ಅಮೇರಿಕಾದ ಧಾರ್ಮಿಕ ಸ್ವಾತಂತ್ರ್ಯ ಆಯೋಗದ ಭಾರತ ವಿರೋಧಿ ಹೇಳಿಕೆಗಳ ವಿಷಯ
ಹೊಸ ದೆಹಲಿ – ಅಮೇರಿಕಾದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗ ಭಾರತದ ವಿಷಯದಲ್ಲಿ ನೀಡಿರುವ ಪಕ್ಷಪಾತಿ ಮತ್ತು ಅಯೋಗ್ಯ ಹೇಳಿಕೆಗಳನ್ನು ನಾವು ಓದಿದ್ದೇವೆ. ಈ ಹೇಳಿಕೆಗಳು ಭಾರತದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಬಗ್ಗೆ ಅಜ್ಞಾನ ತೋರಿಸುತ್ತವೆ. ದುರ್ದೈವದಿಂದ ಈ ಆಯೋಗ ಯಾವುದೋ ಒಂದು ಪೂರ್ವಾಗ್ರಹವನ್ನು ಹಿಡಿದು ಹೇಳಿಕೆ ನೀಡುತ್ತದೆ ಮತ್ತು ವರದಿಯಲ್ಲಿ ಸತತವಾಗಿ ತಪ್ಪು ಸೂತ್ರಗಳನ್ನು ಮಂಡಿಸುತ್ತದೆ ಎಂಬ ಕಟುವಾದ ಶಬ್ದಗಳಲ್ಲಿ ಭಾರತ ಪ್ರತಿಕ್ರಿಯೆಸಿದೆ. ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ ಬಾಗಚಿ ಇವರು ಈ ಆಯೋಗದ ಹೇಳಿಕೆಗೆ ಪ್ರತ್ಯುತ್ತರ ನೀಡಿದೆ. ಈ ಆಯೋಗವು ಭಾರತದಲ್ಲಿನ ಅಲ್ಪಸಂಖ್ಯಾತರ ನರಸಂಹಾರ ನಡೆಯಬಹುದು, ಎಂದು ಹೇಳಿಕೆ ನೀಡಿತ್ತು.
Our response to media queries on comments on India by USCIRF:https://t.co/VAuSPs5QSQ pic.twitter.com/qXnwSOA49K
— Arindam Bagchi (@MEAIndia) July 2, 2022