇಳಿಕೆಗಳ ವಿರೋಧದಲ್ಲಿ ಕಾನೂನ ಜಾರಿ ಮಾಡುವ ಸಿದ್ಧತೆಯಲ್ಲಿ

ದೇಶದಲ್ಲಿ ಆಕ್ಷೇಪಾರ್ಹ, ದ್ವೇಷ ಹರಡುವ, ಭಾವನೆ ನೋಯಿಸುವ ಹೇಳಿಕೆಗಳ ಹೆಚ್ಚುತ್ತಿರುವ ಪ್ರಮಾಣವನ್ನು ಗಮನಿಸಿ ಕೇಂದ್ರ ಸರಕಾರ ಒಂದು ಕಠಿಣ ಕಾನೂನ ಜಾರಿ ಮಾಡುವ ಸಿದ್ಧತೆಯಲ್ಲಿ ಇರುವುದಾಗಿ ಹೇಳಲಾಗುತ್ತಿದೆ. ಸಾಮಾಜಿಕ ಮಾಧ್ಯಮಗಳಿಂದ ಈ ಪ್ರಕಾರ ಹೆಚ್ಚಾಗಿ ನಡೆಯುತ್ತಿದೆ ಎಂದು ಕಂಡು ಬಂದಿದೆ.

ಸ್ಯಾಮ್ಸಂಗ್ ಮಾಡಿರುವ ವಿಡಂಬನೆಯಿಂದ ಪಾಕಿಸ್ತಾನದ ಮುಸಲ್ಮಾನರು ಹುಚ್ಚರಾಗಿದ್ದಾರೆ ! – ತಸ್ಲಿಮಾ ನಸರಿನ್

‘ಪಾಕಿಸ್ತಾನದ ಮುಸಲ್ಮಾನರು ಸ್ಯಾಮ್ಸಂಗ್ ಕಂಪನಿ ತಯಾರಿಸಿರುವ ವಿಡಂಬನಾತ್ಮಕ ಕ್ಯೂಆರ್ ಕೋಡ್ ನಿಂದ ಹುಚ್ಚಾಗಿದ್ದಾರೆ. ಸ್ಯಾಮ್ಸಂಗ್ ನ ಕರ್ಮಚಾರಿಗಳನ್ನು ಬಂಧಿಸಲಾಗಿದೆ. ಮನುಷ್ಯನ ಮೂರ್ಖತನ ಅಮರ್ಯಾದಿತವಾಗಿದೆ’ ಎಂದು ಬಾಂಗ್ಲಾದೇಶದ ಮತ್ತು ಪ್ರಸ್ತುತ ಭಾರತದಲ್ಲಿ ವಾಸಿಸುವ ಪ್ರಸಿದ್ಧ ಲೇಖಕಿ ತಸ್ಲಿಮಾ ನಸ್ರೀನ್ ಇವರು ಟ್ವೀಟ್ ಮೂಲಕ ಹೇಳಿದರು.

ನೂಪುರ ಶರ್ಮಾ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ ಅಭಿಪ್ರಾಯಗಳು ಹೊಣೆಗೇಡಿ ಮತ್ತು ಕಾನೂನ ವಿರೋಧಿ !

ಉದಯಪುರದ ಘಟನೆ (ಕನ್ಹೈಯ್ಯಾಲಾಲ್ ಇವರ ಹತ್ಯೆ) ನೂಪುರ ಶರ್ಮಾ ಇವರಿಂದ ನಡೆದಿದೆ, ಇದು ಹೇಗೆ ಸಾಬೀತು ಆಗುವುದು? ಯಾವುದೇ ವಿಚಾರಣೆ ನಡೆಸದೆ, ಸಾಕ್ಷಿಗಳು ಇಲ್ಲದೆ ಮತ್ತು ನೂಪುರ ಶರ್ಮಾ ಇವರ ಪರ ವಾದ ಆಲಿಸಿಕೊಳ್ಳದೆ ಈ ರೀತಿಯ ಅಭಿಪ್ರಾಯ ವ್ಯಕ್ತಪಡಿಸುವುದು ಕೇವಲ ಕಾನೂನುಬಾಹಿರ ಅಲ್ಲದೆ ಅಯೋಗ್ಯವು ಆಗಿದೆ.

ಆಯೋಗದ ಹೇಳಿಕೆಗಳು ಭಾರತೀಯ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಬಗ್ಗೆ ಅಜ್ಞಾನ ತೋರಿಸುತ್ತದೆ ! – ಭಾರತ ಕಟು ಪ್ರತಿಕ್ರಿಯೆ

ಅಮೇರಿಕಾದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗ ಭಾರತದ ವಿಷಯದಲ್ಲಿ ನೀಡಿರುವ ಪಕ್ಷಪಾತಿ ಮತ್ತು ಅಯೋಗ್ಯ ಹೇಳಿಕೆಗಳನ್ನು ನಾವು ಓದಿದ್ದೇವೆ. ಈ ಹೇಳಿಕೆಗಳು ಭಾರತದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಬಗ್ಗೆ ಅಜ್ಞಾನ ತೋರಿಸುತ್ತವೆ.