ನಾಲೆ ಬಗ್ಗೆ ದೂರು ನೀಡಿದ ನಾಗರಿಕರನ್ನು ಥಳಿಸಿದ ಆಮ ಆದ್ಮಿ ಪಕ್ಷದ ಶಾಸಕ

ಹೊಸ ದೆಹಲಿ – ಇಲ್ಲಿಯ ಆಮ ಆದ್ಮಿ ಪಕ್ಷದ ಶಾಸಕ ಅಖಿಲೇಶ ತ್ರಿಪಾಠಿಯವರ ವಿರುದ್ಧ ಇಬ್ಬರನ್ನು ಥಳಿಸಿರುವ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ಇಲ್ಲಿನ ಅಶೋಕ ವಿಹಾರ ಪ್ರದೇಶದಲ್ಲಿ ಗುಡ್ಡು ಹಲ್ವಾಯಿ ಹಾಗು ಮಹೇಶ್ ಬಾಬು ಎಂಬವರು ಪೀಡಿತರು. ಗಾಯಗೊಂಡ ಇಬ್ಬರನ್ನೂ ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿಸಿತು. ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಇಬ್ಬರು ತಿಂಡಿ ವಿತರಿಸುತ್ತಿದ್ದಾಗ ಈ ಘಟನೆ ನಡೆದಿದೆ. ಇಲ್ಲಿ ತ್ರಿಪಾಠಿಯವರನ್ನು ಭೇಟಿಯಾದ ನಂತರ ಗುಡ್ಡು ಅವರಿಗೆ ನಾಲೆಯ ಬಗ್ಗೆ ದೂರು ನೀಡಿದ್ದರು. ಇದರಿಂದ ಅಸಮಾಧಾನಗೊಂಡ ಶಾಸಕರು ಇಟ್ಟಿಗೆಗಳಿಂದ ಹಲ್ಲೆ ನಡೆಸಿದ್ದಾರೆ. ಗುಡ್ಡುವನ್ನು ರಕ್ಷಿಸಲು ಹೋದ ಮಹೇಶ ಬಾಬು ಮೇಲೂ ತ್ರಿಪಾಠಿ ಹಲ್ಲೆ ನಡೆಸಿದ್ದಾರೆ.

ಸಂಪಾದಕೀಯ ನಿಲುವು

ಇದು ಆಮ ಆದ್ಮಿ ಪಕ್ಷದ ನಿಜ ಸ್ವರೂಪ! ಜನಾಂದೋಲನದ ಮೂಲಕ ರೂಪುಗೊಂಡ ಪಕ್ಷವೂ ಇತರ ರಾಜಕೀಯ ಪಕ್ಷಗಳಂತೆ ಜನ ವಿರೋಧಿ ಎಂಬುದು ಸ್ಪಷ್ಟವಾಗುತ್ತಿದೆ!