ಇಲೆಕ್ಟ್ರಿಕ ವಾಹನಗಳು ಪರಿಸರಕ್ಕೆ ಪೂರಕವಾಗಿಲ್ಲ ! – ಸಂಶೋಧನೆಯ ನಿಷ್ಕರ್ಷ

ನವದೆಹಲಿ – ಇಲೆಕ್ಟ್ರಿಕ ವಾಹನಗಳು ಪರಿಸರಕ್ಕೆ ಪೂರಕವಾಗಿಲ್ಲವೆಂದು ಒಂದು ಸಂಶೋಧನೆಯ ಮೂಲಕ ಕಂಡು ಬಂದಿದೆ. ಇದರ ಸಾರಾಂಶದಲ್ಲಿ, ಒಂದು ಇಲೆಕ್ಟ್ರಿಕ್ ಚತುಷ್ಚಕ್ರ ವಾಹನಕ್ಕೆ ಉಪಯೋಗಿಸುವ ಕಚ್ಚಾ ಮಾಲು ಭೂಮಿಯಿಂದ ತೆಗೆಯುವಾಗ 4 ಸಾವಿರ 275 ಕಿಲೋ ಕಸ ಮತ್ತು ವಿಕಿರಣಶೀಲ ಅವಶೇಷಗಳು ನಿರ್ಮಾಣವಾಗುತ್ತದೆ.

1. ಒಂದು ವೇಳೆ ಇದ್ದಲಿನ ವಿದ್ಯುತ್ ಮೂಲಕ ಇಲೆಕ್ಟ್ರಿಕ್ ವಾಹನಗಳಿಗೆ ಶಕ್ತಿ ಸಂಚಯಿಸಿ ಒಂದೂವರೆ ಲಕ್ಷ ಕಿಲೋಮೀಟರ ನಡೆಸಿದರೆ, ಪೆಟ್ರೋಲ ವಾಹನಕ್ಕಿಂತ ಕೇವಲ ಶೇ. 20 ರಷ್ಟು ಕಡಿಮೆ ಇಂಗಾಲಾಮ್ಲ ನಿರ್ಮಾಣವಾಗುವುದು. ಭಾರತದಲ್ಲಿ ಶೇ. 70 ರಷ್ಟು ವಿದ್ಯುತ್ ಇದ್ದಲಿನಿಂದ ನಿರ್ಮಾಣವಾಗುತ್ತದೆ.

2. ಆಸ್ಟ್ರೇಲಿಯಾದಲ್ಲಿ ನಿಡೆಸಿರುವ ಸಂಶೋಧನೆಯ ಪ್ರಕಾರ 3 ಸಾವಿರ 300 ಟನ ಲಿಥಿಯಂ ಕಸದಲ್ಲಿ ಕೇವಲ ಶೇ. 2 ಮರುಬಳಕೆ ಮಾಡಲಾಗುತ್ತದೆ. ಶೇ. 98 ರಷ್ಟು ಮಾಲಿನ್ಯ ಹರಡುತ್ತದೆ. ಲಿಥಿಯಂ ಜಗತ್ತಿನ ಅತ್ಯಧಿಕ ಹಗುರವಾದ ಧಾತುವಾಗಿದೆ. ಇದನ್ನು ಈ ಇಲೆಕ್ಟ್ರಿಕ ವಾಹನದ ಬ್ಯಾಟರಿಯಲ್ಲಿ ಉಪಯೋಗಿಸಲಾಗುತ್ತದೆ. ಲಿಥಿಯಂ ಪರಿಸರಕ್ಕೆ ಪೂರಕವೆಂದು ಪರಿಗಣಿಸಲಾಗುತ್ತದೆ; ಆದರೆ ಅದನ್ನು ಭೂಮಿಯಿಂದ ತೆಗೆಯುವುದು ಪರಿಸರಕ್ಕೆ 3 ಪಟ್ಟು ಅಧಿಕ ವಿಷಕಾರಿಯಾಗಿದೆ.

3. ಸಂಶೋಧಕರ ಅಭಿಪ್ರಾಯದಂತೆ ಜಗತ್ತಿನಲ್ಲಿ ಸುಮಾರು 200 ಕೋಟಿ ವಾಹನಗಳಿವೆ. ಇದರಲ್ಲಿ ಕೇವಲ 1 ಕೋಟಿ ಇಲೆಕ್ಟ್ರಿಕ್ ವಾಹನಗಳಿವೆ, ಒಂದು ವೇಳೆ ಎಲ್ಲ 200 ಕೋಟಿ ವಾಹನಗಳು ಇಲೆಕ್ಟ್ರಿಕ್ ಆದರೆ, ಅದನ್ನು ನಿರ್ಮಾಣ ಮಾಡುವಾಗ ಆಗುವ ಕಸದ ವಿಲೇವಾರಿಗೆ ಬೇಕಾಗುವಷ್ಟು ಸಾಧನಸೌಕರ್ಯಗಳು ಉಪಲಬ್ಧವಿಲ್ಲ.